ಕರ್ನಾಟಕ

karnataka

ETV Bharat / state

ಶಿವಮೊಗ್ಗ: ಟ್ರಾಕ್ಟರ್ ಚಕ್ರದಡಿ ಸಿಲುಕಿ ಒಂದೂವರೆ ವರ್ಷದ ಮಗು ಸಾವು - ತೀರ್ಥಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ

ಮನೆ ಮುಂದೆ ನಿಲ್ಲಿಸಿದ್ದ ಟ್ರಾಕ್ಟರ್ ಅ​ನ್ನು ತಂದೆ ಹಿಂತೆಗೆಯುತ್ತಿದ್ದಾಗ ಘಟನೆ ನಡೆದಿದೆ.

tractore
ಟ್ರಾಕ್ಟರ್​ಡಿಗೆ ಮಗು ಸಿಲುಕಿ ಸಾವು

By

Published : Apr 13, 2023, 5:01 PM IST

ಶಿವಮೊಗ್ಗ:ಟ್ರಾಕ್ಟರ್ ವಾಹನವನ್ನು ಹಿಂದೆ ತೆಗೆಯುತ್ತಿದ್ದಾಗ ಚಕ್ರಕ್ಕೆ ಸಿಲುಕಿ ಒಂದೂವರೆ ವರ್ಷದ ಮಗು ಸಾವನ್ನಪ್ಪಿದ ಘಟನೆ ತೀರ್ಥಹಳ್ಳಿ ತಾಲೂಕು ಹೆದ್ದೂರು ಗ್ರಾಮದಲ್ಲಿ‌ ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ. ಆದರ್ಶ ಎಂಬವರ ಮಗು ಸಾವನ್ನಪ್ಪಿದೆ.

ಆದರ್ಶ ತಮ್ಮ ಮನೆ ಮುಂದಿದ್ದ ಟ್ರಾಕ್ಟರ್ ಹಿಂತೆಗೆಯಲು ಹೋಗಿದ್ದು ಮಗು ಟ್ರಾಲಿ ಚಕ್ರಕ್ಕೆ ಸಿಲುಕಿದೆ. ಇದಕ್ಕೂ ಮುನ್ನ ಮಗುವನ್ನು ಆಟ ಆಡಿಸಿ ಮನೆಯೊಳಗೆ ಬಿಟ್ಟು ಬಂದಿದ್ದರು. ಆದರೆ ಮಗು ತಂದೆಯನ್ನು ಹಿಂಬಾಲಿಸಿಕೊಂಡು ಬಂದಿದೆ. ಈ ವಿಷಯ ತಿಳಿಯದೇ ಟ್ರಾಕ್ಟರ್ ಹಿಂದಕ್ಕೆ ತೆಗೆದಿದ್ದು, ಪುಟಾಣಿ ಚಕ್ರದಡಿ ಸಿಲುಕಿ ಸ್ಥಳದಲ್ಲೇ ಅಸುನೀಗಿದೆ. ತೀರ್ಥಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ:ಪ್ರತ್ಯೇಕ ರಸ್ತೆ ಅಪಘಾತದಿಂದ ಉದ್ವಿಗ್ನ ಪರಿಸ್ಥಿತಿ: ಗಾಳಿಯಲ್ಲಿ ಗುಂಡು, ಪೊಲೀಸ್​ ವ್ಯಾನ್​ ಮೇಲೆ ದಾಳಿ

ಬಸ್​ ಮೆಟ್ಟಿಲಿಂದ ಬಿದ್ದು ಬದುಕುಳಿದ ಮಗು: ತಮಿಳುನಾಡಿನ ತೆಂಕಶಿಯ ಶಂಕರಕೋಯಿಲ್​ ಬಳಿ ಖಾಸಗಿ ಬಸ್​ ಚಾಲಕ ಏಕಾಏಕಿ ಬ್ರೇಕ್​ ಹಾಕಿದ್ದ. ತಾಯಿಯ ಕೈಯಲ್ಲಿದ್ದ 2 ವರ್ಷದ ಮಗು ಬಸ್​ನ ಮೆಟ್ಟಿಲುಗಳಿಂದ ಎಡವಿ ಕೆಳಗೆ ಬಿದ್ದಿತ್ತು. ಮಗು ಬಸ್​ನ ಕೆಳಗೆ ಬಿದ್ದಿರುವುದನ್ನು ನೋಡಿದ ಸ್ಥಳೀಯರು ಓಡಿ ಬಂದು ರಕ್ಷಿಸಿದ್ದಾರೆ. ಅದೃಷ್ಟವಶಾತ್​ ಮಗು ಯಾವುದೇ ಗಾಯಗಳಿಲ್ಲದೆ ಬದುಕುಳಿದಿತ್ತು. ಫೆಬ್ರವರಿಯಲ್ಲಿ ಈ ಘಟನೆ ನಡೆದಿತ್ತು.

ಟ್ರಾಕ್ಟರ್​ ಟ್ರ್ಯಾಲಿ ಚಕ್ರದಡಿ ಸಿಲುಕಿ ಸಾವು:ಕಳೆದ ನವೆಂಬರ್​ ತಿಂಗಳಿನಲ್ಲಿ ಪಾದಾಚಾರಿಯೊಬ್ಬ ಟ್ರಾಕ್ಟರ್​ ಟ್ರ್ಯಾಲಿ ಚಕ್ರದಡಿ ಸಿಲುಕಿ ಮೃತಪಟ್ಟಿದ್ದ. ಕಲಬುರಗಿ ಜಿಲ್ಲೆಯ ಅಫಜಲಪುರದ ಪಟ್ಟಣದ ರಾಜ್ಯ ಹೆದ್ದಾರಿಯಲ್ಲಿರುವ ನಿಂಬಾಳ್​ ಪೆಟ್ರೋಲ್​ ಬಂಕ್​ ಬಳಿ ವ್ಯಕ್ತಿ ನಡೆದುಕೊಂಡು ಹೋಗುತ್ತಿದ್ದರು. ರಸ್ತೆಯಲ್ಲಿ ಹಿಂದಿನಿಂದ ಬಂದ ಟ್ರಾಕ್ಟರ್​ ಇಂಜಿನ್​ಗೆ ಅಳವಡಿಸಿದ್ದ ಟ್ರ್ಯಾಲಿ ಡಿಕ್ಕಿ ಹೊಡೆದಿತ್ತು. ಕೊಂಡಿ ತಾಗಿ ಕೆಳಗೆ ಬಿದ್ದ ಪಾದಚಾರಿ ಮೇಲೆಯೇ ಚಕ್ರ ಹರಿದುಹೋಗಿತ್ತು. ಗಂಭೀರ ಗಾಯಗೊಂಡಿದ್ದ ಅವರು ಸ್ಥಳದಲ್ಲಿಯೇ ಸಾವನ್ನಪ್ಪಿದ್ದರು.

ಇದನ್ನೂ ಓದಿ:ಎನ್​ಕೌಂಟರ್​ನಲ್ಲಿ ಗ್ಯಾಂಗ್​ಸ್ಟರ್ ಅತೀಕ್ ಅಹ್ಮದ್ ಪುತ್ರ ಅಸದ್ ಹತ

ABOUT THE AUTHOR

...view details