ಶಿವಮೊಗ್ಗ: ಎರಡು ಬೈಕ್ಗಳ ನಡುವೆ ನಡೆದ ಮುಖಾಮುಖಿ ಡಿಕ್ಕಿಯಲ್ಲಿ, ಪೊಲೀಸ್ ಹೆಡ್ ಕಾನ್ಸ್ಟೆಬಲ್ ಸ್ಥಳದಲ್ಲಿಯೇ ಸಾವನ್ನಪ್ಪಿರುವ ಘಟನೆ ಶಿರಾಳಕೊಪ್ಪದಲ್ಲಿ ನಡೆದಿದೆ.
ಬೈಕ್ಗಳ ನಡುವೆ ಮುಖಾಮುಖಿ: ಪೊಲೀಸ್ ಹೆಡ್ ಕಾನ್ಸ್ಟೆಬಲ್ ಸಾವು..! - Collision between bikes
ಎರಡು ಬೈಕ್ಗಳ ನಡುವೆ ನಡೆದ ಮುಖಾಮುಖಿ ಡಿಕ್ಕಿಯಲ್ಲಿ, ಪೊಲೀಸ್ ಹೆಡ್ ಕಾನ್ಸ್ಟೆಬಲ್ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ.
ಬೈಕ್ಗಳ ನಡುವೆ ಮುಖಾಮುಖಿ
ಶಿಕಾರಿಪುರದ ಕೋರ್ಟ್ ಕಾನ್ಸ್ಟೆಬಲ್ ಆಗಿ ಕಾರ್ಯ ನಿರ್ವಹಿಸುತ್ತಿದ್ದ ಪ್ರವೀಣ್, ಬೈಕ್ ಅಪಘಾತದಿಂದ ಸಾವನ್ನಪ್ಪಿದ್ದಾರೆ. ಇಂದು ಶಿರಾಳಕೊಪ್ಪದ ಆನವಟ್ಟಿ ರಸ್ತೆಯಲ್ಲಿ ಪ್ರವೀಣ್ ಬೈಕ್ನಲ್ಲಿ ಹೋಗುವಾಗ ಎದುರಿಗೆ ಬಂದ ಯುವಕ ಡಿಕ್ಕಿ ಹೊಡೆದಿದ್ದಾನೆ.
ಯುವಕನಿಗೂ ಸಹ ಗಾಯವಾಗಿದ್ದು, ಮೃತ ಪ್ರವೀಣ್ ಇಲಾಖೆಯಲ್ಲಿ ಒಳ್ಳೆಯ ಹೆಸರು ಗಳಿಸಿದ್ದರು. ಈ ಕುರಿತು ಶಿರಾಳಕೊಪ್ಪ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.