ಕರ್ನಾಟಕ

karnataka

ETV Bharat / state

ಹುಣಸೋಡು ಕ್ವಾರಿ ಸ್ಫೋಟ ಪ್ರಕರಣ : ಶೀಘ್ರದಲ್ಲೇ ಚಾರ್ಜ್ ಶೀಟ್ ಸಲ್ಲಿಕೆ - ಶಿವಮೊಗ್ಗದ ಹುಣಸೋಡು ಸ್ಫೋಟ ಪ್ರಕರಣ

ಶಿವಮೊಗ್ಗ ಮಿನಿ ಇಂಡಿಯಾದಂತೆ. ಕಲೆ, ಸಾಹಿತ್ಯ ಹೇಗಿದೆಯೋ ಅದೇ ರೀತಿ ಕೋಮುವಾದ, ನಕ್ಸಲ್, ರೌಡಿಸಂ, ಡ್ರಗ್ಸ್ ಎಲ್ಲವೂ ಇದೆ. ಇದನ್ನು ಆದ್ಯತೆ ಮೇರೆಗೆ ನಿಯಂತ್ರಿಸಲಾಗುವುದು. ರೈತರು, ವಿದ್ಯಾರ್ಥಿಗಳ ಹೋರಾಟದಲ್ಲಿ ಪೊಲೀಸರು ಲಾಠಿ ಬೀಸಲು ಸಾಧ್ಯವಿಲ್ಲ. ಆದರೆ, ಕಮ್ಯುನಲ್ ವಿಷಯ ಬಂದಾಗ ಲಾಠಿ ಬೀಸದೆ ವಿಧಿಯಿಲ್ಲ..

chargesheet of hunsur quarry explosion accuses ready to submit
ಬಿ ಎಂ ಲಕ್ಷ್ಮೀಪ್ರಸಾದ್

By

Published : Apr 20, 2021, 3:09 PM IST

Updated : Apr 20, 2021, 5:40 PM IST

ಶಿವಮೊಗ್ಗ :ನಕ್ಸಲ್ ನಾಯಕಿ ಹೊಸಗದ್ದೆ ಪ್ರಭಾ ಸಾವನ್ನಪ್ಪಿರುವ ಬಗ್ಗೆ ಪೊಲೀಸ್ ಇಲಾಖೆಗೆ ಈವರೆಗೆ ಖಚಿತತೆ ಇಲ್ಲ. ಮೂರು ವರ್ಷಗಳ ಹಿಂದೆ ಆಕೆ ಪ್ರತ್ಯಕ್ಷಳಾಗಿರುವ ಬಗ್ಗೆ ಶಂಕೆ ಇದೆ ಎಂದು ಶಿವಮೊಗ್ಗದ ನೂತನ ಎಸ್​ಪಿ ಬಿ ಎಂ ಲಕ್ಷ್ಮಿಪ್ರಸಾದ್ ಹೇಳಿದ್ದಾರೆ.

ಶಿವಮೊಗ್ಗ ಎಸ್​ಪಿ ಬಿ ಎಂ ಲಕ್ಷ್ಮಿಪ್ರಸಾದ್ ಸುದ್ದಿಗೋಷ್ಠಿ

ನಗರದಲ್ಲಿಂದು ಪ್ರೆಸ್ ಟ್ರಸ್ಟ್ ವತಿಯಿಂದ ಆಯೋಜಿಸಿದ್ದ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಹುಣಸೋಡು ಸ್ಫೋಟ ಪ್ರಕರಣ ತನಿಖೆ ಸರಿಯಾದ ರೀತಿಯಲ್ಲಿ ನಡೆಯುತ್ತಿದೆ. ಪ್ರಕರಣದಲ್ಲಿ ಭಾಗಿಯಾದ ಎಲ್ಲರನ್ನೂ ಬಂಧಿಸಿದ್ದು, ಶೀಘ್ರದಲ್ಲೇ ಚಾರ್ಜ್‌ಶೀಟ್ ಸಲ್ಲಿಸಲಾಗುವುದು ಎಂದರು.

ಶಿವಮೊಗ್ಗ ಜಿಲ್ಲೆ ಮಿನಿ ಇಂಡಿಯಾದಂತೆ, ಎಲ್ಲಾ ರಂಗಗಳಲ್ಲೂ ಮಂಚೂಣಿಯಲ್ಲಿದೆ. ಕಲೆ, ಸಾಹಿತ್ಯ ಹೇಗಿದೆಯೋ ಅದೇ ರೀತಿ ಕೋಮುವಾದ, ನಕ್ಸಲ್, ರೌಡಿಸಂ, ಡ್ರಗ್ಸ್ ಎಲ್ಲವೂ ಇದೆ. ಇದನ್ನು ಆದ್ಯತೆ ಮೇರೆಗೆ ನಿಯಂತ್ರಿಸಲು ಪ್ರಯತ್ನಿಸಲಾಗುವುದು ಎಂದ ಅವರು, ರೈತರು, ವಿದ್ಯಾರ್ಥಿಗಳ ಹೋರಾಟದಲ್ಲಿ ಪೊಲೀಸರು ಲಾಠಿ ಬೀಸಲು ಸಾಧ್ಯವಿಲ್ಲ. ಆದರೆ, ಕಮ್ಯುನಲ್ ವಿಷಯ ಬಂದಾಗ ಲಾಠಿ ಬೀಸದೆ ವಿಧಿಯಿಲ್ಲ ಎಂದ್ರು.

ಶಿವಮೊಗ್ಗದ ಜೈಲಿನಲ್ಲಿ ಕೂತು ಹಣಕ್ಕಾಗಿ ಬೇಡಿಕೆ ಇಡುವ ರೌಡಿಗಳ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲಾಗುವುದು. ರೌಡಿಶೀಟರ್​ನಲ್ಲಿ ಸಾಕಷ್ಟು ಮಂದಿ ಹೆಸರುಗಳಿವೆ. ಸಂಖ್ಯೆಯನ್ನು ಕಡಿಮೆ ಮಾಡಲು ಚಿಂತಿಸಲಾಗಿದೆ ಎಂದು ನೂತನ ಜಿಲ್ಲಾ ಪೊಲೀಸ್‌ ವರಿಷ್ಠ ಲಕ್ಷ್ಮಿಪ್ರಸಾದ್ ತಿಳಿಸಿದ್ದಾರೆ.

ಇದನ್ನೂ ಓದಿ:ಕೋವಿಡ್​ ಉಲ್ಬಣದ ನಡುವೆಯೂ ಕರ್ತವ್ಯಕ್ಕಾಗಿ ರಸ್ತೆಗಿಳಿದ ಗರ್ಭಿಣಿ ಡಿವೈಎಸ್​ಪಿ

Last Updated : Apr 20, 2021, 5:40 PM IST

ABOUT THE AUTHOR

...view details