ಕರ್ನಾಟಕ

karnataka

By

Published : Jul 11, 2020, 5:21 PM IST

ETV Bharat / state

ವ್ಯಾಪಾರಕ್ಕೆ ಸ್ವಯಂ ನಿರ್ಬಂಧ ಹಾಕಿಕೊಂಡ ಗಾಂಧಿ ಬಜಾರ್​ ವರ್ತಕರು

ಪ್ರತಿನಿತ್ಯ ಶಿವಮೊಗ್ಗದಲ್ಲಿ ಕೊರೊನಾ ಪ್ರಕರಣಗಳು ಹೆಚ್ಚಾಗುತ್ತಿದ್ದು, ಇದನ್ನು ನಿಯಂತ್ರಣ ಮಾಡುವ ಹಿನ್ನೆಲೆಯಲ್ಲಿ ನಗರದ ಗಾಂಧಿ ಬಜಾರ್​ನಲ್ಲಿ ವರ್ತಕರು ವ್ಯಾಪಾರಕ್ಕೆ ಸ್ವಯಂ ನಿರ್ಬಂಧ ಹಾಕಿಕೊಂಡಿದ್ದಾರೆ.

Gandhi Bazaar
ಶಿವಮೊಗ್ಗ ಗಾಂಧಿ ಬಜಾರ್

ಶಿವಮೊಗ್ಗ:ರಾಜ್ಯದಲ್ಲಿ ಕೊರೊನಾ ಹೆಚ್ಚಾಗುತ್ತಿದ್ದು, ರಾತ್ರಿ ಕರ್ಫ್ಯೂ ಹಾಗೂ ಸಂಡೇ ಲಾಕ್​ಡೌನ್​​ ಜಾರಿ ಮಾಡುವ ಮೂಲಕ ನಿಯಂತ್ರಣ ಮಾಡಲು ಸರ್ಕಾರ ಮುಂದಾಗಿದೆ. ಇದರ ನಡುವೆ ನಗರದ ಗಾಂಧಿ ಬಜಾರ್​ನಲ್ಲಿ ವರ್ತಕರು ಸ್ವಯಂ ನಿರ್ಬಂಧ ಹಾಕಿಕೊಂಡಿದ್ದು, ಇತರರಿಗೆ ಮಾದರಿಯಾಗಿದ್ದಾರೆ.

ವ್ಯಾಪಾರಕ್ಕೆ ಸ್ವಯಂ ನಿರ್ಬಂಧ ಹಾಕಿಕೊಂಡ ಗಾಂಧಿ ಬಜಾರ್​ ವರ್ತಕರು

ಜಿಲ್ಲೆಯಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 375 ರ ಗಡಿ ದಾಟಿದ್ದು, ಈ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ಪ್ರತಿದಿನ ಬೆಳಗ್ಗೆ 10 ರಿಂದ ಸಂಜೆ 6 ರವರೆಗೆ ವ್ಯಾಪಾರ-ವಹಿವಾಟಿಗೆ ಅವಕಾಶ ಮಾಡಿಕೊಟ್ಟಿತ್ತು. ಆದರೂ ಸಹ ಕೊರೊನಾ ವೇಗವಾಗಿ ಹರಡುತ್ತಿರುವುದರಿಂದ ಗಾಂಧಿಬಜಾರ್ ವರ್ತಕರ ಸಂಘ ಒಂದು ತಿಂಗಳ ಕಾಲ ಮಾರ್ಕೆಟ್ ಅನ್ನು ಮಧ್ಯಾಹ್ನದ ನಂತರ ಬಂದ್​ ಮಾಡಲು ನಿರ್ಧರಿಸಿದೆ.

ಕಳೆದ ಮೂರು ದಿನದಲ್ಲಿ ಜಿಲ್ಲೆಯಲ್ಲಿ 50 ಕ್ಕೂ ಅಧಿಕ ಪ್ರಕರಣಗಳು ಕಂಡು ಬಂದಿದ್ದು, ಗಾಂಧಿಬಜಾರ್, ಕುಂಬಾರಗುಂಡಿ ಸೇರಿದಂತೆ ಅಕ್ಕ ಪಕ್ಕದ ಏರಿಯಾಗಳಲ್ಲಿ ಕೊರೊನಾ ಪಾಸಿಟಿವ್ ಹೆಚ್ಚಾಗಿ ಕಂಡು ಬರುತ್ತಿದೆ. ಇನ್ನೂ ಗಾಂಧಿಬಜಾರ್​​​ನಲ್ಲಿ 1 ಸಾವಿರಕ್ಕೂ ಅಧಿಕ ಮಳಿಗೆಗಳಿದ್ದು, ಪ್ರತಿನಿತ್ಯ 10 ಸಾವಿರಕ್ಕೂ ಅಧಿಕ ಜನರು ಇಲ್ಲಿಗೆ ಬರುತ್ತಾರೆ.

ಹೀಗಾಗಿ ಮುಂಜಾಗೃತಾ ಕ್ರಮವಾಗಿ ಕೊರೊನಾ ಹರಡುವುದನ್ನು ತಡೆಯಲು ಗಾಂಧಿ ಬಜಾರ್ ವರ್ತಕರ ಸಂಘ ಸ್ವಯಂ ಪ್ರೇರಿತರಾಗಿ ಒಂದು ತಿಂಗಳ ಕಾಲ ಪ್ರತಿನಿತ್ಯ ಬೆಳಗ್ಗೆ 8 ರಿಂದ ಮಧ್ಯಾಹ್ನ 3 ಗಂಟೆಯವರೆಗೆ ವ್ಯಾಪಾರ ಮಾಡಲು ನಿರ್ಧರಿಸಿದೆ. ಮಾತ್ರವಲ್ಲದೇ ಮಾಸ್ಕ್ ಹಾಗೂ ಸ್ಯಾನಿಟೈಸರ್ ಬಳಸದವರೊಂದಿಗೆ ವ್ಯಾಪಾರ ಮಾಡದಿರಲು ನಿರ್ಧರಿಸಿದೆ ಎನ್ನಲಾಗುತ್ತಿದೆ.

ABOUT THE AUTHOR

...view details