ಶಿವಮೊಗ್ಗ:ಕೊರಳಪಟ್ಟಿ ಹಿಡಿದುಕೊಂಡು ಎಲ್ಲಾ ಪಕ್ಷದ ನಾಯಕರು ಕಿತ್ತಾಡುವ ಪರಿಸ್ಥಿತಿಗೆ ಬಂದಿರುವ ಇವರಿಗೆ ಯಾವ ರೀತಿಯಲ್ಲಿ ಖಂಡಿಸಿದರೂ ಸಾಲದು. ಹಾಗಾಗಿ ಎಲೆ, ಅಡಿಕೆ ಹಾಕಿಕೊಂಡು ಛೀ,ಥೂ.. ಎಂದು ಉಗುಳುವ ಚಳವಳಿಯನ್ನು ಹಮ್ಮಿಕೊಂಡಿದ್ದೇವೆ ಎಂದು ಕರ್ನಾಟಕ ರಾಜ್ಯ ರೈತ ಸಂಘದ ಗೌರವಾಧ್ಯಕ್ಷ ಹೆಚ್ ಆರ್ ಬಸವರಾಜಪ್ಪ ತಿಳಿಸಿದ್ದಾರೆ.
ನಗರದಲ್ಲಿ ಇಂದು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ನಾಳೆ ಜಿಲ್ಲೆಯ ಶಿವಪ್ಪನಾಯಕ ಪ್ರತಿಮೆ ಎದುರು ಹಾಗೂ ರಾಜ್ಯಾದ್ಯಂತ ಎಲ್ಲಾ ಜಿಲ್ಲಾ ಕೇಂದ್ರಗಳಲ್ಲಿ ಜನ ಇರುವ ಪ್ರದೇಶಗಳಲ್ಲಿ ಎಲ್ಲಾ ಪಕ್ಷದ ನಾಯಕರುಗಳ ಪ್ರತಿಕೃತಿಗೆ ಛೀ,ಥೂ.. ಎಂದು ಉಗುಳುವ ಮೂಲಕ ಶಾಸಕರುಗಳ ಪ್ರತಿಕೃತಿ ದಹನ ಮಾಡಲಾಗುತ್ತದೆ. ಇವರಿಗೆ ಕೇವಲ ಉಗಿದರೆ ಸಾಲದು. ಇವರ ಪ್ರತಿಕೃತಿ ದಹನ ಮಾಡಬೇಕು ಎಂದು ನಿರ್ಧರಿಸಿದ್ದೇವೆ ಎಂದರು.