ಕರ್ನಾಟಕ

karnataka

ETV Bharat / state

ಶಿವಮೊಗ್ಗ ಜಿಲ್ಲೆಯಲ್ಲಿ 112 ಜನರಲ್ಲಿ ಕೊರೊನಾ ದೃಢ - Covid-19 latest news

ಜಿಲ್ಲೆಯಲ್ಲಿ 956 ಸಕ್ರಿಯ ಪ್ರಕರಣಗಳದ್ದು, ಮೆಗ್ಗಾನ್ ಕೋವಿಡ್ ಆಸ್ಪತ್ರೆಯಲ್ಲಿ 248, ಕೋವಿಡ್ ಕೇರ್ ಸೆಂಟರ್​ನಲ್ಲಿ 493 ಜನ ಚಿಕಿತ್ಸೆ ಪಡೆಯುತ್ತಿದ್ದಾರೆ. ಖಾಸಗಿ ಆಸ್ಪತ್ರೆಯಲ್ಲಿ 53, ಮನೆಯಲ್ಲಿ 80 ಜನ ಐಸೋಲೇಷನ್‌ನಲ್ಲಿದ್ದಾರೆ.

ಶಿವಮೊಗ್ಗ ಜಿಲ್ಲೆಯಲ್ಲಿ 112 ಜನರಲ್ಲಿ ಕೊರೊನಾ ದೃಢ
ಶಿವಮೊಗ್ಗ ಜಿಲ್ಲೆಯಲ್ಲಿ 112 ಜನರಲ್ಲಿ ಕೊರೊನಾ ದೃಢ

By

Published : Aug 3, 2020, 11:53 PM IST

ಶಿವಮೊಗ್ಗ: ಜಿಲ್ಲೆಯಲ್ಲಿ‌ ಇಂದು 112 ಜನರಲ್ಲಿ ಕೊರೊನಾ ದೃಢಪಟ್ಟಿದೆ. ಇದರಿಂದ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 2,094 ಕ್ಕೆ ಏರಿಕೆಯಾಗಿದೆ.

ಇಂದು 32 ಜನ ಗುಣಮುಖರಾಗಿ ಮನೆಗೆ ಸೇರಿದ್ದಾರೆ. ಇದರಿಂದ ಜಿಲ್ಲೆಯಲ್ಲಿ ಇದುವರೆಗೂ 1,095 ಜನ ಗುಣಮುಖರಾಗಿದ್ದಾರೆ. ಜಿಲ್ಲೆಯಲ್ಲಿ ಇಂದು 3 ಜನ ಸಾವನ್ನಪ್ಪಿದ್ದು, ಜಿಲ್ಲೆಯಲ್ಲಿ ಈವರೆಗೂ 43 ಜನ ಬಲಿಯಾಗಿದ್ದಾರೆ.

ಜಿಲ್ಲೆಯಲ್ಲಿ 956 ಸಕ್ರಿಯ ಪ್ರಕರಣಗಳದ್ದು, ಮೆಗ್ಗಾನ್ ಕೋವಿಡ್ ಆಸ್ಪತ್ರೆಯಲ್ಲಿ 248, ಕೋವಿಡ್ ಕೇರ್ ಸೆಂಟರ್​ನಲ್ಲಿ 493 ಜನ ಚಿಕಿತ್ಸೆ ಪಡೆಯುತ್ತಿದ್ದಾರೆ. ಖಾಸಗಿ ಆಸ್ಪತ್ರೆಯಲ್ಲಿ 53, ಮನೆಯಲ್ಲಿ 80 ಜನ ಐಸೋಲೇಷನ್‌ನಲ್ಲಿದ್ದಾರೆ.

ಇಂದು ಜಿಲ್ಲೆಯಲ್ಲಿ 395 ಕಂಟೇನ್ಮೆಂಟ್ ಝೋನ್​ಗಳನ್ನು ಗುರುತಿಸಲಾಗಿದೆ. ಶಿವಮೊಗ್ಗ-61, ಭದ್ರಾವತಿ-23, ಶಿಕಾರಿಪುರ-13, ಸಾಗರ-06, ಸೊರಬ-05, ಹೊಸನಗರ-04 ಜನರ ಕೋವಿಡ್​ ವರದಿ ಪಾಸಿಟಿವ್ ಬಂದಿದೆ. ಇಂದು ಜಿಲ್ಲೆಯಲ್ಲಿ 862 ಜನರನ್ನು ಪರೀಕ್ಷೆ ಮಾಡಲಾಗಿದೆ. ಇದರಲ್ಲಿ 595 ಜನರ ಫಲಿತಾಂಶ ಬಂದಿದೆ.

ABOUT THE AUTHOR

...view details