ಕರ್ನಾಟಕ

karnataka

ETV Bharat / state

ಮನೆ ಮಾಲೀಕನಿಗೆ ಪೇಪರ್, ಹಾಲು ತಂದು‌ ಕೊಡುವ ಚಾಲಾಕಿ ನಾಯಿ - Dog and human relationship

ಪ್ರಕಾಶ್​ ತಿಮ್ಮಪ್ಪ ಅವರ 7 ತಿಂಗಳ ನಾಯಿ ಮಾಲೀಕ ಹೇಳಿದ ಎಲ್ಲ ಕೆಲಸವನ್ನು ಚಾಚೂ ತಪ್ಪದೇ ಮಾಡುತ್ತಿದ್ದು, ಇದರ ಕಾರ್ಯವೈಖರಿಗೆ ಗ್ರಾಮವೇ ಬೆರಗಾಗಿದೆ.

ಪೇಪರ್ ಹಾಲು ತಂದು‌ ಕೊಡುವ ಚಾಲಾಕಿ ನಾಯಿ
ಪೇಪರ್ ಹಾಲು ತಂದು‌ ಕೊಡುವ ಚಾಲಾಕಿ ನಾಯಿ

By

Published : Aug 26, 2022, 9:37 AM IST

Updated : Aug 26, 2022, 1:39 PM IST

ಶಿವಮೊಗ್ಗ:ನಿಯತ್ತಿಗೆ ಇನ್ನೊಂದು ಹೆಸರೇ ನಾಯಿ. ನಾಯಿ ಹಾಗೂ ಮನುಷ್ಯನ ಸಂಬಂಧ ಅವಿನಾಭಾವವಾಗಿದೆ. ನಾಯಿಗಳು ಮನುಷ್ಯನ ಎಲ್ಲ ಮಾತನ್ನು ಕೇಳುತ್ತಾ ಅವರ‌ ಸಣ್ಣ ಪುಟ್ಟ ಕೆಲಸಗಳನ್ನೂ ಮಾಡಿಕೊಡುತ್ತದೆ. ಅದರಂತೆಯೇ ಶಿವಮೊಗ್ಗ ಜಿಲ್ಲೆ ಸೊರಬ ತಾಲೂಕಿನ ಉಮಟೆಗದ್ದೆಯ ಪ್ರಕಾಶ್ ತಿಮ್ಮಪ್ಪ ಎಂಬುವರ ಮನೆಯಲ್ಲಿ ಸಾಮಾನ್ಯ ಸಾಕು ನಾಯಿಯೂ ಇವರ ಮಾತನ್ನು ಚಾಚೂ ತಪ್ಪದೆ ಪಾಲಿಸುತ್ತದೆ.

ಪ್ರಕಾಶ್ ಅವರ ಮನೆಗೆ ನಿತ್ಯ ಬರುವ ಪೇಪರ್ ಅನ್ನು ಕಾಂಪೌಂಡ್​ನಿಂದ ಮನೆ ಒಳಗೆ ತಂದು ಕೊಡುತ್ತದೆ. ಅಲ್ಲದೇ ಬ್ಯಾಗ್ ನೀಡಿದರೆ ಸಾಕು ತರಕಾರಿ ತರುವುದು. ಹೂಗಳನ್ನು ಕಿತ್ತುಕೊಟ್ಟರೆ ಅದನ್ನು ಮನೆಗೆ ತಲುಪಿಸುವುದು ಮಾಡುತ್ತದೆ. ಅಂದ ಹಾಗೆ ಈ ನಾಯಿಯ ಹೆಸರು ಡಾಲಿ. ಇದು ಸಾಮಾನ್ಯ ನಾಯಿ. ಇದಕ್ಕೆ ಈಗ ವಯಸ್ಸು ಕೇವಲ 7 ತಿಂಗಳು ಮಾತ್ರ.

ಪೇಪರ್, ಹಾಲು ತಂದು‌ ಕೊಡುವ ಚಾಲಾಕಿ ನಾಯಿ

ಈ ನಾಯಿಗೆ ಯಾವುದೇ ತರಬೇತಿ ಕೊಡಿಸಿಲ್ಲ. ಇದರ ಮಾಲೀಕ ಪ್ರಕಾಶ್ ತಿಮ್ಮಪ್ಪ ಅವರ ಮಾತನ್ನು ಚಾಚೂ ತಪ್ಲದೇ ಪಾಲಿಸುತ್ತದೆ. ಡಾಲಿ ನಾಯಿಯನ್ನು ಕಂಡರೆ ಮನೆಯವರಿಗೆ ಅಚ್ಚುಮೆಚ್ಚು. ಡಾಲಿ ಕೆಲಸ ಮಾಡುವ ವೈಖರಿ ಕಂಡು ಗ್ರಾಮವೇ ಬೆರಗಾಗಿದೆ.

ಇದನ್ನೂ ಓದಿ :ಸತ್ತಂತೆ ನಟಿಸಿ ಬದುಕುಳಿದ ಟಾಮಿ.. ಚಿರತೆ ಬಾಯಿಂದ ಪಾರಾಯ್ತು ಬುದ್ಧಿವಂತ ಶ್ವಾನ

Last Updated : Aug 26, 2022, 1:39 PM IST

ABOUT THE AUTHOR

...view details