ಶಿವಮೊಗ್ಗ: ಕಳೆದ ವರ್ಷ ದ್ವಿಚಕ್ರ ವಾಹನ ಅಪಘಾತದಲ್ಲಿ ಮೃತಪಟ್ಟ ಡೇವಿಸ್ ಎಂಬುವರ ಕುಟುಂಬಕ್ಕೆ ಓರಿಯಂಟಲ್ ಇನ್ಸುರೆನ್ಸ್ ಕಂಪನಿಯ ಅಕಾರಿಗಳು 15 ಲಕ್ಷ ರೂ.ಗಳ ಪರಿಹಾರ ಚೆಕ್ ವಿತರಿಸಿದರು.
ನಗರದ ಪ್ರೆಸ್ಟ್‌ಟ್ರಸ್ಟ್‌ನಲ್ಲಿ ಏರ್ಪಡಿಸಿದ್ದ ಸುದ್ದಿಗೋಷ್ಠಿಯಲ್ಲಿ ಚೆಕ್ ವಿತರಿಸಿ ಮಾತನಾಡಿದ ಓರಿಯಂಟಲ್ ಇನ್ಸುರೆನ್ಸ್ ಕಂಪನಿ ಹಿರಿಯ ವಿಭಾಗೀಯ ಪ್ರಬಂಧಕ ಗಿರೀಶ್ ಜೋಶಿ, ದ್ವಿಚಕ್ರ ವಾಹನ ಸವಾರರು ಅಪಘಾತದಲ್ಲಿ ಮೃತಪಟ್ಟರೆ ಅವರ ಕುಟುಂಬಕ್ಕೆ ನೀಡುವ ಪರಿಹಾರ ಮೊತ್ತವನ್ನು ಐಆರ್‌ಡಿಎಯು ಅಡಿ 15 ಲಕ್ಷ ರೂಗೆ ಏರಿಸಲಾಗಿದೆ. ಈ ಕಾನೂನಿನ ಪ್ರಕಾರ ಡೇವಿಸ್ ಅವರ ಕುಟುಂಬಕ್ಕೆ ಪರಿಹಾರ ಹಣ ನೀಡಿದ್ದೇವೆ ಎಂದು ತಿಳಿಸಿದರು.
ಈ ಮೊದಲು ಮಾಲೀಕನೊಬ್ಬ ವಾಹನ ಚಲಾಯಿಸುತ್ತಿದ್ದಾಗ ಅಪಘಾತಕ್ಕೆ ಸಿಲುಕಿ ಮೃತಪಟ್ಟರೆ 1 ಲಕ್ಷ ರೂ. ಪರಿಹಾರ ಸಿಗುತ್ತಿತ್ತು. 3 ಚಕ್ರದ ವಾಹನಕ್ಕಿಂತ ಹೆಚ್ಚಿನದ್ದಾಗಿದ್ದರೆ 2 ಲಕ್ಷ ರೂ.ಮಾತ್ರ ಸಿಗುತ್ತಿತ್ತು. ಈಗ ಆ ಮೊತ್ತವನ್ನು ಅಧಿಕಗೊಳಿಸಲಾಗಿದೆ ಎಂದರು.
ವಾಹನ ಮಾಲೀಕರು ಇನ್ಸುರೆನ್ಸ್ ಕಟ್ಟುವಾಗ ಕಡ್ಡಾಯವಾಗಿ ಕೆಲವು ಸಂಗತಿಗಳನ್ನು ತಿಳಿದುಕೊಳ್ಳಬೇಕು. ಕೆಲವರು ಪಾಲಿಸಿ ಹಣ ಕಡಿಮೆಯಾಗಲಿ ಎಂದು ಒಂದೇ ವರ್ಷಕ್ಕೆ ಕಟ್ಟಿಸಿಕೊಳ್ಳುತ್ತಾರೆ. ಆದರೆ ಇದು 5 ವರ್ಷದವರೆಗೆ ರಿಸ್ಕ್ ಇರುತ್ತದೆ. ವರ್ಷದ ನಂತರ ಅಪಘಾತದಲ್ಲಿ ಮೃತಪಟ್ಟರೆ 15 ಲಕ್ಷ ರೂ. ಸಿಗುವುದಿಲ್ಲ. ಹಾಗಾಗಿ ಇನ್ಸುರೆನ್ಸ್ ಮಾಡಿಸುವಾಗ ಸ್ವಲ್ಪ ಹಣ ಹೆಚ್ಚಾದರೂ 5 ವರ್ಷದವರೆಗೆ ಇರುವಂತೆ ಪಾಲಿಸಿ ಮಾಡಿಸಬೇಕು ಎಂದು ಮನವಿ ಮಾಡಿದರು.