ಶಿವಮೊಗ್ಗ: ಕೊರೊನಾ ಲಾಕ್ಡೌನ್ನಿಂದ ಬಸ್ಗಳ ಸಂಚಾರ ಸಂಪೂರ್ಣ ಸ್ಥಗಿತಗೊಂಡಿದ್ದು, ಖಾಸಗಿ ಬಸ್ ಮಾಲೀಕರು ತಮ್ಮ ಬಸ್‌ಗಳನ್ನು ನಿಲ್ಲಿಸಲು ನಿಲ್ದಾಣದ ವ್ಯವಸ್ಥೆಯಿಲ್ಲದೆ ಸಾಕಷ್ಟು ಸಮಸ್ಯೆ ಎದುರಿಸುತ್ತಿದ್ದಾರೆ.
ಲಾಕ್ಡೌನ್ ಜಾರಿಯಾದಗಿನಿಂದ ಸಾರಿಗೆ ಇಲಾಖೆ ಬಂದ್ ಆಗಿದ್ದು, ಪರಿಣಾಮ ಬಸ್ಗಳು ನಿಲ್ದಾಣಗಳಲ್ಲೇ ನಿಂತಿವೆ. ಸರ್ಕಾರಿ ಬಸ್ಗಳಿಗೆ ನಿಲ್ದಾಣದ ವ್ಯವಸ್ಥೆಯಿದೆ. ಆದರೆ ಖಾಸಗಿ ಬಸ್ಗಳಿಗೆ ಯಾವುದೇ ಟರ್ಮಿನಲ್ ಸೌಲಭ್ಯವಿಲ್ಲದ ಕಾರಣ ಬಿಸಿಲಿನಲ್ಲೇ ನಿಂತು ಹಾಳಾಗುತ್ತಿವೆ.
ಸುಮಾರು ಒಂದು ತಿಂಗಳಿಂದ ಯಾವುದೇ ಬಸ್ಗಳು ರಸ್ತೆಗಿಳಿದಿಲ್ಲ. ಇದರಿಂದ ಬಸ್ ಮಾಲೀಕರು ಪರದಾಡುತ್ತಿದ್ದಾರೆ. ಇದರ ನಡುವೆ ಕಳ್ಳರಿಂದ ತಮ್ಮ ಬಸ್‌ಗಳನ್ನು ರಕ್ಷಣೆ ಮಾಡಿಕೊಳ್ಳುವುದು ದೊಡ್ಡ ಸವಾಲಾಗಿದೆ. ಬಸ್ಗಳು ಬಿಸಿಲಲ್ಲಿ ನಿಂತಿರುವ ಪರಿಣಾಮ ಟೈಯರ್ಗಳು ಹಾಳಾಗುತ್ತಿವೆ. ಇಂಜಿನ್ಗಳು ತುಕ್ಕು ಹಿಡಿಯುತ್ತಿವೆ. ಬಸ್ಗಳ ಪೇಂಯಿಂಟ್ ಕೂಡ ಹೋಗುತ್ತಿದ್ದು, ಲಾಕ್ಡೌನ್ ಮುಗಿದ ಮೇಲೆ ಬಸ್ಗಳು ರಸ್ತೆಗಿಳಿಯುವುದು ಡೌಟ್ ಅಂತಾನೆ ಹೇಳಬಹುದು.
ಸಂಕಷ್ಟದಲ್ಲಿ ಕಾರ್ಮಿಕರು: