ಕರ್ನಾಟಕ

karnataka

ETV Bharat / state

ಶ್ರೀಮಂತರು‌ ಬಿಪಿಎಲ್ ಕಾರ್ಡ್ ಹೊಂದಿದ್ದರೆ, ತಕ್ಷಣ ವಾಪಸ್ ಮಾಡಿ: ಸಿಎಂ ಬಿಎಸ್​ವೈ

ಬಿಪಿಎಲ್ ಕಾರ್ಡ್ ಕುರಿತು ಹೆಚ್ಚಿನ ಚರ್ಚೆ ಬೇಡ. 2017ರ ಏನೇನೂ ಸೂಚನೆಗಳನ್ನು ನೀಡಲಾಗಿದೆಯೋ ಅದೇ ಮುಂದುವರೆಯುತ್ತದೆ. ಅದರಲ್ಲಿ ವ್ಯತ್ಯಾಸಗಳಾಗಲ್ಲ ಎಂದು ಸಿಎಂ ಬಿ.ಎಸ್.ಯಡಿಯೂರಪ್ಪ ಸ್ಪಷ್ಟನೆ ನೀಡಿದ್ದಾರೆ.

By

Published : Feb 16, 2021, 1:56 PM IST

CM BS Yeddyurappa reaction about bpl card
ಶ್ರೀಮಂತರು‌ ಬಿಪಿಎಲ್ ಕಾರ್ಡ್ ಹೊಂದಿದ್ದರೆ, ತಕ್ಷಣ ವಾಪಾಸ್ ಮಾಡಿ

ಶಿವಮೊಗ್ಗ:ಶ್ರೀಮಂತರು‌ ಬಿಪಿಎಲ್ ಕಾರ್ಡ್ ಹೊಂದಿದ್ದರೆ, ತಕ್ಷಣ ವಾಪಸ್ ನೀಡಬೇಕೆಂದು ಸಿಎಂ ಬಿ.ಎಸ್.ಯಡಿಯೂರಪ್ಪ ಅನಾವಶ್ಯಕವಾಗಿ ಬಿಪಿಎಲ್ ಕಾರ್ಡ್ ಹೊಂದಿರುವವರಿಗೆ ಖಡಕ್ ಸೂಚನೆ ನೀಡಿದ್ದಾರೆ.

ಶ್ರೀಮಂತರು‌ ಬಿಪಿಎಲ್ ಕಾರ್ಡ್ ಹೊಂದಿದ್ದರೆ, ತಕ್ಷಣ ವಾಪಸ್ ಮಾಡಿ: ಸಿಎಂ ಬಿಎಸ್​ವೈ

ನಗರದಲ್ಲಿ ಮಾತನಾಡಿದ ಅವರು, ಬಿಪಿಎಲ್ ಕಾರ್ಡ್ ಕುರಿತು ಹೆಚ್ಚಿನ ಚರ್ಚೆ ಬೇಡ. 2017ರ ಏನೇನೂ ಸೂಚನೆಗಳನ್ನು ನೀಡಲಾಗಿದೆಯೋ ಅದೇ ಮುಂದುವರೆಯುತ್ತದೆ. ಅದರಲ್ಲಿ ವ್ಯತ್ಯಾಸಗಳಾಗಲ್ಲ. ಶ್ರೀಮಂತರಿಗೆ ಬಿಪಿಎಲ್ ಕಾರ್ಡ್ ಸೌಲಭ್ಯ ತಲುಪುತ್ತಿರುವುದು ತಪ್ಪಬೇಕಿದೆ. ಇದಕ್ಕಾಗಿ ಎಲ್ಲಾ ಡಿಸಿರವರಿಗೆ ಸೂಚನೆ ನೀಡಿದ್ದೇನೆ. ಯಾರು ಕಾನೂನು ಬಾಹಿರವಾಗಿ ಬಿಪಿಎಲ್ ಕಾರ್ಡ್ ಪಡೆದಿದ್ದರೂ ತಕ್ಷಣ ವಾಪಾಸ್ ಮಾಡಬೇಕು. ಇಲ್ಲವಾದಲ್ಲಿ ಅವರ ಮೇಲೆ ಕಾನೂನು ಕ್ರಮ ಜರುಗಿಸಲಾಗುವುದು. ಯಾರಿಗೆ ಬಿಪಿಎಲ್ ಕಾರ್ಡ್ ಅವಶ್ಯಕತೆ ಇಲ್ಲವೂ ಅವರು ಸ್ವಯಂಪ್ರೇರಿತರಾಗಿ ಬಿಪಿಎಲ್ ಕಾರ್ಡ್ ವಾಪಸ್​ ನೀಡಬೇಕು. ಇದು ಅವರ ದೃಷ್ಟಿಯಿಂದಲೂ ಒಳ್ಳೆಯದು ಎಂದರು.

