ಕರ್ನಾಟಕ

karnataka

ಬೆಂಗಳೂರು ಲಾಕ್​​ಡೌನ್ ಹಿನ್ನೆಲೆ ಶಿವಮೊಗ್ಗ ಗಡಿಯಲ್ಲಿ ಚೆಕ್​ಪೋಸ್ಟ್​

By

Published : Jul 13, 2020, 4:58 PM IST

ಶಿವಮೊಗ್ಗ ಜಿಲ್ಲೆಯ ಭದ್ರಾವತಿಯ ಬಳಿ ಬಿ.ಹೆಚ್. ರಸ್ತೆಯ ಕೆರಹಳ್ಳಿಯ ಬಳಿ ಒಂದು ಚೆಕ್​ಪೋಸ್ಟ್ ಹಾಗೂ ಭದ್ರಾವತಿ ತಾಲೂಕು ಹಂಚಿನ ಸಿದ್ದಾಪುರ ಗ್ರಾಮದ ಭದ್ರಾ ಕಾಲುವೆಯ ಬಳಿ ಮತ್ತೊಂದು ಚೆಕ್​ಪೋಸ್ಟ್​ ರಚನೆ ಮಾಡಲಾಗಿದೆ.

ಶಿವಮೊಗ್ಗ ಗಡಿಯಲ್ಲಿ ಚೆಕ್​ಪೋಸ್ಟ್​
ಶಿವಮೊಗ್ಗ ಗಡಿಯಲ್ಲಿ ಚೆಕ್​ಪೋಸ್ಟ್​

ಶಿವಮೊಗ್ಗ: ಬೆಂಗಳೂರು ನಗರ ಹಾಗೂ ಗ್ರಾಮಾಂತರ ಜಿಲ್ಲೆಗಳನ್ನು ಲಾಕ್​ಡೌನ್ ಮಾಡಿರುವ ಕಾರಣ ಜಿಲ್ಲೆಯ ಗಡಿಭಾಗಗಳಲ್ಲಿ ಜಿಲ್ಲಾಡಳಿತ‌ ಚೆಕ್​ಪೋಸ್ಟ್ ರಚನೆ ಮಾಡಿದೆ.

ಲಾಕ್​ಡೌನ್ ಹಿನ್ನೆಲೆಯಲ್ಲಿ ಬೆಂಗಳೂರಿನಲ್ಲಿ ನೆಲೆಸಿದ್ದ ಶಿವಮೊಗ್ಗ ಜಿಲ್ಲೆಯ ಜನ ವಾಪಸ್ ಬರಬಹುದು ಎಂಬ ಮಾಹಿತಿಯ ಮೇರೆಗೆ ಜಿಲ್ಲೆಯ ಭದ್ರಾವತಿಯ ಬಳಿ ಬಿ.ಹೆಚ್. ರಸ್ತೆಯ ಕೆರಹಳ್ಳಿಯ ಬಳಿ ಒಂದು ಚೆಕ್​ಪೋಸ್ಟ್ ಹಾಗೂ ಭದ್ರಾವತಿ ತಾಲೂಕು ಹಂಚಿನ ಸಿದ್ದಾಪುರ ಗ್ರಾಮದ ಭದ್ರಾ ಕಾಲುವೆಯ ಬಳಿ ಮತ್ತೊಂದು ಚೆಕ್​ಪೋಸ್ಟ್​ ರಚನೆ ಮಾಡಲಾಗಿದೆ.

ಶಿವಮೊಗ್ಗ ಗಡಿಯಲ್ಲಿ ಚೆಕ್​ಪೋಸ್ಟ್​

ಕೆರೆಹಳ್ಳಿ ಚೆಕ್​ಪೋಸ್ಟ್ ಬಳಿ ಬೆಂಗಳೂರಿನಿಂದ ಬರುವ ಪ್ರಯಾಣಿಕರು ಹಾಗೂ‌ ಹಂಚಿನ ಸಿದ್ದಾಪುರ ಗ್ರಾಮದ ಬಳಿ ಚಿತ್ರದುರ್ಗ ಕಡೆಯಿಂದ ಬರುವವರ ತಪಾಸಣೆಗಾಗಿ ಚೆಕ್​ಪೋಸ್ಟ್​ ರಚಿಸಲಾಗಿದೆ ಎಂದು ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ.

ABOUT THE AUTHOR

...view details