ಕರ್ನಾಟಕ

karnataka

ETV Bharat / state

ಶಿವಮೊಗ್ಗ: ಮಳೆಯಲ್ಲೇ ಅಭಿವೃದ್ಧಿ ಕಾಮಗಾರಿ ವೀಕ್ಷಿಸಿದ ಸಿಎಂ ಬಿಎಸ್​ವೈ - Shimoga cm bs yadiyurappa news

ಬೆಳ್ಳಂಬೆಳಗ್ಗೆ ಉಡುಗಣಿಯಲ್ಲಿ ಅಕ್ಕಮಹಾದೇವಿಯ ಜನ್ಮ ಸ್ಥಳ ಉಡುತಡಿಯ ಅಭಿವೃದ್ಧಿ ಕಾಮಗಾರಿಯನ್ನು ಸಿಎಂ ಬಿ.ಎಸ್.ಯಡಿಯೂರಪ್ಪ ವೀಕ್ಷಿಸಿದರು.

CM BSY has observed the work progress in Shimoga
ಕಾಮಗಾರಿ ವೀಕ್ಷಿಸಿದ ಸಿಎಂ ಬಿಎಸ್​ವೈ

By

Published : Jun 13, 2021, 12:32 PM IST

ಶಿವಮೊಗ್ಗ:ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಇಂದು ಬೆಳಗ್ಗೆ ಮಳೆಯನ್ನೂ ಲೆಕ್ಕಿಸದೇ ಸ್ವೇಕ್ಷೇತ್ರ ಶಿಕಾರಿಪುರದಲ್ಲಿ ಕಾಮಗಾರಿಗಳ ವೀಕ್ಷಣೆ ನಡೆಸಿದ್ದಾರೆ.

ಬೆಳ್ಳಂಬೆಳಗ್ಗೆ ಉಡುಗಣಿಯಲ್ಲಿ ಅಕ್ಕಮಹಾದೇವಿಯ ಜನ್ಮ ಸ್ಥಳ ಉಡುತಡಿಯ ಅಭಿವೃದ್ಧಿ ಕಾಮಗಾರಿಯನ್ನು ವೀಕ್ಷಿಸಿದರು. ಉಡುತಡಿಯನ್ನು ಒಂದು ಪ್ರೇಕ್ಷಣಿಯ ಸ್ಥಳವನ್ನಾಗಿಸುವ ದೃಷ್ಟಿಯಿಂದ ಅದನ್ನು ಅಭಿವೃದ್ಧಿಗೊಳಿಸಲಾಗುತ್ತಿದೆ. ಉಡುತಡಿ ವೀಕ್ಷಣೆ ನಡೆಸಿದ ನಂತರ ಶಿಕಾರಿಪುರದ ಕಸಬಾವಾದ ಕಲ್ಲವಡ್ಡು ಹಳ್ಳ ಏತ ನೀರಾವರಿ ಯೋಜನಾ ಸ್ಥಳಕ್ಕೆ ಭೇಟಿ‌ ನೀಡಿದರು.

ಕಾಮಗಾರಿ ವೀಕ್ಷಿಸಿದ ಸಿಎಂ ಬಿಎಸ್​ವೈ

ಈ ಯೋಜನೆಯಿಂದ ಶಿಕಾರಿಪುರದ 25 ಗ್ರಾಮಗಳು, ಸೊರಬದ 6 ಗ್ರಾಮಗಳಿಗೆ ಅನುಕೂಲವಾಗಲಿದೆ. ಈ ಯೋಜನೆಗೆ ಬೇಕಾದ ಹಣಕಾಸನ್ನು ಈಗಾಗಲೇ ಮಂಜೂರು ಮಾಡಲಾಗಿದೆ. ಹಾಗಾಗಿ ಉಡುತಡಿ ಹಾಗೂ ಕಲ್ಲುವಡ್ಡು ಯೋಜನೆ ಕಾಮಗಾರಿಯನ್ನು ಉತ್ತಮ ಗುಣಮಟ್ಟದಲ್ಲಿ ನಿರ್ಮಿಸುವಂತೆ ಸಿಎಂ ಸೂಚನೆ ನೀಡಿದರು. ಈ ವೇಳೆ ಸಂಸದ ಬಿ.ವೈ.ರಾಘವೇಂದ್ರ, ಎಂಎಡಿಬಿ ಅಧ್ಯಕ್ಷ ಕೆ.ಎಸ್.ಗುರುಮೂರ್ತಿ ಸೇರಿದಂತೆ ಇತರರು ಇದ್ದರು.

ಇದನ್ನೂ ಓದಿ:ಬಾಳೆ ಬೆಲೆ ಕುಸಿತ: ರಾಮನಗರದಲ್ಲಿ ಬೆಳೆ ನಾಶಪಡಿಸಿದ ರೈತ

ABOUT THE AUTHOR

...view details