ಕರ್ನಾಟಕ

karnataka

ETV Bharat / state

ಶಿವಮೊಗ್ಗ: ಧಾರಾಕಾರ ಮಳೆಗೆ ಸಂಪೂರ್ಣ ಕುಸಿದ ಸರ್ಕಾರಿ ಶಾಲೆ - Shimogga latest news

ಜಿಲ್ಲೆಯಲ್ಲಿ ಸುರಿಯುತ್ತಿರುವ ಧಾರಾಕಾರ ಮಳೆಗೆ ಭದ್ರಾವತಿ ತಾಲ್ಲೂಕಿನ ತಡಸ ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆಯ ಕಟ್ಟಡದ ಗೋಡೆ, ಛಾವಣಿಗಳು ಬಿದ್ದುಹೋಗಿವೆ.

collapse Government school in shimogga

By

Published : Aug 9, 2019, 2:03 AM IST

ಶಿವಮೊಗ್ಗ:ಜಿಲ್ಲೆಯಲ್ಲಿ ಸುರಿಯುತ್ತಿರುವ ಧಾರಾಕಾರ ಮಳೆಗೆ ಭದ್ರಾವತಿ ತಾಲ್ಲೂಕಿನ ತಡಸ ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆಯ ಕಟ್ಟಡ ಭಾಗಶಃ ಹಾನಿಯಾಗಿದೆ. ಶಾಲೆಗೆ ರಜೆ ಇದ್ದ ಕಾರಣ ಈ ಘಟನೆ ನಡೆದಿದ್ದರಿಂದ ಜೀವಹಾನಿ ಸಂಭವಿಸಿಲ್ಲ.

ಎಡೆಬಿಡದೆ ಮಳೆ ಬರುತ್ತಿರುವ ಕಾರಣ ಶಾಲೆಗೆ ರಜೆ ಘೋಷಣೆ ಮಾಡಲಾಗಿತ್ತು. ಆದ್ದರಿಂದ ವಿದ್ಯಾರ್ಥಿಗಳು ಶಾಲೆ ಸಮೀಪ ಬಂದಿರಲಿಲ್ಲ. ಶಾಲೆಯ ಕಟ್ಟಡದ ಗೋಡೆಗಳು ಮಣ್ಣಿನ ಗೋಡೆಗಳಾಗಿದ್ದರಿಂದ ಶಿಥಿಲಾವಸ್ಥೆಗೆ ತಲುಪಿದ್ದವು. ಆದ ಕಾರಣ ಮಳೆಗೆ ಗೋಡೆಗಳು ಹಸಿಯಾಗಿ ಕುಸಿದು ಬಿದ್ದಿವೆ. ಕಟ್ಟಡದ ಚಾವಣಿಗಳು, ಹೆಂಚುಗಳು ಸಹ ಬಿದ್ದಿದ್ದು, ಹೊಸ ಕಟ್ಟಡವನ್ನೇ ನಿರ್ಮಿಸಬೇಕಿದೆ.

ABOUT THE AUTHOR

...view details