ಮೀಸಲಾತಿ ಹೋರಾಟದ ಕುರಿತು ಪ್ರತಿಕ್ರಿಯಿಸಿ, ಕಾನೂನು ಚೌಕಟ್ಟಿನೊಳಗೆ ಏನೋ ಮಾಡಬೇಕೋ ಮಾಡಲಾಗುತ್ತದೆ. ಮೀಸಲಾತಿ ವಿಚಾರವನ್ನು ಚರ್ಚೆ ಕ್ಯಾಬಿನೆಟ್​​ನಲ್ಲಿಟ್ಟು ಸುದೀರ್ಘ ಚರ್ಚೆ ನಡೆಸಿ, ತೀರ್ಮಾನ ಮಾಡಲಾಗುವುದು ಎಂದರು. ಸಚಿವರೇ ಮೀಸಲಾತಿ ಕುರಿತು ಹೋರಾಟ ನಡೆಸುತ್ತಿರುವ ಕುರಿತು ಪ್ರತಿಕ್ರಿಯಿಸಿ, ನಾನು ಎಲ್ಲವನ್ನು ಗಮನಿಸುತ್ತಿದ್ದೇನೆ.‌ ಯಾರ ಪರ ಮಾತನಾಡುತ್ತಿದ್ದಾರೆ ಎಂದು ತಿಳಿದಿದೆ. ಎಲ್ಲಾದರ ಬಗ್ಗೆ ಗಮನ ಹರಿಸುತ್ತೇನೆ ಎಂದರು.

ಸೋಮವಾರ ಮಾಜಿ ಸಿಎಂ ಕುಮಾರಸ್ವಾಮಿ ಶಿವಮೊಗ್ಗದಲ್ಲಿ ಸರ್ಕಾರದ ಕುರಿತು‌ ನೀಡಿರುವ ಹೇಳಿಕೆಗೆ ಪ್ರತಿಕ್ರಿಯಿಸಿ, ಅವರು ವಿರೋಧ ಪಕ್ಷದವರು. ಅವರು ಅಲ್ಲಿ ಕುಳಿತು ಹಾಗೆ ಮಾತನಾಡಲೇ ಬೇಕು. ಅವರಿಗೆ ತಕ್ಕ ಉತ್ತರ‌ ನೀಡುತ್ತೇನೆ ಎಂದರು.

ಇನ್ನು, ಬರುವ ಉಪ ಚುನಾವಣೆಯಲ್ಲಿ 3 ವಿಧನಾಸಭೆ ಹಾಗೂ ಒಂದು ಲೋಕಸಭ ಕ್ಷೇತ್ರವನ್ನು ಗೆದ್ದೇ ಗೆಲ್ಲುತ್ತೇವೆ. ಇದಕ್ಕೆ ನಮ್ಮ ರಾಜ್ಯಾಧ್ಯಕ್ಷರು ಸಿದ್ದತೆ ನಡೆಸಿದ್ದಾರೆ‌. ಕ್ಷೇತ್ರಗಳ‌ ಉಸ್ತುವಾರಿಯನ್ನು ನೀಡಲಾಗಿದೆ. ಅವರು ಶೀಘ್ರದಲ್ಲಿ ಕ್ಷೇತ್ರಗಳಿಗೆ ತೆರಳಿ, ಅಭ್ಯರ್ಥಿಗಳ ಪಟ್ಟಿ ನೀಡುತ್ತಾರೆ ಎಂದರು.‌

ABOUT THE AUTHOR

...view details