ಶಿವಮೊಗ್ಗ:ಟೀಕೆ ಮಾಡಲು ಹಾಗೂ ವಿರೋಧ ಪಕ್ಷದ ನಾಯಕರಾಗಲು ಸಹ ಸಿದ್ದರಾಮಯ್ಯ ವಿಫಲರಾಗಿದ್ದಾರೆ ಎಂದು ಸಚಿವ ಕೆ.ಎಸ್.ಈಶ್ವರಪ್ಪ ಹೇಳಿದರು.
ಶಿವಮೊಗ್ಗದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇಡೀ ಪ್ರಪಂಚದಲ್ಲಿಯೇ ಆಗದಿರುಷ್ಟು ಒಳ್ಳೆಯ ಕೆಲಸವನ್ನು ಮೋದಿಯವರು ಮಾಡಿದ್ದಾರೆ. ಪ್ರಪಂಚದಲ್ಲಿಯೇ ದೇಶದ ಬಹುತೇಕ ಜನರಿಗೆ ಲಸಿಕೆ ಕೊಡುವುದರಲ್ಲಿ ನಮ್ಮ ದೇಶ ಮೊದಲನೇಯದು. ಪ್ರಾರಂಭದಲ್ಲಿ ಲಸಿಕೆ ತಗೋಬೇಡಿ, ಪೌರುಷತ್ವ ಹೋಗುತ್ತೆ, ಬಿಜೆಪಿ ವ್ಯಾಕ್ಸಿನ್ ಎಂದು ಟೀಕೆ ಮಾಡಿ, ಇವತ್ತು ಇದೇ ಲಸಿಕೆಗೆ ಕಾಂಗ್ರೆಸ್ನವರು ಕ್ಯೂ ನಿಂತಿದ್ದಾರೆ. ಲಸಿಕೀಕರಣ ನಿಧಾನ ಆಗೋಕೆ ಕಾರಣಾನೇ ಕಾಂಗ್ರೆಸ್ ಎಂದರು.
ಆಗ ಜನ ಲಸಿಕೆ ಪಡೆಯಲು ತಯಾರಾಗಿದ್ದರು. ಆದ್ರೆ ಇವರು ಜನರ ದಾರಿ ತಪ್ಪಿಸಿದರು. ಈಗ ಆಪಾದನೆಗಳನ್ನು ಯಡಿಯೂರಪ್ಪ ಹಾಗೂ ಪ್ರಧಾನಿಯವರ ಮೇಲೆ ಮಾಡುತ್ತಿದ್ದಾರೆ. ಈಗ ಅವರಿಗೆ ಅರ್ಥ ಆಗಿದೆ ಎಂದರು.
ಇಡೀ ದೇಶದ ಪ್ರತಿಯೊಬ್ಬರಿಗೂ ಉಚಿತವಾಗಿ ಲಸಿಕೆ ನೀಡುತ್ತೇವೆ ಎಂದು ಹೇಳಿದ ಮೊದಲ ಪ್ರಧಾನಿ ಮೋದಿಯವರು. ಹಾಗೂ ಬಡವರಿಗೆ ನವೆಂಬರ್ವರೆಗೆ ರೇಷನ್ ಸಹ ಉಚಿತವಾಗಿ ನೀಡುತ್ತೇವೆ ಎಂದು ಘೋಷಣೆ ಮಾಡಿದ್ದಾರೆ. ಇಂತಹ ಪ್ರಧಾನಿ ಸಿಕ್ಕಿರುವುದು ನಮ್ಮ ಪುಣ್ಯ ಎಂದರು.
ಈಗ ಕಾಂಗ್ರೆಸ್ನ ಮುಖಂಡರು, ಡಿಕೆಶಿ ಹಾಗೂ ಸಿದ್ದರಾಮಯ್ಯ ಕೊರೊನಾ ನಿಯಂತ್ರಿಸುವಲ್ಲಿ ಬಿಜೆಪಿ ವಿಫಲವಾಗಿದೆ ಎನ್ನುತ್ತಿದ್ದಾರೆ. ಆದ್ರೆ ಇವರು ಟೀಕೆ ಮಾಡೋಕು ಸಹ ವಿಫಲರಾಗಿದ್ದಾರೆ ಎಂದು ಟೀಕಿಸಿದರು. ದೇಶದ ಜನ ಮೆಚ್ಚುವ ರೀತಿಯಲ್ಲಿ ದೇಶದಲ್ಲಿ ಹಾಗೂ ರಾಜ್ಯದಲ್ಲಿ ಬಿಜೆಪಿ ಆಡಳಿತ ನಡೆಸುತ್ತಿದೆ. ಆಡಳಿತ ಪಕ್ಷವನ್ನು ಟೀಕಿಸುವಲ್ಲಿಯೂ ವಿರೋಧ ಪಕ್ಷವಾಗಿ ಕಾರ್ಯನಿರ್ವಹಿಸುವಲ್ಲಿ ಸಹ ಕಾಂಗ್ರೆಸ್ ವಿಫಲವಾಗಿದೆ. ಹಾಗಾಗಿ ಕಾಂಗ್ರೆಸ್ ದಿನದಿಂದ ದಿನಕ್ಕೆ ದೇಶದಲ್ಲಿ ನಾಶ ಆಗುತ್ತಿದೆ ಎಂದರು.
ಹಂತ ಹಂತವಾಗಿ ಕೊರೊನಾ ಇಳಿಕೆ ಆಗುತ್ತಿದೆ. ಜಿಲ್ಲೆಯಲ್ಲಿ ಜನಜಾಗೃತಿ ಆಗಿದೆ. ಗ್ರಾಮೀಣ ಭಾಗದಲ್ಲೂ ಸಹ ಜಾಗೃತರಾಗಿ ಜನರು ಮನೆಯಿಂದ ಹೊರ ಬರುತ್ತಿಲ್ಲ. ಜನರು ಸಹಕಾರ ಕೊಟ್ಟಿದ್ದಾರೆ. ಹಾಗಾಗಿ ಕೊರೊನಾ ನಿಯಂತ್ರಸಲು ಮುಂದೇನು ಮಾಡಬೇಕು ಎನ್ನುವ ಕುರಿತು ಚೆರ್ಚೆ ಮಾಡುತ್ತೇವೆ ಎಂದರು.