ಶಿವಮೊಗ್ಗ:ರಂಗಭೂಮಿಯ ವೃತ್ತಿಪರತೆಯನ್ನು ಗಟ್ಟಿಗೊಳಿಸುವ ನಿಟ್ಟಿನಲ್ಲಿ ಶಿವಮೊಗ್ಗ ರಂಗಾಯಣ ಕಳೆದ 10 ವರ್ಷಗಳಲ್ಲಿ ದೃಢವಾದ ಹೆಜ್ಜೆಯನ್ನು ಇರಿಸಿದ್ದು, ರಂಗಾಯಣದ ವೆಬ್ಸೈಟ್ಗೆ ಸಿಎಂ ಚಾಲನೆ ನೀಡಿದ್ದಾರೆ.
ಶಿವಮೊಗ್ಗದ ವಿನೋಬನಗರದ ತಮ್ಮ ನಿವಾಸದಲ್ಲಿ ರಂಗಾಯಣದ ನೂತನ ವೆಬ್ಸೈಟ್ಗೆ ಚಾಲನೆ ನೀಡಿ ಮಾತನಾಡಿದ ಅವರು, ಶಿವಮೊಗ್ಗ ರಂಗಾಯಣ ನಿರಂತರ ರಂಗ ಚಟುವಟಿಕೆಗಳ ಮೂಲಕ ರಂಗಾಸಕ್ತರನ್ನು ಸೆಳೆಯುತ್ತಿದೆ ಎಂದು ಶ್ಲಾಘನೆ ವ್ಯಕ್ತಪಡಿಸಿದರು.
ನಿರಂತರ ರಂಗ ಚಟುವಟಿಕೆಗಳ ಮೂಲಕ ರಂಗಾಸಕ್ತರನ್ನು ರಂಗಾಯಣ ಸೆಳೆಯುತ್ತಿದೆ. ರಂಗ ಸಂಕ್ರಾತಿ ರಾಷ್ಟ್ರೀಯ ನಾಟಕೋತ್ಸವ, ವಿಶ್ವಮಾನವ ಅಂತಾರಾಷ್ಟ್ರೀಯ ರಂಗೋತ್ಸವ, ವಿಶ್ವರಂಗಭೂಮಿ ದಿನಾಚರಣೆ ಮುಂತಾದ ಕಾರ್ಯಕ್ರಮಗಳ ಮೂಲಕ ಹಾಗೂ ಆನ್ಲೈನ್ ಕಾರ್ಯಕ್ರಮಗಳ ಮೂಲಕ ರಂಗಚಟುವಟಿಕೆಗಳನ್ನು ಜೀವಂತವಾಗಿರಿಸಿರುವುದು ಪ್ರಶಂಸನೀಯ ಎಂದು ಸಿಎಂ ಬಿಎಸ್ವೈ ರಂಗಾಯಣವನ್ನು ಹೊಗಳಿದರು.