ಶಿವಮೊಗ್ಗ: ಮೇ 1 ಅಂತಾರಾಷ್ಟ್ರೀಯ ಕಾರ್ಮಿಕರ ದಿನಾಚರಣೆ. ಈ ಹಿನ್ನೆಲೆಯಲ್ಲಿ ಶಿವಮೊಗ್ಗದ ಶಾಂತವೇರಿ ಗೋಪಾಲಗೌಡ ಸಮಾಜವಾದಿ ಅಧ್ಯಯನ ಟ್ರಸ್ಟ್ನಿಂದ ಪೌರ ಕಾರ್ಮಿಕರರಿಗೆ ಹ್ಯಾಂಡ್ ಗ್ಲೌಸ್, ಸ್ಯಾನಿಟೈಸರ್ ನೀಡಿ, ಗಂಧದ ಹಾರ ಹಾಕಿ ಸನ್ಮಾನ ಮಾಡಲಾಯಿತು.
ಕಾರ್ಮಿಕರಿಗೆ ಗಂಧದ ಹಾರ, ಹ್ಯಾಂಡ್ ಗ್ಲೌಸ್, ಸ್ಯಾನಿಟೈಸರ್ ನೀಡಿ ಸನ್ಮಾನ - Labor Day
ಪ್ರತಿ ದಿನ ಮನೆ ಮನೆಗೆ ಹೋಗಿ ಗಂಟೆ ಬಾರಿಸಿ ಪ್ರತಿ ಮನೆ ಕಸವನ್ನು ಸಂಗ್ರಹ ಮಾಡಿ ಅದನ್ನು ಲಾರಿಗೆ ಹಾಕಿ ನಗರವನ್ನು ಸ್ವಚ್ಚವನ್ನಾಗಿಡಲು ಸಹಕಾರ ನೀಡುವ ಪೌರ ಕಾರ್ಮಿಕರಿಗೆ ಹ್ಯಾಂಡ್ ಗ್ಲೌಸ್ ನೀಡದೇ ಪಾಲಿಕೆ ನಿರ್ಲಕ್ಷ್ಯ ತೋರಿದೆ.

ವಿನೋಬನಗರದಲ್ಲಿ ಪ್ರತಿ ಮನೆ ಮನೆಗೆ ಗಂಟೆಗಾಡಿಗಳ ಮೂಲಕ ಕಸ ಸಂಗ್ರಹ ಮಾಡುವ ಮಹಾನಗರ ಪಾಲಿಕೆಯ ಗುತ್ತಿಗೆ ನೌಕರರಿಗೆ ಸನ್ಮಾನ ಮಾಡಲಾಯಿತು. ನಿತ್ಯ ಮನೆ ಮನೆಗೆ ಹೋಗಿ ಗಂಟೆ ಬಾರಿಸಿ ಪ್ರತಿ ಮನೆಯ ಕಸವನ್ನು ಸಂಗ್ರಹ ಮಾಡಿ ಅದನ್ನು ಲಾರಿಗೆ ಹಾಕಿ ನಗರವನ್ನು ಸ್ವಚ್ಚವನ್ನಾಗಿಡಲು ಸಹಕಾರ ನೀಡುವ ಪೌರ ಕಾರ್ಮಿಕರಿಗೆ ಹ್ಯಾಂಡ್ ಗ್ಲೌಸ್ ನೀಡದೇ ಪಾಲಿಕೆ ನಿರ್ಲಕ್ಷ್ಯ ತೋರಿದೆ. ಇದನ್ನು ಖಂಡಿಸಿ, ಅಧ್ಯಯನ ಟ್ರಸ್ಟ್ ಸಾಂಕೇತಿಕವಾಗಿ 5 ಜನ ಪೌರ ಗುತ್ತಿಗೆ ಕಾರ್ಮಿಕರಿಗೆ ಹ್ಯಾಂಡ್ ಗ್ಲೌಸ್, ಸ್ಯಾನಿಟೈಸರ್ ನೀಡಿದೆ.
ಹ್ಯಾಂಡ್ ಗ್ಲೌಸ್ ಹಾಗೂ ಸ್ಯಾನಿಟೈಸರ್ ಪಡೆದ ಪೌರ ಕಾರ್ಮಿಕರು ಸಂತಸ ವ್ಯಕ್ತಪಡಿಸಿದ್ದಾರೆ. ಪಾಲಿಕೆಯವರು ತಕ್ಷಣ ಪೌರ ಕಾರ್ಮಿಕರಿಗೆ ಹೌಂಡ್ ಗ್ಲೌಸ್ ವಿತರಣೆ ಮಾಡಬೇಕು ಎಂದು ಶಾಂತವೇರಿ ಗೋಪಾಲಗೌಡ ಸಮಾಜವಾದಿ ಅಧ್ಯಯನ ಕೇಂದ್ರದ ಅಧ್ಯಕ್ಷ ಕಲ್ಲೂರು ಮೇಘರಾಜ್ ಆಗ್ರಹಿಸಿದ್ದಾರೆ.