ಕರ್ನಾಟಕ

karnataka

ETV Bharat / state

'ಸಿಎಂ ಬಿಎಸ್​ವೈ ಅವರು 100ನೇ ವರ್ಷದ ಜನ್ಮ ದಿನ ಆಚರಿಸಿಕೊಳ್ಳುವಂತಾಗಲಿ': ಸಚಿವ ಈಶ್ವರಪ್ಪ - Minister KS Eshwarappa

ಶಿವಮೊಗ್ಗ ಜಿಲ್ಲೆಯ ಗೋಪಾಳ ನಗರದಲ್ಲಿ ನೂತನವಾಗಿ ನಿರ್ಮಿಸಿದ ಜಿಲ್ಲಾ ಔಷಧ ಭವನನ್ನು ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಅವರು ಉದ್ಘಾಟಿಸಿದರು. ಮುಖ್ಯಮಂತ್ರಿಗಳಿಗೆ ಸಚಿವ ಕೆ.ಎಸ್ ಈಶ್ವರಪ್ಪ ಸಾಥ್ ನೀಡಿದರು..

shivamogga
ನಮ್ಮೊಲುಮೆಯ ಭಾವಾಭಿನಂದನಾ' ಕಾರ್ಯಕ್ರಮ

By

Published : Mar 1, 2021, 7:18 AM IST

ಶಿವಮೊಗ್ಗ :ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪನವರಿಗೆ ಶಿವಮೊಗ್ಗ ಜಿಲ್ಲೆಯ ಸಮಸ್ತ ನಾಗರಿಕರ ಪರವಾಗಿ 'ನಮ್ಮೊಲುಮೆಯ ಭಾವಾಭಿನಂದನಾ' ಕಾರ್ಯಕ್ರಮ ಆಯೋಜಿಸಲಾಗಿತ್ತು.

ನಮ್ಮೊಲುಮೆಯ ಭಾವಾಭಿನಂದನಾ ಕಾರ್ಯಕ್ರಮ..

ನಗರದ ಹಳೆ ಜೈಲು ಆವರಣದಲ್ಲಿ‌ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಸಚಿವ ಕೆ.ಎಸ್​. ಈಶ್ವರಪ್ಪ, ರಾಜ್ಯದ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು 100ನೇ ವರ್ಷದ ಜನ್ಮ ದಿನ ಆಚರಿಸಿಕೊಳ್ಳುವಂತಾಗಲಿ ಎಂದು ಶುಭ ಹಾರೈಸಿದರು.

ಯಡಿಯೂರಪ್ಪ ರೈತರನ್ನು ಸಂಘಟಿಸಿದ್ದೇ ರೋಚಕ. ನಾನು ಮತ್ತು ಅವರು ಒಂದು ಸ್ಕೂಟರ್​​ನಲ್ಲಿ ಇಡೀ ಶಿವಮೊಗ್ಗ ಸುತ್ತಿದ್ದೆವು. ರೈತರ ಸಂಘಟನೆಗೆ ಇಡೀ ಶಿವಮೊಗ್ಗ ಸುತ್ತಿ ಅಂದು ಒಂದು ಲಕ್ಷ ರೂ. ಒಟ್ಟು ಗೂಡಿಸಿದ್ದೆವು. 25 ಸಾವಿರ ರೈತರನ್ನು ಸೇರಿಸಿ ಶಿವಮೊಗ್ಗದಲ್ಲಿ ಸಮಾವೇಶ ಮಾಡಿದ್ದೆವು. ಬ

ಳಿಕ ಕಾಲಿಗೆ ಚಕ್ರ ಕಟ್ಟಿಕೊಂಡು ಇಡೀ ರಾಜ್ಯ ಸುತ್ತಿದ್ದರ ಪರಿಣಾಮ ಇದೀಗ ರೈತರ ಪರ ಸರ್ಕಾರ ಅಧಿಕಾರಕ್ಕೆ ಬಂದಿದೆ ಎಂದು ಹಳೆಯ ನೆನಪುಗಳನ್ನು ಮೆಲಕು ಹಾಕಿದರು. ಇಳಿ ವಯಸ್ಸಿನಲ್ಲಿಯೂ ಸಿಎಂ ಬಿಎಸ್​ವೈ ಅವರು ರೈತರ ಪರ ಹೋರಾಡುತ್ತಿದ್ದಾರೆ. ನಾವೆಲ್ಲರೂ ಸೇರಿ ರಾಷ್ಟ್ರೀಯ ವಿಚಾರ ಜಾಗೃತಗೊಳಿಸೋಣ ಎಂದು ಸಚಿವ ಈಶ್ವರಪ್ಪ ತಿಳಿಸಿದರು.

ಔಷಧ ಭವನ ಉದ್ಘಾಟಿಸಿದ ಸಿಎಂ ಬಿಎಸ್​ವೈ

ಔಷಧ ಭವನ ಉದ್ಘಾಟಿಸಿದ ಸಿಎಂ ಬಿಎಸ್​ವೈ :ಶಿವಮೊಗ್ಗ ಜಿಲ್ಲೆಯ ಗೋಪಾಳ ನಗರದಲ್ಲಿ ನೂತನವಾಗಿ ನಿರ್ಮಿಸಿದ ಜಿಲ್ಲಾ ಔಷಧ ಭವನನ್ನು ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಅವರು ಉದ್ಘಾಟಿಸಿದರು. ಮುಖ್ಯಮಂತ್ರಿಗಳಿಗೆ ಸಚಿವ ಕೆ.ಎಸ್ ಈಶ್ವರಪ್ಪ ಸಾಥ್ ನೀಡಿದರು.

ಓದಿ:ಗ್ರಾಮೀಣ ಭಾಗದ ರಸ್ತೆಗಳ ಅಭಿವೃದ್ದಿಗೆ ಆದ್ಯತೆ: ಸಚಿವ ಕೆ.ಎಸ್. ಈಶ್ವರಪ್ಪ

ABOUT THE AUTHOR

...view details