ಶಿವಮೊಗ್ಗ:ಕೊರೊನಾ ವೈರಸ್ ಜಿಲ್ಲೆಗೆ ಕಾಲಿಡದಂತೆ ನಿಗಾ ವಹಿಸಲು ವಿದೇಶಗಳಿಂದ ಆಗಮಿಸುವವರ ವಿವರಗಳನ್ನು ಪಡೆದು, ಅವರ ಆರೋಗ್ಯ ತಪಾಸಣೆ ನಡೆಸಿ ನಿಗಾ ವಹಿಸುವಂತೆ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಕ್ಯಾ.ಮಣಿವಣ್ಣನ್ ಸೂಚಿಸಿದರು.
ಸಭೆಯಲ್ಲಿ ಮಾತನಾಡಿದ ಅವರು ಕೊರೊನಾ ಬಾಧಿತ ದೇಶಗಳಿಂದ ಆಗಮಿಸುವವರು ಸ್ವಯಂ ಪ್ರೇರಿತರಾಗಿ ಮಾಹಿತಿಯನ್ನು ಒದಗಿಸಿ ಆರೋಗ್ಯ ತಪಾಸಣೆಗೆ ಒಳಗಾಗಬೇಕು. ಸಾರ್ವಜನಿಕರು ಸಹ ವಿದೇಶಗಳಿಂದ ಆಗಮಿಸಿರುವವರ ಬಗ್ಗೆ ಮಾಹಿತಿ ಇದ್ದರೆ ಆರೋಗ್ಯ ಇಲಾಖೆ ಅಧಿಕಾರಿಗಳಿಗೆ ದೂರವಾಣಿ ಕರೆ ಮಾಡಿ ಮಾಹಿತಿಯನ್ನು ಒದಗಿಸಬಹುದಾಗಿದೆ. ಜಿಲ್ಲಾ ಮಟ್ಟದಲ್ಲಿ ಹಾಗೂ ತಾಲೂಕು ಮಟ್ಟದಲ್ಲಿ ಆರೋಗ್ಯ ಇಲಾಖೆ ಅಧಿಕಾರಿಗಳ ನೇತೃತ್ವದ ತಂಡಗಳನ್ನು ರಚಿಸಬೇಕು. ಈ ತಂಡಗಳು ಮಾಹಿತಿ ದೊರೆತಲ್ಲಿಗೆ ತೆರಳಿ ಆರೋಗ್ಯ ತಪಾಸಣೆ ಹಾಗೂ ಸೂಕ್ತ ನಿಗಾ ವಹಿಸಲು ಕ್ರಮ ಕೈಗೊಳ್ಳಬೇಕು ಎಂದರು.
ದೂರವಾಣಿ ಸಂಖ್ಯೆ:
ಕೊರೊನಾ ವೈರಸ್ ಕುರಿತಾದ ಯಾವುದೇ ಸಂಶಯ, ಮಾಹಿತಿಗಳನ್ನು ಟೋಲ್ ಫ್ರೀ ಸಂಖ್ಯೆ 104 ಕರೆ ಮಾಡಿ ನೀಡಬಹುದಾಗಿದೆ. ಅದೇ ರೀತಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ದೂರವಾಣಿ ಸಂಖ್ಯೆ 9448721741, ಶಿವಮೊಗ್ಗ ತಾಲೂಕು ಆರೋಗ್ಯಾಧಿಕಾರಿ 9448183379, ಭದ್ರಾವತಿ 9449448755, ತೀರ್ಥಹಳ್ಳಿ 9448681734, ಶಿಕಾರಿಪುರ 8277510530, ಸೊರಬ 9110824873, ಸಾಗರ 8722297749 ಮತ್ತು ಹೊಸನಗರ 9964462404 ಕರೆ ಮಾಡಿ ಮಾಹಿತಿಯನ್ನು ನೀಡಬಹುದಾಗಿದೆ.
ಆರ್ಥಿಕ ಗುರಿ ಸಾಧಿಸಬೇಕು: