ಶಿವಮೊಗ್ಗ: ರಾಜ್ಯದ ಜನರ ಕಣ್ಣೀರು ಒರೆಸಲಿ ಎಂದು ಹೆಚ್.ಡಿ.ಕುಮಾರಸ್ವಾಮಿಯವರನ್ನು ಸಿಎಂ ಮಾಡಿದ್ರೆ ಅವರು ನನ್ನ ಆರೋಗ್ಯ ಸರಿ ಇಲ್ಲ ಎಂದು ಕಣ್ಣೀರು ಹಾಕ್ತಾರೆ ಎಂದು ಬಿಜೆಪಿ ರಾಜ್ಯ ಸಂಘಟನಾ ಕಾರ್ಯದರ್ಶಿ ಬಿ.ಎಲ್.ಸಂತೋಷ್ ವ್ಯಂಗ್ಯವಾಡಿದ್ದಾರೆ.
ಸಿಎಂ ತಮ್ಮ ಪುತ್ರನನ್ನು ಗೆಲ್ಲಿಸಲು ಕಣ್ಣೀರು ಹಾಕ್ತಾ ಇದ್ದಾರೆ: ಬಿ.ಎಲ್.ಸಂತೋಷ್ - modi
ಸಿಎಂ ತಮ್ಮ ಪುತ್ರನನ್ನು ಗೆಲ್ಲಿಸಲು ಕಣ್ಣೀರು ಹಾಕ್ತಾ ಇದ್ದಾರೆ. ಆದ್ರೆ, ಮೋದಿ ಒಂದು ದಿನವಾದ್ರೂ ಕಣ್ಣೀರು ಹಾಕಿದ್ರಾ ಎಂದು ಬಿಜೆಪಿ ರಾಜ್ಯ ಸಂಘಟನಾ ಕಾರ್ಯದರ್ಶಿ ಬಿ.ಎಲ್.ಸಂತೋಷ್ ಪ್ರಶ್ನೆ ಮಾಡಿದರು.
ಸಿಎಂ ತಮ್ಮ ಪುತ್ರನನ್ನು ಗೆಲ್ಲಿಸಲು ಕಣ್ಣೀರು ಹಾಕ್ತಾ ಇದ್ದಾರೆ. ಆದ್ರೆ, ಮೋದಿ ಒಂದು ದಿನವಾದ್ರೂ ಕಣ್ಣೀರು ಹಾಕಿದ್ರಾ ಎಂದು ಪ್ರಶ್ನೆ ಮಾಡಿದರು. ಶಿವಮೊಗ್ಗ ತಾಲೂಕು ಗಾಜನೂರು ಗ್ರಾಮದಲ್ಲಿ ಮಹಾಶಕ್ತಿ ಕೇಂದ್ರದ ಸಭೆಯಲ್ಲಿ ಮಾತನಾಡಿದ ಅವರು, ಚುನಾವಣೆ ವೇಳೆಯಲ್ಲಿ ಮಾತ್ರ ಕುಮಾರಸ್ವಾಮಿಗೆ ಆರೋಗ್ಯ ಸರಿ ಇರೋದಿಲ್ಲ. ಚುನಾವಣೆ ನಂತ್ರ ಅವರಿಗೆ ಆರೋಗ್ಯ ಚೆನ್ನಾಗಿ ಆಗಿ ಬಿಡುತ್ತೆ ಎಂದರು.
ದೇಶ ಭ್ರಷ್ಟಾಚಾರ ಇಲ್ಲದ ಆಡಳಿತ ನೋಡಿದೆ. ಇದು ಮುಂದುವರೆಯಬೇಕು ಅಂದ್ರೆ ಮೋದಿ ಮತ್ತೊಮ್ಮೆ ಅಧಿಕಾರಕ್ಕೆ ಬರಬೇಕು. ರಾಜಕೀಯ ಹಾಗೂ ರಾಜಕಾರಣಿಗಳು ಅಂದ್ರೆ ವಾಕರಿಕೆ ಬರುತ್ತಿತ್ತು. ಸಭೆಗೆ ಜನರನ್ನು ಕರೆತರಲು ಹಣ ನೀಡಬೇಕಿತ್ತು. ಮೋದಿ ಬಂದ ಮೇಲೆ ವಾತಾವರಣ ಬದಲಾಗಿದೆ. ಮೋದಿರವರನ್ನು ಪ್ರಧಾನಿ ಮಾಡಲು ನಮ್ಮೂರಿನ ರಾಘವೇಂದ್ರನಿಗೆ ಗೆಲ್ಲಿಸಬೇಕಿದೆ ಎಂದರು.