ಶಿವಮೊಗ್ಗ:ಸ್ಮಾರ್ಟ್ ಸಿಟಿ ಕಾಮಗಾರಿಯ ವೇಳೆ ನಾಗರ ಹಾವನ್ನು ಕೊಂದು ಹಾಕಲಾಗಿದೆ ಎಂದು ಆರೋಪಿಸಿ ಸ್ಮಾರ್ಟ್ ಸಿಟಿ ಇಂಜಿನಿಯರ್ ವಿರುದ್ಧ ದೂರು ನೀಡಲಾಗಿದೆ. ಡಿಸೆಂಬರ್ 4ರಂದು ಶಿವಮೊಗ್ಗದ ಸಾಗರ ರಸ್ತೆಯಲ್ಲಿ ಎಪಿಎಂಸಿ ಮುಂಭಾಗದ ಆಂಜನೇಯ ಗುಡಿಯನ್ನು ಜೆಸಿಬಿಯಿಂದ ಕೆಡವಲಾಗಿತ್ತು.
ಆಂಜನೇಯ ಗುಡಿಯ ತೆರವಿನ ವೇಳೆ ಹಾವೊಂದು ಪ್ರತ್ಯಕ್ಷವಾಗಿತ್ತು. ಈ ವೇಳೆ ಹಾವು ಜೆಸಿಬಿಯ ಬಕೆಟ್ ಅನ್ನು ಕಚ್ಚಲು ಯತ್ನಿಸಿದೆ. ನಂತರ ಜೆಸಿಬಿ ಬಕೆಟ್ನಿಂದ ಮಣ್ಣನ್ನು ತುಂಬುವಾಗ ಹಾವನ್ನು ತೆಗೆದುಕೊಂಡು ಹೋಗಲಾಗಿದೆ. ಈ ವೇಳೆ ಹಾವು ಸಾವನ್ನಪ್ಪಿದೆ ಎಂದು ದೂರಲಾಗಿದೆ. ಗುಡಿ ಕೆಡವಿದ ಬಳಿಕ ಅಂದೇ ಭಜರಂಗದಳದವರು ಪ್ರತಿಭಟನೆ ನಡೆಸಿದ್ದರು.