ಶಿವಮೊಗ್ಗ:ವೆಂಟಿಲೇಟರ್ ಸಿಗದೆ ಪರದಾಟ ನಡೆಸಿ ಕೊರೊನಾ ಸೋಂಕಿತ ವ್ಯಕ್ತಿ ಸಾವನ್ನಪ್ಪಿರುವ ಘಟನೆ ನಗರದ ಮೆಗ್ಗಾನ್ ಆಸ್ಪತ್ರೆಯಲ್ಲಿ ನಡೆದಿದೆ.
ಶಿವಮೊಗ್ಗ: ವೆಂಟಿಲೇಟರ್ ಬೆಡ್ ಸಿಗದೆ ಕೊರೊನಾ ಸೋಂಕಿತ ಸಾವು - ವೆಂಟಿಲೇಟರ್ ಸಿಗದೆ ಎರಡು ಗಂಟೆ ಒದ್ದಾಡಿ ಕೊರೊನಾ ಸೋಂಕಿತ ಸಾವು
ನಗರದ ಮೆಗ್ಗಾನ್ ಆಸ್ಪತ್ರೆಯಲ್ಲಿ ಸರಿಯಾದ ಸಮಯಕ್ಕೆ ವೆಂಟಿಲೇಟರ್ ಬೆಡ್ ಸಿಗದೆ ಎರಡು ಗಂಟೆ ಒದ್ದಾಡಿ ಕೊರೊನಾ ಸೋಂಕಿತ ಸಾವನ್ನಪ್ಪಿರುವ ದಾರುಣ ಘಟನೆ ನಡೆದಿದೆ.
ಕೊರೊನಾ ಸೋಂಕಿತ ಸಾವು
ಶಿಕಾರಿಪುರದ ಆನಂದ್(45) ಮೃತಪಟ್ಟಿರುವ ವ್ಯಕ್ತಿ. ಕೋವಿಡ್ ದೃಢಪಟ್ಟ ಕಾರಣ ಇವರು ಶನಿವಾರ ಸಂಜೆ ಮೆಗ್ಗಾನ್ ಆಸ್ಪತ್ರೆಗೆ ದಾಖಲಾಗಿದ್ದರು. ಈ ವೇಳೆ ಇವರಿಗೆ ಎರಡು ಗಂಟೆಗಳ ಕಾಲ ವೆಂಟಿಲೇಟರ್ ಸಿಗಲಿಲ್ಲ. ಪರಿಣಾಮ, ಸಾವನ್ನಪ್ಪಿದ್ದಾರೆ ಎಂದು ಕುಟುಂಬ ಸದಸ್ಯರು ಆರೋಪಿಸಿದ್ದಾರೆ.
ಇದನ್ನೂ ಓದಿ : ಶೇ.100 ರಷ್ಟು ರೋಗಿಗಳು ಗುಣಮುಖ: ದೇಶಕ್ಕೆ ಮಾದರಿ ಸೂರತ್ನ ಐಸೋಲೇಶನ್ ಕೇಂದ್ರಗಳು
Last Updated : May 9, 2021, 12:16 PM IST