ಕರ್ನಾಟಕ

karnataka

ETV Bharat / state

ಅತಿಥಿ ಉಪನ್ಯಾಸಕರು ಸಿಎಂ ಕುಮಾರಸ್ವಾಮಿಯನ್ನು ಕ್ಷಮಿಸಲ್ಲ: ಆಯನೂರು ಮಂಜುನಾಥ್ - ಆಯನೂರು ಮಂಜುನಾಥ್

ಅತಿಥಿ ಉಪನ್ಯಾಸಕರ ಭರವಸೆಗಳನ್ನು ಈಡೇರಿಸುವುದಾಗಿ ಕುಮಾರಸ್ವಾಮಿ ತಿಳಿಸಿದ್ದರು. ಈಗ ಆ ಅವಕಾಶವಿದ್ದು, ಕೊಟ್ಟ ಭರವಸೆಗಳನ್ನು ಪೂರ್ಣ ಮಾಡಬೇಕು ಎಂದು ಆಯನೂರು ಮಂಜುನಾಥ್ ಆಗ್ರಹಿಸಿದರು.

ಆಯನೂರು ಮಂಜುನಾಥ್

By

Published : Apr 3, 2019, 3:56 AM IST

ಶಿವಮೊಗ್ಗ:ಎನ್​ಪಿಎಸ್ ಹಾಗೂ ಅತಿಥಿ ಉಪನ್ಯಾಸಕರು ಸಿಎಂ ಕುಮಾರಸ್ವಾಮಿಯನ್ನು ಕ್ಷಮಿಸಲ್ಲ ಎಂದು ವಿಧಾನ ಪರಿಷತ್ ಸದಸ್ಯ ಆಯನೂರು ಮಂಜುನಾಥ್ ತಿಳಿಸಿದ್ದಾರೆ.

ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಮಾತನಾಡಿದ ಅವರು, ಭರವಸೆ ಈಡೇರಿಸುವುದಾಗಿ ಹೇಳಿ ಅಧಿಕಾರಕ್ಕೆ ಬಂದು ಏನು ಮಾಡಿಲ್ಲ. ಈಗ ಮತ್ತೆ ಮತ ಕೇಳಲು ಬಂದಿದ್ದಾರೆ. ಜನ ಬುದ್ಧಿ ಕಲಿಸುತ್ತಾರೆ ಎಂದರು.

ಅತಿಥಿ ಉಪನ್ಯಾಸಕರು ಪ್ರತಿಭಟನೆ ನಡೆಸಿದಾಗ ಕುಮಾರಸ್ವಾಮಿ ಭರವಸೆಗಳನ್ನುಈಡೇರಿಸುವುದಾಗಿ ತಿಳಿಸಿದ್ದರು. ಈಗ ಕುಮಾರಸ್ವಾಮಿ ಅವರಿಗೆ ಆ ಅವಕಾಶವಿದ್ದು, ಕೊಟ್ಟ ಭರವಸೆಗಳನ್ನುಪೂರ್ಣ ಮಾಡಬೇಕು ಎಂದು ಆಗ್ರಹಿಸಿದರು.

ಆಯನೂರು ಮಂಜುನಾಥ್

ತಮ್ಮ ಹೇಳಿಕೆಗೆ ಕಾಂಗ್ರೆಸ್ ಪಕ್ಷದ ಸಣ್ಣ ಹುಡುಗರು ಉತ್ತರ ಕೊಡುತ್ತಾರೆ. ನಾನು ಕೊಡಲ್ಲ ಎಂದು ಡಿ.ಕೆ.ಶಿವಕುಮಾರ್ ನೀಡಿದ್ದ ಹೇಳಿಕೆಗೆ ಕೂಲ್ ಆಗಿ ಉತ್ತರಿಸಿದ ಅವರು, ಯಾರು ಬೇಕಾದರೂ ಉತ್ತರ ಕೊಡಬಹುದು ಎಂದರು. ಬೇಲೂರು ಗೋಪಾಲಕೃಷ್ಣರವರನ್ನು ಸರಿ‌ ಮಾಡಲು ವಾಮಾಚಾರ ಮಾಡಿಸಬೇಕಿದೆ. ಅವರು ನಮ್ಮ ಹಳೇ ಸ್ನೇಹಿತರು ಎಂದರು.

ABOUT THE AUTHOR

...view details