ಶಿವಮೊಗ್ಗ: ಕೊರೊನಾ ರೋಗಿಗಳಿಗೆ ನೆರವಾಗುವ ದೃಷ್ಟಿಯಿಂದ ಉಚಿತವಾಗಿ ಆ್ಯಂಬುಲೆನ್ಸ್ ನೀಡಲಾಗುತ್ತಿದೆ ಎಂದು ಕಾಂಗ್ರೆಸ್ ಮುಖಂಡ ಶ್ರೀನಿವಾಸ್ ಕರಿಯಣ್ಣ ತಿಳಿಸಿದರು.
ಮಾಜಿ ಶಾಸಕ ಕರಿಯಣ್ಣ ಅವರ ಸ್ಮರಣಾರ್ಥ: ಉಚಿತ ಆ್ಯಂಬುಲೆನ್ಸ್ ನೀಡಿದ ಶ್ರೀನಿವಾಸ್ ಕರಿಯಣ್ಣ - ಉಚಿತ ಆ್ಯಂಬುಲೆನ್ಸ್ ನೀಡಿದ ಶ್ರೀನಿವಾಸ್ ಕರಿಯಣ್ಣ
ಮಾಜಿ ಶಾಸಕ ಕರಿಯಣ್ಣ ಅವರ ಸ್ಮರಣಾರ್ಥವಾಗಿ ಒಂದು ಆ್ಯಂಬುಲೆನ್ಸ್ ಅನ್ನು ಉಚಿತವಾಗಿ ಜಿಲ್ಲಾಡಳಿತಕ್ಕೆ ನೀಡಲಾಗುತ್ತಿದೆ ಎಂದು ಕಾಂಗ್ರೆಸ್ ಮುಖಂಡ ಶ್ರೀನಿವಾಸ್ ಕರಿಯಣ್ಣ ತಿಳಿಸಿದರು.
ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಕೊರೊನಾ ಮಾಹಾಮಾರಿ ಎಲ್ಲರನ್ನು ತಲ್ಲಣಗೊಳಿಸಿದೆ. ಇಂತಹ ಸಂದರ್ಭದಲ್ಲಿ ನಮ್ಮ ಕೈಲಾದ ಸಹಾಯ ಮಾಡುವ ಉದ್ದೇಶದಿಂದ ಈ ನಿರ್ಧಾರ ಮಾಡಿರುವೆ. ನಮ್ಮ ತಂದೆ ಮಾಜಿ ಶಾಸಕ ಕರಿಯಣ್ಣ ನವರು ಸಹ ಶಾಸಕರಾದಾಗ ಅನೇಕ ಸಾಮಾಜಿಕ ಕಾರ್ಯಗಳನ್ನು ಮಾಡಿದ್ದಾರೆ. ಹಾಗಾಗಿ ಅವರ ಸ್ಮರಣಾರ್ಥವಾಗಿ ಒಂದು ಆ್ಯಂಬುಲೆನ್ಸ್ ಅನ್ನು ಉಚಿತವಾಗಿ ಜಿಲ್ಲಾಧಿಕಾರಿಗಳ ಮೂಲಕ ಜಿಲ್ಲಾಡಳಿತಕ್ಕೆ ನೀಡುತ್ತಿದ್ದೇನೆ. ಇದರ ಸದುಪಯೋಗವನ್ನು ಜಿಲ್ಲೆಯ ಜನರು ಪಡೆದುಕೊಳ್ಳಬೇಕು ಎಂದರು.
ಕೆಲ ದಿನಗಳಿಂದ ರಾಜ್ಯದಲ್ಲಿ ಕೊರೊನಾ ಸೋಂಕಿತರಿಗೆ ಆ್ಯಂಬುಲೆನ್ಸ್ ಸಿಗದೆ ಅನೇಕ ಅವಘಡಗಳು ಸಂಭವಿಸಿವೆ. ಇದನ್ನು ಮನಗಂಡು ಆ್ಯಂಬುಲೆನ್ಸ್ ಅನ್ನು ಉಚಿತವಾಗಿ ನೀಡಲಾಗುತ್ತಿದೆ ಎಂದರು.