ಶಿವಮೊಗ್ಗ: ಒಬ್ಬ ರಾಜಕಾರಣಿಯ ಕಣ್ಣು ಮುಂದಿನ ಚುನಾವಣೆಯ ಮೇಲೆ ಇರುತ್ತದೆ. ಆದರೆ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರಂತಹ ಮುತ್ಸದ್ಧಿಯ ಕಣ್ಮುಂದೆ ಭವಿಷ್ಯದ ಜನಾಂಗದ ಮೇಲೆ ಇರುತ್ತದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಯಿ ಹೇಳಿದರು.
ಶಿಕಾರಿಪುರದಲ್ಲಿ ಮಾಜಿ ಸಿಎಂ ಯಡಿಯೂರಪ್ಪನವರ ರೈತಾಭಿಮಾನ ಕಾರ್ಯಕ್ರಮದಲ್ಲಿ ಭಾಗಿಯಾಗಿ ಮಾತನಾಡಿದ ಅವರು, ನನ್ನ ನಾಯಕರು, ರೈತ ನಾಯಕರು. ಸತ್ಯ, ಸ್ವಾಭಿಮಾನಕ್ಕಾಗಿ ನಿರಂತರ ಹೋರಾಟ, ಚಳವಳಿ ನಡೆಸಿದ ಧೀಮಂತ ನಾಯಕ ಯಡಿಯೂರಪ್ಪನವರು ಎಂದು ಕೊಂಡಾಡಿದರು.
ಯಡಿಯೂರಪ್ಪನವರನ್ನ ಹಾಡಿಹೊಗಳಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಶಿಕಾರಿಪುರದ ಬಗ್ಗೆ, ಯಡಿಯೂರಪ್ಪನವರ ಬಗ್ಗೆ ಮಾತನಾಡಿದರೆ, ಸೂರ್ಯನಿಗೆ ದೀಪ ಹಿಡಿದಂತೆ ಆಗುತ್ತದೆ. ಶಿಕಾರಿಪುರದ ಪ್ರತಿ ಮನೆ ಮನದಲ್ಲಿ ಅವರು ನೆಲೆಸಿದ್ದಾರೆ. ಬಿಎಸ್ವೈ ಅವರನ್ನು ಬೆಳೆಸಿದ ಶಿಕಾರಿಪುರದ ಜನತೆಗೆ ಅಭಿನಂದನೆಗಳು. ಯಡಿಯೂರಪ್ಪನವರ ಎಷ್ಟು ಬಿಗಿಯಾಗಿ ಕಾಣುತ್ತಾರೋ, ಅಷ್ಟು ಬಡವರ ದೀನ ದಲಿತರ ಪರವಾಗಿ ಕಾಣುತ್ತಾರೆ ಎಂದು ಹೇಳಿದರು.
ನನ್ನನ್ನು ಅತ್ಯಂತ ಪ್ರೀತಿ ವಿಶ್ವಾಸದಿಂದ ಬೆಳೆಸಿದ್ದಾರೆ. ನನ್ನನ್ನು ನೀರಾವರಿ ಸಚಿವರನ್ನಾಗಿ, ಗೃಹ ಸಚಿವರಾಗಿ ಈಗ ಸಿಎಂ ಆಗಿ ಮಾಡಿದ್ದಾರೆ. ತುಂಗಾ ಮೇಲ್ಡಂಡೆ ಹಾಗೂ ಭದ್ರಾ ಮೇಲ್ದಂಡೆಗೆ ಚಾಲನೆ ನೀಡಿದವರು ಯಡಿಯೂರಪ್ಪನವರು, ಭದ್ರಾ ಮೇಲ್ದಂಡೆಯು ಈಗ ರಾಷ್ಟ್ರೀಯ ಯೋಜನೆಯಾಗಿ ಬದಲಾಗುತ್ತಿದೆ. ಇದು ಯಡಿಯೂರಪ್ಪನವರ ದೂರದೃಷ್ಟಿಯಿಂದ ಆಗಿದೆ. ಏತ ನೀರಾವರಿಯ ರೂವಾರಿಗಳು ಅವರು. ಚಾಮರಾಜನಗರ ಜಿಲ್ಲೆಯ ಪ್ರವಾಸದಲ್ಲಿದ್ದಾಗ ವೃದ್ಧೆಯೊಬ್ಬರು ಬಂದು ಅವರ ಕಾಲು ಹಿಡಿದು ಕೆರೆ ತುಂಬಿಸಿದಕ್ಕೆ ಅಭಿನಂದನೆ ಸಲ್ಲಿಸಿದರು. 58 ಲಕ್ಷ ರೈತರಿಗೆ ನಾಲ್ಕು ಸಾವಿರ ರೂ. ನೀಡುವ ಯೋಜನೆ ನೀಡಿದವರು ಬಿಎಸ್ವೈ ಎಂದು ಸಿಎಂ ಹಾಡಿ ಹೊಗಳಿದರು.
ಶಿಕಾರಿಪುರದ ಜನತೆ ಅದೃಷ್ಟಶಾಲಿಗಳು, ಅದೇ ರೀತಿ ಯಡಿಯೂರಪ್ಪನವರು ಸಹ ಅದೃಷ್ಟಶಾಲಿಗಳು. ಅವರು ಎಂದು ವೈಯಕ್ತಿಕವಾಗಿ ಏನೂ ಯೋಚನೆ ಮಾಡಿಲ್ಲ. ಅವರು ಪಕ್ಷ ಹಾಗು ಜನತೆಯ ಸಲುವಾಗಿ ಯೋಚನೆ ಮಾಡುತ್ತಾರೆ. ಅವರು ಅಧಿಕಾರ ಬಿಟ್ಟಾಗ ಎಲ್ಲೂ ಕಹಿ ಇರಲಿಲ್ಲ. ಅವರ ಹಾದಿಯಲ್ಲೇ ನಾವು ಸಾಗುತ್ತಿದ್ದೇವೆ ಎಂದು ಬೊಮ್ಮಾಯಿ ಹೇಳಿದರು.
ಕೋವಿಡ್ನಲ್ಲಿ ಸರ್ಕಾರವನ್ನ ಯಶಸ್ವಿಯಾಗಿ ನಿರ್ವಹಿಸಿದ್ದರಿಂದ ನಾವು ಇಂದು ಬಜೆಟ್ ಮಂಡಿಸಲು ಸಾಧ್ಯವಾಗಿದೆ. ರೈತರಿಗೆ, ದೀನದಲಿತರು, ಮಹಿಳೆಯರಿಗೆ ಸಹ ಸಲ್ಲುವ ಬಜೆಟ್ ನೀಡಿದ್ದೇವೆ. ದುಡಿಮೆಯೇ ದೊಡ್ಡಪ್ಪ ಎಂಬ ಬಜೆಟ್ ನೀಡಿದ್ದೇವೆ. ಕರ್ನಾಟಕ ಸುಭಿಕ್ಷವಾದ ನಾಡಗಬೇಕು. ಸ್ವಾಭಿಮಾನದ, ದೇಶಕ್ಕೆ ಮಾದರಿಯಾದ ರಾಜ್ಯವಾಗಬೇಕು ಎಂದು ನಮ್ಮ ನಾಯಕ ಯಡಿಯೂರಪ್ಪನವರ ಆಶಯದಂತೆ ನಡೆಯುತ್ತಿದ್ದೆನೆ ಎಂದರು.