ಕರ್ನಾಟಕ

karnataka

ETV Bharat / state

ಸಿಎಂ ತವರು ಜಿಲ್ಲೆಯಲ್ಲಿ ಬಿಜೆಪಿ ಜನ ಸೇವಕ ಸಮಾವೇಶ ಪ್ರಾರಂಭ - Shimoga's Latest News Update

ಶಿವಮೊಗ್ಗ ಹೊರ ವಲಯದ ಪ್ರೇರಣ ಎಜುಕೇಷನ್ ಟ್ರಸ್ಟ್ ನ ಪಿಇಎಸ್ ಕಾಲೇಜಿನ ಸಭಾಂಗಣದಲ್ಲಿ ನಡೆಯುತ್ತಿರುವ ಜನ ಸೇವಕ ಸಮಾವೇಶವನ್ನು ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್. ಈಶ್ವರಪ್ಪ ಉದ್ಟಾಟಿಸಿದರು. ಈ ವೇಳೆ ನೂತನವಾಗಿ ಗ್ರಾಮ ಪಂಚಾಯತ್​ಗೆ ಆಯ್ಕೆಯಾದ ಬಿಜೆಪಿ ಬೆಂಬಲಿತ ಸದಸ್ಯರಿಗೆ ಶಾಲು ಹಾಕುವ ಮೂಲಕ ಸನ್ಮಾನ ಕಾರ್ಯಕ್ರಮ ನೆರವೇರಿಸಲಾಯ್ತು.

Commencement of BJP Jana Sewaka Convention
ಸಿಎಂ ತವರು ಜಿಲ್ಲೆಯಲ್ಲಿ ಬಿಜೆಪಿಯ ಜನ ಸೇವಕ ಸಮಾವೇಶ ಪ್ರಾರಂಭ

By

Published : Jan 13, 2021, 4:49 PM IST

ಶಿವಮೊಗ್ಗ: ಬಿಜೆಪಿ ಶಕ್ತಿ ಕೇಂದ್ರ ಶಿವಮೊಗ್ಗದಲ್ಲಿ ಜನ ಸೇವಕ ಸಮಾವೇಶ ನಡೆಸಲಾಗುತ್ತಿದೆ. ಶಿವಮೊಗ್ಗ ಹೊರ ವಲಯದ ಪ್ರೇರಣ ಎಜುಕೇಷನ್ ಟ್ರಸ್ಟ್ ನ ಪಿಇಎಸ್ ಕಾಲೇಜಿನ ಸಭಾಂಗಣದಲ್ಲಿ ನಡೆಯುತ್ತಿರುವ ಜನ ಸೇವಕ ಸಮಾವೇಶವನ್ನು ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್. ಈಶ್ವರಪ್ಪ ಉದ್ಟಾಟಿಸಿದರು.

ಸಿಎಂ ತವರು ಜಿಲ್ಲೆಯಲ್ಲಿ ಬಿಜೆಪಿಯ ಜನ ಸೇವಕ ಸಮಾವೇಶ ಪ್ರಾರಂಭ

ನೂತನವಾಗಿ ಗ್ರಾಮ ಪಂಚಾಯತ್​ಗೆ ಆಯ್ಕೆಯಾದ ಬಿಜೆಪಿ ಬೆಂಬಲಿತ ಸದಸ್ಯರಿಗೆ ಶಾಲು ಹಾಕುವ ಮೂಲಕ ಸನ್ಮಾನ ಕಾರ್ಯಕ್ರಮ ನೆರವೇರಿಸಲಾಯ್ತು. ಮುಂಬರುವ ತಾಲೂಕು ಪಂಚಾಯತ್ ಹಾಗೂ ಜಿಲ್ಲಾ ಪಂಚಾಯತ್ ಚುನಾವಣೆಯಲ್ಲಿ ಕಮಲ ಅರಳಿಸಲು ಬಿಜೆಪಿ ಮುಂದಾಗಿದ್ದು, ಇದಕ್ಕಾಗಿ ಚುನಾವಣೆಯ ತಯಾರಿ ಹಾಗೂ ಆಕಾಂಕ್ಷಿಗಳ ಪಟ್ಟಿಯನ್ನು ತಯಾರು ಮಾಡುವ ಸಲುವಾಗಿ ಜನ ಸೇವಕ ಸಮಾವೇಶವನ್ನು ನಡೆಸಲಾಗುತ್ತಿದೆ.

ಜನ ಸೇವಕ ಸಮಾವೇಶದಲ್ಲಿ ಬಿಜೆಪಿ ರಾಷ್ಟ್ರೀಯ ಕಾರ್ಯದರ್ಶಿ ಸಿ.ಟಿ. ರವಿ, ಮುಜರಾಯಿ ಖಾತೆ ಸಚಿವ ಕೋಟ ಶ್ರೀನಿವಾಸ ಪೂಜಾರಿ, ಬಿಜೆಪಿ ರಾಜ್ಯ ಕಾರ್ಯದರ್ಶಿ ರವಿ ಕುಮಾರ್, ಸಂಸದ ಬಿ.ವೈ. ರಾಘವೇಂದ್ರ, ಶೋಭಾ‌ ಕರಂದ್ಲಾಜೆ, ಶಾಸಕರಾದ ಆಯನೂರು ಮಂಜುನಾಥ್, ಕುಮಾರ್ ಬಂಗಾರಪ್ಪ, ಹರತಾಳು ಹಾಲಪ್ಪ, ಅಶೋಕ್ ನಾಯ್ಕ, ಈರಣ್ಣ ಕಡಾಡಿ, ಪ್ರಕೋಷ್ಟದ ಅಧ್ಯಕ್ಷ ಭಾನುಪ್ರಕಾಶ್ ಸೇರಿ ಜಿಲ್ಲೆಯ ಬಿಜೆಪಿ ಕಾರ್ಯಕರ್ತರು ಹಾಜರಿದ್ದರು.

ABOUT THE AUTHOR

...view details