ಶಿವಮೊಗ್ಗ: ಮಂತ್ರಿ ಮಂಡಲದಲ್ಲಿ ನನಗೆ ಸ್ಥಾನ ಸಿಗದೆ ಇರುವುದು ತುಂಬಾ ನೋವುಂಟಾಗಿದೆ. ಆದರೆ ಪಕ್ಷಕ್ಕೆ ಯಾವುದೇ ಹಾನಿ ಮಾಡಲಾರೆ. ಇದು ನಾನು ಬೆಳೆಸಿದ ಪಕ್ಷ ಎಂದು ಸಚಿವ ಸ್ಥಾನ ಆಕಾಂಕ್ಷಿ ತೀರ್ಥಹಳ್ಳಿ ಶಾಸಕ ಆರಗ ಜ್ಞಾನೇಂದ್ರ ತಮ್ಮ ಅಸಮಾಧಾನ ಹೊರಹಾಕಿದ್ದಾರೆ.
ಸಚಿವ ಸ್ಥಾನ ಆಕಾಂಕ್ಷಿ ಅಸಮಾಧಾನ ... ತೀವ್ರ ನೋವುಂಟಾಗಿದೆ ಎಂದ ಶಾಸಕ - shivamogh political news today
ಪಕ್ಷದಲ್ಲಿ ಹಿರಿತನ ಪರಿಗಣಿಸಿ ಮಂತ್ರಿ ಸ್ಥಾನ ಸಿಗಬಹುದು ಎಂಬ ನಿರೀಕ್ಷೆಯಲ್ಲಿದ್ದೆ. ಆದ್ದರಿಂದ ತುಂಬಾ ನೋವಾಗಿದೆ. ಮುಂದಿನ ದಿನಗಳಲ್ಲಿ ನೀಡುವುದಾಗಿ ರಾಜ್ಯ ನಾಯಕರು ತಿಳಿಸಿದ್ದಾರೆ. ಆದರೆ ನಾನು ಯಾವುದೇ ರೀತಿಯಿಂದಲೂ ಪಕ್ಷಕ್ಕೆ ಹಾನಿ ಮಾಡುವುದಿಲ್ಲ ಎಂದು ಸಚಿವ ಸ್ಥಾನ ಆಕಾಂಕ್ಷಿ ಶಾಸಕ ಆರಗ ಜ್ಞಾನೇಂದ್ರ ಬೇಸರ ವ್ಯಕ್ತಪಡಸಿದ್ದಾರೆ.
![ಸಚಿವ ಸ್ಥಾನ ಆಕಾಂಕ್ಷಿ ಅಸಮಾಧಾನ ... ತೀವ್ರ ನೋವುಂಟಾಗಿದೆ ಎಂದ ಶಾಸಕ](https://etvbharatimages.akamaized.net/etvbharat/prod-images/768-512-4213061-thumbnail-3x2-shv.jpg)
ಶಾಸಕ ಆರಗ ಜ್ಞಾನೇಂದ್ರ
ಶಾಸಕ ಆರಗ ಜ್ಞಾನೇಂದ್ರ
1983ರಿಂದ ಒಟ್ಟು 9 ಭಾರಿ ಚುನಾವಣೆ ಸ್ಪರ್ಧಿಸಿದ್ದೇನೆ. ನಾಲ್ಕು ಭಾರಿ ಗೆದ್ದಿದ್ದೇನೆ. ನನ್ನ ಹಿರಿತನ ಪರಿಗಣಿಸಿ ಮಂತ್ರಿ ಸ್ಥಾನ ನೀಡಬಹುದು ಎಂಬ ನಿರೀಕ್ಷೆಯಲ್ಲಿದ್ದೆ. ಇದರಿಂದ ಕ್ಷೇತ್ರದ ಮತದಾರರಿಗೂ ಬೇಸರವಾಗಿದೆ ಎಂದು ಹೇಳಿದರು.
ಪಕ್ಷ- ತತ್ವ ಸಿದ್ದಾಂತಗಳ ಮೇಲೆ ರಾಜಕೀಯ ನಡೆಸಿಕೊಂಡು ಬಂದವನು. ನಮ್ಮ ಜಿಲ್ಲೆಯಲ್ಲಿ ಯಡಿಯೂರಪ್ಪ ,ಈಶ್ಚರಪ್ಪನವರ ಜೊತೆ ರಾಜಕೀಯದಲ್ಲಿ ಬೆಳೆದು ಬಂದವನು. ಈ ಹಿರಿತನವೇ ತನಗೆ ಹಿನ್ನಡೆಯಂಟು ಮಾಡಿದೆ ಎಂಬ ಬೇಸರವಿದೆ. ಪಕ್ಷದ ನಾಯಕರು ಅವಕಾಶವಿದೆ ತಾಳ್ಮೆಯಿಂದ ಕಾಯುವಂತೆ ಹೇಳಿದ್ದಾರೆ ಎಂದರು.