ಕರ್ನಾಟಕ

karnataka

ETV Bharat / state

ವಿಐಎಸ್ಎಲ್ ಉಳಿವಿಗಾಗಿ ಕಾರ್ಮಿಕರಿಂದ ಪಂಜಿನ ಮೆರವಣಿಗೆ: ವಿನಯ್ ಗುರೂಜಿ ಬೆಂಬಲ - ಪಂಜಿನ ಮೆರವಣಿಗೆ ಮಾಡಿದ ಗುತ್ತಿಗೆ ಕಾರ್ಮಿಕರು

ಭದ್ರಾವತಿಯ ವಿಶ್ವೇಶ್ವರಯ್ಯ ಕಬ್ಬಿಣ ಹಾಗೂ ಉಕ್ಕು ಕಾರ್ಖಾನೆ ಉಳಿವಿಗಾಗಿ ಪ್ರತಿಭಟನೆ- ನಿನ್ನೆ ಪಂಜಿನ ಮೆರವಣಿಗೆ ಮಾಡಿದ ಗುತ್ತಿಗೆ ಕಾರ್ಮಿಕರು - ಕಾರ್ಮಿಕರ ಹೋರಾಟಕ್ಕೆ ಅವಧೂತ ವಿನಯ್ ಗುರೂಜಿ ಬೆಂಬಲ

visl
ವಿಐಎಸ್ಎಲ್ ಉಳಿವಿಗಾಗಿ ಕಾರ್ಮಿಕರಿಂದ ಮೆರವಣಿಗೆ

By

Published : Jan 28, 2023, 11:09 AM IST

Updated : Jan 28, 2023, 12:44 PM IST

ಭದ್ರವತಿಯಲ್ಲಿ ಗುತ್ತಿಗೆ ಕಾರ್ಮಿಕರಿಂದ ಪಂಜಿನ ಮೆರವಣಿಗೆ

ಶಿವಮೊಗ್ಗ: ಭದ್ರಾವತಿಯ ವಿಶ್ವೇಶ್ವರಯ್ಯ ಕಬ್ಬಿಣ ಹಾಗೂ ಉಕ್ಕು ಕಾರ್ಖಾನೆ ಉಳಿವಿಗಾಗಿ ಗುತ್ತಿಗೆ ಕಾರ್ಮಿಕರು ಹೋರಾಟವನ್ನು ತೀವ್ರಗೊಳಿಸಿದ್ದಾರೆ. ಶುಕ್ರವಾರ ಗುತ್ತಿಗೆ ಕಾರ್ಮಿಕ ಸಂಘದ ವತಿಯಿಂದ ಕರೆ ನೀಡಿದ್ದ ಪಂಜಿನ ಮೆರವಣಿಗೆಯಲ್ಲಿ 1500 ಕ್ಕೂ ಅಧಿಕ ಜನ ಪಾಲ್ಗೊಂಡಿದ್ದರು. ಭದ್ರಾವತಿಯ ಪ್ರಮುಖ ವೃತ್ತ, ರಸ್ತೆಯಲ್ಲಿ ಮೆರವಣಿಗೆ ಸಾಗಿದ್ದು, ಭದ್ರಾವತಿ ಪಟ್ಟಣದ ನಿವಾಸಿಗಳು ಸಹ ಈ ಹೋರಾಟಕ್ಕೆ ಬೆಂಬಲ ನೀಡಿದ್ದಾರೆ.

ವಿಐಎಸ್​ಎಲ್ ಕಾರ್ಖಾನೆ ಮುಂಭಾಗದಿಂದ ಪ್ರಾರಂಭವಾದ ಗುತ್ತಿಗೆ ಕಾರ್ಮಿಕರ ಪಂಜಿನ ಮೆರವಣಿಗೆಯು ಅಂಡರ್ ಬ್ರಿಡ್ಜ್​ನಿಂದ ಕೆಎಸ್​ಆರ್​ಟಿಸಿ ಬಸ್ ನಿಲ್ದಾಣದ ಪಕ್ಕದ ರಸ್ತೆ ಮೂಲಕ ಸಾಗಿ ನಂತರ ಹೊಸ ಸೇತುವೆ ತಲುಪಿತು. ಬಳಿಕ ತಹಶೀಲ್ದಾರ್ ಕಚೇರಿ‌ ಮುಂಭಾಗದಿಂದ ಹಾಲಪ್ಪ ವೃತ್ತ, ಬಿ.ಹೆಚ್.ರಸ್ತೆ ಮಾರ್ಗವಾಗಿ ಸಾಗಿ ಮಾಧವರಾವ್ ವೃತ್ತದಿಂದ ಹಳೇ ಸೇತುವೆಯಿಂದ ಪುನಃ ಅಂಡರ್ ಬ್ರಿಡ್ಜ್ ಬಳಿ ಬಂದು ಮತ್ತೆ ಕಾರ್ಖಾನೆ ಮುಂಭಾಗ ಮುಕ್ತಾಯವಾಯಿತು. ಮೆರವಣಿಗೆಯಲ್ಲಿ ಭದ್ರಾವತಿ ಶಾಸಕ ಬಿ. ಕೆ. ಸಂಗಮೇಶ್ ಸೇರಿದಂತೆ ಎಲ್ಲಾ ಪಕ್ಷದ ಮುಖಂಡರು ಭಾಗಿಯಾಗಿದ್ದರು.

