ಶಿವಮೊಗ್ಗ/ ಚಿತ್ರದುರ್ಗ: ಕೊರೊನಾ ವೈರಸ್ ಹರಡುವ ಭೀತಿಯಿಂದ ಸರ್ಕಾರ ಹೊರಡಿಸಿರುವ ಆದೇಶಕ್ಕೆ ಕೆಲವೆಡೆ ಸ್ಪಂದನೆ ಸಿಗುತ್ತಿದ್ದರೆ ಇನ್ನೂ ಕೆಲವೆಡೆ ಸರ್ಕಾರಿ ಸೂಚನೆಯನ್ನು ನಿರ್ಲಕ್ಷಿಸಲಾಗುತ್ತಿದೆ.
ರಾಜ್ಯ ಸರ್ಕಾರದ ಆದೇಶಕ್ಕಿಲ್ಲ ಕಿಮ್ಮತ್ತು: ನಗರಗಳಲ್ಲಿ ಎಂದಿನಂತೆ ತೆರೆದ ಶಾಪಿಂಗ್ ಮಾಲ್‌ಗಳು - State Government Orders
ಮಾರಕ ವೈರಸ್ ಹರಡುವ ಭೀತಿ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ರಾಜ್ಯಾದ್ಯಂತ ಒಂದು ವಾರಗಳ ಕಾಲ ಟಾಕೀಸ್, ಮಾಲ್ ಗಳು, ಸಭೆ, ಸಮಾರಂಭಗಳು ಸೇರಿದಂತೆ ಜನ ಸೇರುವ ಕಾರ್ಯಕ್ರಮಗಳನ್ನು ಬಂದ್ ಮಾಡುವಂತೆ ಸೂಚಿಸಿದ್ದರು.
ಮಾರಕ ವೈರಸ್ ಹರಡುವ ಭೀತಿ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ರಾಜ್ಯಾದ್ಯಂತ ಒಂದು ವಾರಗಳ ಕಾಲ ಟಾಕೀಸ್, ಮಾಲ್ ಗಳು, ಸಭೆ, ಸಮಾರಂಭಗಳು ಸೇರಿದಂತೆ ಜನ ಸೇರುವ ಕಾರ್ಯಕ್ರಮಗಳನ್ನು ಬಂದ್ ಮಾಡುವಂತೆ ಸೂಚಿಸಿದ್ದರು. ಶಿವಮೊಗ್ಗ ನಗರದಲ್ಲಿನ ಕೆಲ ಟಾಕೀಸ್, ಮಾಲ್ ಗಳು ಬಂದ್ ಆಗಿದ್ದರೆ, ಇನ್ನೂ ಕೆಲವರು ಸರ್ಕಾರದ ಆದೇಶವನ್ನು ಲೆಕ್ಕಿಸದೆ ತಮ್ಮ ದಿನನಿತ್ಯದ ವಹಿವಾಟು ಮಂದುವರೆಸಿವೆ. ಇನ್ನೂ ಬಸ್ ನಿಲ್ದಾಣಗಳಲ್ಲಿ ಪ್ರಯಾಣಿಕರ ಸಂಖ್ಯೆ ಕಡಿಮೆಯಾಗಿದ್ದು, ಸಾರಿಗೆ ಸಂಪರ್ಕದಲ್ಲಿ ಭಾರಿ ಇಳಿಮುಖ ಗೋಚರಿಸಿದೆ.
ಸರ್ಕಾರ ಹೊರಡಿಸಿರುವ ಆದೇಶಕ್ಕೆ ಚಿತ್ರದುರ್ಗದಲ್ಲೂ ಕಿಮ್ಮತ್ತಿಲ್ಲದಂತಾಗಿದೆ. ನಗರದಲ್ಲಿರುವ ಬಹುತೇಕ ಶಾಪಿಂಗ್ ಮಾಲ್‌ಗಳು ಸರ್ಕಾರಿ ಆದೇಶವನ್ನು ಗಾಳಿಗೆ ತೂರಿ ಎಂದಿನಂತೆ ತಮ್ಮ ವ್ಯವಹಾರ ಮುಂದುವರೆಸಿವೆ.