ಶಿವಮೊಗ್ಗ:ಶಿವಪ್ಪ ನಾಯಕ ಮಾರುಕಟ್ಟೆ ಗುತ್ತಿಗೆ ಅವಧಿಗೆ ಸಂಬಂಧಿಸಿದ ತನಿಖಾ ವರದಿ ಬಂದು 5 ತಿಂಗಳಾದರೂ ಸಭೆ ಕರೆಯದ ಮೇಯರ್ ವಿರುದ್ಧ ಕಾಂಗ್ರೆಸ್ ಪಕ್ಷದ ಪಾಲಿಕೆ ಸದಸ್ಯರು ಹಾಗೂ ಪಕ್ಷದ ಮುಖಂಡರಿಂದ ಮಹಾನಗರ ಪಾಲಿಕೆಯ ಮೇಯರ್ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು.
ಬ್ಯಾರಿಸ್ ಸಂಸ್ಥೆಯವರಿಗೆ 99 ವರ್ಷಗಳ ಕಾಲ ಶಿವಪ್ಪ ನಾಯಕ ಮಾಲ್ ಬಾಡಿಗೆ ಆಧಾರದ ಮೇಲೆ ಮುಂದುವರೆಸಲು ಅನುಮತಿ ನೀಡಿರುವುದನ್ನು ಖಂಡಿಸಿ ಮಹಾನಗರ ಪಾಲಿಕೆ ಸದಸ್ಯರು ಹಾಗೂ ಕಾಂಗ್ರೆಸ್ ಕಾರ್ಯಕರ್ತರು ಪಾಲಿಕೆ ಮುಂಭಾಗದ ಗೇಟ್ ಹತ್ತಿ ಮೇಯರ್ ಕಚೇರಿಗೆ ಮುತ್ತಿಗೆ ಹಾಕಲು ಯತ್ನಿಸಿದರು. ಈ ವೇಳೆಯಲ್ಲಿ ಪ್ರತಿಭಟನಾಕಾರರನ್ನು ಪೊಲೀಸರು ವಶಕ್ಕೆ ಪಡೆದರು.