ಇದನ್ನೂ ಓದಿ:ನಷ್ಟದ ಹಾದಿಯಲ್ಲಿ ವಿಐಎಸ್ಎಲ್.. ಕಾರ್ಖಾನೆ ಮುಚ್ಚದಂತೆ ಗುತ್ತಿಗೆ ಕಾರ್ಮಿಕರ ಪ್ರತಿಭಟನೆ

ಅವಧೂತ ವಿನಯ್ ಗುರೂಜಿ ಬೆಂಬಲ:ವಿಐಎಸ್ಎಲ್ ಗುತ್ತಿಗೆ ಕಾರ್ಮಿಕರು ಕಾರ್ಖಾನೆ ಉಳಿಸಿ ಎಂದು ನಡೆಸುತ್ತಿರುವ ಹೋರಾಟಕ್ಕೆ ಅವಧೂತ ವಿನಯ್ ಗುರೂಜಿ ಬೆಂಬಲ ಸೂಚಿಸಿದ್ದಾರೆ. ಕಾರ್ಮಿಕರು ಪ್ರತಿಭಟನೆ ನಡೆಸುತ್ತಿರುವ ಸ್ಥಳಕ್ಕೆ ಭೇಟಿ‌ ನಿಮ್ಮ ಜೊತೆ ನಾನಿದ್ದೇನೆ ಎಂದು ತಿಳಿಸಿದ್ದಾರೆ. "ಕಾರ್ಮಿಕರು ಕಾರ್ಖಾನೆ ಪರವಾಗಿ ಪ್ರತಿಭಟನೆ ನಡೆಸುತ್ತಿದ್ದಾರೆ. ನಮ್ಮ ರಾಜ್ಯದ ಆಸ್ತಿ ಉಳಿವಿಗಾಗಿ ಹೋರಾಟ ನಡೆಸುತ್ತಿರುವುದಕ್ಕೆ ನಾನು ಬೆಂಬಲ ಸೂಚಿಸಿದ್ದೇನೆ. ಸರ್ಕಾರ ಜನರಿಂದ ರಚಿತವಾಗಿರುವುದು, ಸರ್ಕಾರ ಜನರ ಧ್ವನಿಯನ್ನು ಕೇಳುತ್ತೆ ಎಂಬ ದೃಢವಾದ ನಂಬಿಕೆ ನನಗಿದೆ. ಈ ಹೋರಾಟಕ್ಕೆ ಎಲ್ಲಾ ಮಠಾಧೀಶರು ಬೆಂಬಲ ನೀಡಬೇಕು ಎಂಬುದು ನನ್ನ ಮನವಿ.‌ ಕನ್ನಡ ಸಂಘ, ರಕ್ಷಣಾ ವೇದಿಕೆಗಳು ಬೆಂಬಲ ನೀಡಬೇಕು" ಎಂದು ವಿನಂತಿಸಿಕೊಂಡರು.

ಇದನ್ನೂ ಓದಿ:ವಿಐಎಸ್‍ಎಲ್​ನಲ್ಲಿ ವಾರದೊಳಗಾಗಿ ಆಕ್ಸಿಜನ್ ಉತ್ಪಾದಿಸಲು ಕ್ರಮ : ಸಚಿವ ಕೆ ಎಸ್ ಈಶ್ವರಪ್ಪ

"ಕಾರ್ಖಾನೆ ಬಂದ್ ಆದ್ರೆ ಕೇವಲ ಕಾರ್ಮಿಕರಷ್ಟೇ ಅಲ್ಲ, ಅವರ ಕುಟುಂಬಸ್ಥರು ಸಹ ಬೀದಿ ಪಾಲಾಗುತ್ತಾರೆ. ಈ ಹೋರಾಟವನ್ನು ಇಲ್ಲಿಗೆ ನಿಲ್ಲಿಸದೇ ಮುಂದುವರೆಸಬೇಕು. ನಾವೆಲ್ಲಾ ಮನುಷ್ಯರಾಗೋಣ. ಇದು ಇಲ್ಲಿನ ಸಮಸ್ಯೆಯಾಗಿ ಕಾಣುತ್ತಿರಬಹುದು, ಆದರೆ ಮುಂದೊಂದು ದಿನ ಅಮೆರಿಕಕ್ಕೂ ಹೋಗಬಹುದು. ಇಲ್ಲಿ ಕಾರ್ಖಾನೆ ಮುಚ್ಚಿದಂತೆ ಅಲ್ಲಿಯೂ ಸಹ ಮುಂದೆ ಕಾರ್ಖಾನೆ ಮುಚ್ಚಬಹುದು. ಜನವರಿ 30 ರಂದು ಗಾಂಧಿ ಹುತಾತ್ಮರಾದ ದಿನ. ಅಂದು ಎಲ್ಲಾರು ಸಭೆ ಸೇರೋಣ. ಶಾಸಕ ಸಂಗಮೇಶ್ ಇರ್ತಾರೆ, ನಾನು ಬರುತ್ತೇನೆ. ಮಠಾಧೀಶರು ಭಾಗಿಯಾಗಲಿ ಹೋರಾಟ ಮಾಡೋಣ" ಎಂಬ ಅಭಯ‌ ನೀಡಿದರು.

ಇದನ್ನೂ ಓದಿ:ವಿಐಎಸ್​ಎಲ್​​ ಕಾರ್ಖಾನೆ ಉಳಿಯಬೇಕಿದೆ: ಬಾಲಕೃಷ್ಣ

Last Updated : Jan 28, 2023, 12:44 PM IST

ABOUT THE AUTHOR

...view details