ಶಿವಮೊಗ್ಗ :ಸಚಿವ ಉಮೇಶ್ ಕತ್ತಿ ಅವರೇನು ಹೇಳಿದ್ದಾರೆ ಅನ್ನೋದನ್ನ ನೋಡೋಣ ಅಂತಾ ಸಿಎಂ ಬಿ ಎಸ್ ಯಡಿಯೂರಪ್ಪ ಹೇಳಿದ್ದಾರೆ.
ನಗರದಲ್ಲಿ ಮಾತನಾಡಿದ ಅವರು, ಐ ಡೋಂಟ್ ವಾಂಟ್ ಟು ಕಮೆಂಟ್ ಆನ್ ದಿಸ್ ಅಂದರು. ಟಿವಿ, ಬೈಕ್ ಇದ್ದವರಿಗೆ ಬಿಪಿಎಲ್ ಕಾರ್ಡ್ ರದ್ದುಗೊಳಿಸಲಾಗುವುದು ಎಂದು ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಉಮೇಶ್ ಕತ್ತಿ ಹೇಳಿಕೆಗೆ ಸಂಬಂಧಿಸಿದಂತೆ ಸಿಎಂ ಈ ರೀತಿ ಪ್ರತಿಕ್ರಿಯಿಸಿದ್ದಾರೆ.
ಸಚಿವ ಕತ್ತಿ ಅವರ ಹೇಳಿಕೆ ಕುರಿತಂತೆ ಸಿಎಂ ಬಿಎಸ್‌ವೈ ಪ್ರತಿಕ್ರಿಯೆ.. ಈ ಮಾತಿಗೂ ಮೊದಲು ಸಿಎಂ ಬಿಎಸ್‌ವೈ ಅವರು, ರೈಲ್ವೆ ಸಚಿವರಾದ ಪಿಯೂಷ್ ಗೋಯಲ್ ಅವರು ತುಂಬಾ ಅಭಿಮಾನದಿಂದ ಕರ್ನಾಟಕದ ಸರ್ವಾಂಗೀಣ ಅಭಿವೃದ್ಧಿಗಾಗಿ ಪ್ರಧಾನಿ ನರೇಂದ್ರ ಮೋದಿಯವರು ಸೂಚನೆ ಕೊಟ್ಟಂತೆ ಎಲ್ಲಾ ರೀತಿಯ ಕೆಲಸಗಳನ್ನು ಮಾಡಿಕೊಡುತ್ತೇವೆ ಎಂಬ ಭರವಸೆ ನೀಡಿದ್ದಾರೆ. ರೈಲ್ವೆ ಮೇಲ್ಸೇತುವೆಗಳ ಕಾಮಗಾರಿಯನ್ನು ಒಂದುಕಾಲು ವರ್ಷದಲ್ಲಿ ಮುಗಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ ಎಂದರು.
ರೈಲ್ವೆ ಇಲಾಖೆಯಿಂದ 4,000 ಸಾವಿರ ಕೋಟಿಗೂ ಅಧಿಕ ಅನುದಾನವನ್ನು ಈ ವರ್ಷ ಒದಗಿಸಿದ್ದಾರೆ. ಇದರಿಂದಲೇ ಕರ್ನಾಟಕದ ಬಗ್ಗೆ ಮೋದಿಯವರಿಗೆ ಹಾಗೂ ರೈಲ್ವೆ ಸಚಿವರಿಗೆ ಇರುವ ಆಸಕ್ತಿ ಗೊತ್ತಾಗುತ್ತದೆ ಎಂದರು.