ಶಿವಮೊಗ್ಗ: ಕೊರೊನಾ ಎಫೆಕ್ಟ್ನಿಂದಾಗಿ ಶಿವಮೊಗ್ಗದ ಕೇಂದ್ರ ಕಾರಾಗೃಹದಿಂದ 18 ವಿಚಾರಣಾಧೀನ ಕೈದಿಗಳನ್ನು ಪೆರೋಲ್ ಮೇಲೆ ಬಿಡುಗಡೆ ಮಾಡಲಾಗಿದೆ. ಈಗಾಗಲೇ ರಾಜ್ಯಾದ್ಯಂತ ಇರುವ ಕಾರಾಗೃಹಗಳಿಂದ ಕೈದಿಗಳನ್ನು ಪೆರೋಲ್ ಮೇಲೆ ಬಿಡುಗಡೆ ಮಾಡಲಾಗುತ್ತಿದೆ.
ಶಿವಮೊಗ್ಗದಲ್ಲಿ 18 ವಿಚಾರಣಾಧೀನ ಕೈದಿಗಳ ತಾತ್ಕಾಲಿಕ ಬಿಡುಗಡೆ - corona virus news update
ಕೊರೊನಾ ವೈರಸ್ ಹರಡುವ ಭೀತಿ ಹಿನ್ನೆಲೆ ಶಿವಮೊಗ್ಗದ ಜಿಲ್ಲಾ ಕಾರಾಗೃಹದಿಂದ 18 ವಿಚಾರಣಾಧೀನ ಕೈದಿಗಳನ್ನು ಬಿಡುಗಡೆ ಮಾಡಲಾಗಿದೆ. ಬಿಡುಗಡೆಯಾದ ಕೈದಿಗಳನ್ನು ಪೊಲೀಸರು ಎಸ್ಕಾರ್ಟ್ ಮೂಲಕ ಅವರ ಮನೆಗಳಿಗೆ ತಲುಪಿಸಿದ್ದಾರೆ.
ಕೊರೊನಾ ಎಫೆಕ್ಟ್: 19 ವಿಚಾರಣಾಧೀನ ಖೈದಿಗಳ ತಾತ್ಕಾಲಿಕ ಬಿಡುಗಡೆ
ಕೊರೊನಾ ಸಾಕ್ರಾಮಿಕ ರೋಗವಾಗಿದ್ದು, ಜೈಲುಗಳಂತಹ ಸ್ಥಳಗಳಲ್ಲಿ ಕೊರೊನಾ ಬೇಗ ಹರಡುತ್ತದೆ. ಇದರಿಂದ ಜೈಲು ಹಕ್ಕಿಗಳು ಎರಡು ತಿಂಗಳ ಕಾಲ ಬಿಡುಗಡೆ ಭಾಗ್ಯ ಕಾಣುವಂತೆ ಆಗಿದೆ. ಇದರಿಂದ ಜಿಲ್ಲಾ ನ್ಯಾಯಾಲಯದ ಆದೇಶದ ಮೇರೆಗೆ ಕೇಂದ್ರ ಕಾರಾಗೃಹದ ಮುಖ್ಯ ಅಧೀಕ್ಷಕ ಡಾ. ರಂಗನಾಥ್ ಕೈದಿಗಳನ್ನು ಬಿಡುಗಡೆ ಮಾಡಿದ್ದಾರೆ.