ಶಿವಮೊಗ್ಗ:ಜಿಲ್ಲೆಯ ಪ್ರಸಿದ್ಧ ಸಿಗಂದೂರು ಚೌಡೇಶ್ವರಿ ದೇವಾಲಯದಲ್ಲಿನ ಆಡಳಿತ ಮಂಡಳಿ ಹಾಗೂ ಅರ್ಚಕರ ನಡುವಿನ ಒಳಜಗಳ ತಾರಕಕ್ಕೆ ಏರಿದೆ. ಇದರಿಂದ ದೇವಾಲಯದಲ್ಲಿ ಪ್ರಧಾನ ಅರ್ಚಕ ಶೇಷಗಿರಿ ಭಟ್ ಮೌನ ಪ್ರತಿಭಟನೆ ನಡೆಸುತ್ತಿದ್ದಾರೆ.
ಸಿಗಂದೂರು ಆಡಳಿತ ಮಂಡಳಿ - ಅರ್ಚಕರ ನಡುವೆ ಒಳ ಜಗಳ: ಪ್ರಧಾನ ಅರ್ಚಕರು 'ಮೌನ'
ಸಿಗಂದೂರು ಚೌಡೇಶ್ವರಿ ದೇವಾಲಯದ ಆಡಳಿತ ಮಂಡಳಿ ಹಾಗೂ ಅರ್ಚಕರ ನಡುವಿನ ಒಳಜಗಳದಿಂದ ನೊಂದ ಪ್ರಧಾನ ಅರ್ಚಕರು ಮೌನ ಪ್ರತಿಭಟನೆ ನಡೆಸುತ್ತಿದ್ದಾರೆ.
ಸಿಗಂದೂರು ದೇವಾಲಯದಲ್ಲಿ ಪ್ರದಾನ ಅರ್ಚಕರ ಮೌನ ಪ್ರತಿಭಟನೆ
ಇಂದು ನವರಾತ್ರಿಗೂ ಮೊದಲ ಅಮಾವಾಸ್ಯೆಯಾದ ಕಾರಣ ದೇವಿಗೆ ಚಂಡಿಕಾ ಯಾಗ ಮಾಡುವ ಯಾಗ ಶಾಲೆ ಸ್ವಚ್ಛತೆಗೆ ನಿನ್ನೆ ಹೋದಾಗ ದೇವಾಲಯದ ಪ್ರಮುಖರಾದ ರಾಮಪ್ಪ ಅವರು ನೀವು ಯಾಗ ಮಾಡುವುದು ಬೇಡ ಅಂತ ಹೇಳಿದ್ದಾರೆ ಎನ್ನಲಾಗ್ತಿದೆ.
ಇದರಿಂದ ನಮ್ಮ ಮನಸ್ಸಿಗೆ ತುಂಬ ನೋವಾಗಿ, ದೇವಿಯಲ್ಲಿ ಹರಕೆ ಹೊತ್ತು ತಮಗೆ ನಿನ್ನ ಸೇವೆ ಮಾಡಲು ಅವಕಾಶ ನೀಡು ಎಂದು ಬೆಳಗ್ಗೆಯಿಂದ ಶೇಷಗಿರಿ ಭಟ್ ಮೌನ ಪ್ರತಿಭಟನೆ ನಡೆಸುತ್ತಿದ್ದಾರೆ. ದೇವಾಲಯದಲ್ಲಿ ಪೂಜೆಗಳು ಎಂದಿನಂತೆ ನಡೆಯುತ್ತಿವೆ. ಆದರೆ ಪ್ರಧಾನ ಅರ್ಚಕರು ಪೂಜೆಯಲ್ಲಿ ಭಾಗಿಯಾಗಿಲ್ಲ.
Last Updated : Oct 16, 2020, 2:47 PM IST