ಶಿವಮೊಗ್ಗ: ಶರಾವತಿ ಸಂತ್ರಸ್ತರಿಗೆ ಭೂಮಿ ಸಿಗದೆ ಹೋಗಿದ್ದಕ್ಕೆ ಬಿಜೆಪಿಯವರೇ ಕಾರಣ ಎಂದು ಪದೆ ಪದೆ ಕಾಂಗ್ರೆಸ್ನವರು ಹೇಳುತ್ತಿದ್ದಾರೆ. ಇದು ಕಾಂಗ್ರೆಸ್ನವರ ಪಾಪದ ಕೂಸು. ನಾವು ಬಿಜೆಪಿಯವರು ಪಾಪದವರು, 60 ವರ್ಷದಿಂದ ಆಡಳಿತ ನಡೆಸಿದ ಕಾಂಗ್ರೆಸ್ಸಿಗರು ಇದನ್ನು ಪರಿಹರಿಸುವುದನ್ನು ಬಿಟ್ಟು ನಮ್ಮ ಮೇಲೆ ಆರೋಪ ಮಾಡ್ತಾ ಇದ್ದಾರೆ ಎಂದು ಕಾಂಗ್ರೆಸ್ ವಿರುದ್ಧ ಶಾಸಕ ಹಾರತಾಳು ಹಾಲಪ್ಪ ಗುಡುಗಿದರು.
ಈ ಸಮಸ್ಯೆಯನ್ನು ನೇರವಾಗಿ ಕಾಗೋಡು ತಿಮ್ಮಪ್ಪನವರು ಪರಿಹರಿಸಬಹುದಾಗಿತ್ತು. ತಿಮ್ಮಪ್ಪನರು ಅಂದಿನಿಂದಲೂ ರಾಜಕೀಯದಲ್ಲಿದ್ದವರು, ವಕೀಲರಾಗಿದ್ದವರು. ಕಂದಾಯ, ಅರಣ್ಯ ಸಚಿವರಾಗಿದ್ದರು. ಕೇಂದ್ರ ಸರ್ಕಾರ ಅನುಮತಿ ಪಡೆಯದೆ ಭೂಮಿ ನೀಡಿದ್ದು ತಪ್ಪು. ಕೇಂದ್ರದ ಅನುಮತಿ ಪಡೆಯಬೇಕೆಂಬ ಸಾಮಾನ್ಯ ಜ್ಞಾನ ಅವರಿಗೆ ಇರಲಿಲ್ಲವೆ ಎಂದು ಪ್ರಶ್ನಿಸಿದರು.