ಶಿವಮೊಗ್ಗ: ಸಮಯಕ್ಕೆ ಸರಿಯಾಗಿ ಕರ್ತವ್ಯಕ್ಕೆ ಹಾಜರಾಗದ ಪಟ್ಟಣ ಪಂಚಾಯತ್ ನೌಕರನನ್ನು ಶಾಸಕ ಕುಮಾರ ಬಂಗಾರಪ್ಪ ತರಾಟೆಗೆ ತೆಗೆದುಕೊಂಡ ಘಟನೆ ನಡೆದಿದೆ.
ಸಮಯಕ್ಕೆ ಸರಿಯಾಗಿ ಕರ್ತವ್ಯಕ್ಕೆ ಬಾರದ ನೌಕರ: ಶಾಸಕ ಕುಮಾರ್ ಬಂಗಾರಪ್ಪರಿಂದ ತರಾಟೆ - Class by MLA Kumar Bangarappa to Soraba FDA
ಸಮಯಕ್ಕೆ ಸರಿಯಾಗಿ ಕರ್ತವ್ಯಕ್ಕೆ ಹಾಜರಾಗದ ಪಟ್ಟಣ ಪಂಚಾಯತ್ ನೌಕರನನ್ನು ಶಾಸಕ ಕುಮಾರ ಬಂಗಾರಪ್ಪ ತರಾಟೆಗೆ ತೆಗೆದುಕೊಂಡ ಘಟನೆ ಸೊರಬ ಪಟ್ಟಣ ಪಂಚಾಯತ್ನಲ್ಲಿ ನಡೆದಿದೆ.

ಶಾಸಕ ಕುಮಾರ್ ಬಂಗಾರಪ್ಪರಿಂದ ಕ್ಲಾಸ್
ಶಾಸಕ ಕುಮಾರ್ ಬಂಗಾರಪ್ಪರಿಂದ ಕ್ಲಾಸ್
ಸೊರಬ ಪಟ್ಟಣ ಪಂಚಾಯತ್ನ ಎಫ್ಡಿಎ ಓಂಕಾರ್ ಸರಿಯಾದ ಸಮಯಕ್ಕೆ ಕೆಲಸಕ್ಕೆ ಬಾರದೆ ತಡವಾಗಿ ಆಗಮಿಸುತ್ತಿದ್ದರು. ಶಾಸಕ ಕುಮಾರ್ ಬಂಗಾರಪ್ಪ ಪಟ್ಟಣ ಪಂಚಾಯತ್ ಕಚೇರಿಗೆ ದಿಢೀರ್ ಭೇಟಿ ನೀಡಿದಾಗ ಜನ ಕಾಯುತ್ತಿರುವುದನ್ನು ಕಂಡು ವಿಚಾರಿಸಿದ್ದಾರೆ. ಈ ವೇಳೆ ಓಂಕಾರ ಇನ್ನೂ ಕೆಲಸಕ್ಕೆ ಬಾರದೆ ಇರುವುದು ಶಾಸಕರ ಗಮನಕ್ಕೆ ಬಂದಿದೆ.
ಈ ಬಗ್ಗೆ ಗರಂ ಶಾಸಕರು, ತಡವಾಗಿ ಬಂದ ಎಫ್ಡಿಎ ಓಂಕಾರನನ್ನು ತರಾಟೆಗೆ ತೆಗೆದು ಕೊಂಡಿದ್ದಾರೆ. ಸಮಯಕ್ಕೆ ಸರಿಯಾಗಿ ಕರ್ತವ್ಯಕ್ಕೆ ಹಾಜರಾಗಬೇಕು, ನಿಮ್ಮ ಮೇಲೆ ಸಾಕಷ್ಟು ದೂರುಗಳಿವೆ, ಮುಂದೆ ಈ ರೀತಿ ಆಗದಂತೆ ನೋಡಿಕೊಳ್ಳಿ ಎಂದು ಎಚ್ಚರಿಕೆ ನೀಡಿದ್ದಾರೆ.
TAGGED:
ಸೊರಬ ಎಫ್ಡಿಎ ಗೆ ಶಾಸಕ ತರಾಟೆ