ಕರ್ನಾಟಕ

karnataka

ETV Bharat / state

ಮಲೆನಾಡಿನಲ್ಲಿ ಗ್ರಾಹಕರಿಗೆ ಹೊರೆಯಾಗದ ತರಕಾರಿ ಬೆಲೆ.. - latest news of shivamogga

ಬೀನ್ಸ್ ಮಾತ್ರ 40 ರೂ. ಆಸುಪಾಸಿನಲ್ಲಿದ್ರೆ, ಇನ್ನುಳಿದ ತರಕಾರಿಗಳು 25 ರಿಂದ 30 ರೂ. ಗೆ ಲಭ್ಯವಿದೆ. ಇದರಿಂದ ಗ್ರಾಹಕ ನೆಮ್ಮದಿಯಿಂದ ತರಕಾರಿ ತೆಗೆದುಕೊಂಡು ಹೋಗುತ್ತಿದ್ದಾನೆ.

shivamogga
ಮಲೆನಾಡಿನಲ್ಲಿ ಗ್ರಾಹಕನ ಕೈ ಸುಡದ ತರಕಾರಿ

By

Published : Jun 13, 2020, 9:09 PM IST

ಶಿವಮೊಗ್ಗ : ಜಿಲ್ಲೆಯಲ್ಲಿ ಲಾಕ್​ಡೌನ್ ನಡುವೆಯೂ ತರಕಾರಿ ತುಂಬಾ ಅಗ್ಗವಾಗಿ ಜನತೆಗೆ ಸಿಗುತ್ತಿರೋದ್ರಿಂದಾಗಿ ಗ್ರಾಹಕರು ಸಂತಸ ವ್ಯಕ್ತಪಡಿಸುತ್ತಿದ್ದಾರೆ.

ಜಿಲ್ಲೆಯ ಎಪಿಎಂಸಿ ತರಕಾರಿ ಮಾರುಕಟ್ಟೆಗೆ ಜಿಲ್ಲೆ ಸೇರಿ ರಾಜ್ಯದ ವಿವಿಧ ಜಿಲ್ಲೆಗಳಿಂದ ವಿವಿಧ ರೀತಿಯ ತರಕಾರಿ ಬರುತ್ತದೆ. ಲಾಕ್​ಡೌನ್​ನಲ್ಲಿ ಮಾರುಕಟ್ಟೆ ಸಿಗದೆ ಕಂಗಲಾಗಿದ್ದ ರೈತರು, ನಂತರ ರೈತ ಬೆಳೆದ ಬೆಳೆಗೆ ಯಾವುದೇ ಅಡ್ಡಿಪಡಿಸದೆ ಮಾರುಕಟ್ಟೆಗೆ ಸಾಗಿಸಲು ಅನುಮತಿ ನೀಡಿದ ಮೇಲೆ ತರಕಾರಿ ಗ್ರಾಹಕನ ಮನೆ ಬಾಗಿಲಿಗೆ ತಲುಪಿದೆ. ಇದರಿಂದ ಈ ಬಾರಿ ತರಕಾರಿ ಗ್ರಾಹಕನಿಗೆ ದುಬಾರಿ ಎನ್ನಿಸಿಲ್ಲ.

ಗ್ರಾಹಕನ ಕೈ ಸುಡದ ತರಕಾರಿ : ಕಳೆದ ಬೇಸಿಗೆಗೆ ಹೋಲಿಸಿದರೆ ಈ ಬಾರಿ ತರಕಾರಿ ಅಷ್ಟೇನು ದುಬಾರಿಯಲ್ಲ. ಬೀನ್ಸ್ ಮಾತ್ರ 40 ರೂ. ಆಸುಪಾಸಿನಲ್ಲಿದ್ರೆ, ಇನ್ನುಳಿದ ತರಕಾರಿಗಳು 25 ರಿಂದ 30 ರೂ. ಗೆ ಲಭ್ಯವಿದೆ. ಇದರಿಂದ ಗ್ರಾಹಕ ನೆಮ್ಮದಿಯಿಂದ ತರಕಾರಿ ತೆಗೆದುಕೊಂಡು ಹೋಗುತ್ತಿದ್ದಾನೆ. ಈ ಬಾರಿ ಬೇಸಿಗೆಯಲ್ಲೂ ತರಕಾರಿ ಬೆಳೆದಿರುವ ಕಾರಣ ಮಾರುಕಟ್ಟೆಯಲ್ಲಿ ಸಾಕಷ್ಟು ಲಭ್ಯತೆ ಇದೆ. ಹಾಗಾಗಿ ದರ ಹೆಚ್ಚಿಲ್ಲ ಎನ್ನುತ್ತಾರೆ ತರಕಾರಿ ಸಗಟು ವ್ಯಾಪಾರಿಗಳು.

ತರಕಾರಿ ಮಾರುಕಟ್ಟೆಯಲ್ಲಿ ಲಭ್ಯವಿದ್ದು, ಗ್ರಾಹಕನಿಗೆ ಬೇಕಾದ ತರಕಾರಿ ಸಿಗುತ್ತಿದೆ. ಅದು ಕಡಿಮೆ ದರಕ್ಕೆ ಸಿಗುತ್ತಿರುವುದರಿಂದ ನಾವೆಲ್ಲಾ ನೆಮ್ಮದಿಯಿಂದ ತರಕಾರಿ, ಸೂಪ್ಪು ತೆಗೆದುಕೊಂಡು ಹೋಗುತ್ತಿದ್ದೇವೆ ಅಂತಾರೆ ಗ್ರಾಹಕರು.

ABOUT THE AUTHOR

...view details