ಕರ್ನಾಟಕ

karnataka

ETV Bharat / state

ಹಿಂದೂಗಳ ರಕ್ಷಣೆ ನೀವು ಮಾಡುತ್ತಿರೋ, ಇಲ್ಲ ನಾವೇ ಮಾಡಿಕೊಳ್ಳಬೇಕೋ: ಚಕ್ರವರ್ತಿ ಸೂಲಿಬೆಲೆ ಕಿಡಿ - ಶಿವಮೊಗ್ಗದಲ್ಲಿ ಮೃತ ಹರ್ಷ ನಿವಾಸಕ್ಕೆ ಚಕ್ರವರ್ತಿ ಸೂಲಿಬೆಲೆ ಭೇಟಿ

ಹಿಜಾಬ್‌ನಿಂದ ಶುರುವಾದ ಗಲಾಟೆಯಿದು. ಹರ್ಷ ಹಿಜಾಬ್ ವಿರುದ್ಧ ಗಲಾಟೆ ಮಾಡುತ್ತಿದ್ದ. ಆ ಕಾರಣಕ್ಕಾಗಿ ಹರ್ಷನನ್ನು ಕೊಲೆ ಮಾಡಲಾಗಿದೆ ಎಂದು ಹೇಳಲಾಗುತ್ತಿದೆ. ಇದರ ಹಿಂದಿರುವವರನ್ನು ಬಯಲಿಗೆಳೆದು ಶಿಕ್ಷೆ ಕೊಡಲಿಲ್ಲ ಎಂದರೆ ಮುಂದೆಯೂ ಈ ತರಹದ ಘಟನೆಗಳು ನಡೆಯಬಹುದು ಎಂದು ಚಕ್ರವರ್ತಿ ಸೂಲಿಬೆಲೆ ಹೇಳಿದರು.

ಶಿವಮೊಗ್ಗದಲ್ಲಿ ಚಕ್ರವರ್ತಿ ಸೂಲಿಬೆಲೆ ಹೇಳಿಕೆ
ಶಿವಮೊಗ್ಗದಲ್ಲಿ ಚಕ್ರವರ್ತಿ ಸೂಲಿಬೆಲೆ ಹೇಳಿಕೆ

By

Published : Feb 22, 2022, 5:11 PM IST

Updated : Feb 22, 2022, 5:22 PM IST

ಶಿವಮೊಗ್ಗ : ಶಿವಮೊಗ್ಗ ನಗರ ಎಂದೂ ಶಾಂತವಾಗಿಲ್ಲ, ಇದು ಮುಸ್ಲಿಂ ಸಂಘಟನೆಗಳು ಸಕ್ರಿಯವಾಗಿರುವ ಜಿಲ್ಲೆ ಎಂದು ಯುವ ಬ್ರಿಗೇಡ್ ಸಂಸ್ಥಾಪಕ ಚಕ್ರವರ್ತಿ ಸೂಲಿಬೆಲೆ ಹೇಳಿದರು. ದುಷ್ಕರ್ಮಿಗಳಿಂದ ಹತ್ಯೆಗೀಡಾಗಿದ್ದ ಹರ್ಷ ಮನೆಗೆ ಭೇಟಿ ನೀಡಿ ಕುಟುಂಬಸ್ಥರಿಗೆ ಚಕ್ರವರ್ತಿ ಸೂಲಿಬೆಲೆ ಸಾಂತ್ವನ ಹೇಳಿದರು.

ಶಿವಮೊಗ್ಗದಲ್ಲಿ ಚಕ್ರವರ್ತಿ ಸೂಲಿಬೆಲೆ ಹೇಳಿಕೆ

ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹಿಂದೂ ಕಾರ್ಯಕರ್ತರ ಮೇಲೆ ಹಲ್ಲೆಯಾಗಿದ್ದು, ಸರ್ಕಾರ ಮತ್ತು ಗುಪ್ತಚರ ಇಲಾಖೆ ಸಂಪೂರ್ಣ ವಿಫಲವಾಗಿದೆ ಎಂದು ಆರೋಪಿಸಿದರು. ಸರ್ಕಾರ ಕಣ್ಣು ಒರೆಸುವ ಕೆಲಸ ಮಾಡುತ್ತಿದ್ದು, ಇದರ ಹಿಂದೆ ಇರುವ ವ್ಯವಸ್ಥೆಯನ್ನು ಬೇರು ಸಹಿತ ಕಿತ್ತುಹಾಕಬೇಕಿದೆ. ಹಿಂದೂಗಳ ರಕ್ಷಣೆ ನೀವು ಮಾಡುತ್ತಿರೋ, ಇಲ್ಲ ನಾವೇ ಮಾಡಿಕೊಳ್ಳಬೇಕೋ ಎಂದು ಕಿಡಿಕಾರಿದರು.

ಹಿಜಾಬ್‌ನಿಂದ ಶುರುವಾದ ಗಲಾಟೆಯಿದು. ಹರ್ಷ ಹಿಜಾಬ್ ವಿರುದ್ಧ ಗಲಾಟೆ ಮಾಡುತ್ತಿದ್ದ. ಆ ಕಾರಣಕ್ಕಾಗಿ ಹರ್ಷನನ್ನು ಕೊಲೆ ಮಾಡಲಾಗಿದೆ ಎಂದು ಹೇಳಲಾಗುತ್ತಿದೆ. ಇದರ ಹಿಂದಿರುವವರನ್ನು ಬಯಲಿಗೆಳೆದು ಶಿಕ್ಷೆ ಕೊಡಲಿಲ್ಲ ಎಂದರೆ ಮುಂದೆಯೂ ಈ ತರಹದ ಘಟನೆಗಳು ನಡೆಯಬಹುದು.

ಇದನ್ನು ತಡೆಯುವಂತಹ ಕೆಲಸವಾಗಬೇಕು. ಹಿಂದೂಗಳ ಸಮಾಧಿ ಮೇಲೆ ಸರ್ಕಾರ ಕಟ್ಟಿಕೊಂಡಿರುವಂತಹವರು, ಇನ್ನೂ ಹಿಂದೂಗಳ ಸಮಾಧಿಯಾಗೋದಕ್ಕೆ ಕಾರಣವಾಗುತ್ತಿದ್ದಾರೆಂದರೆ ಇದನ್ನು ಒಪ್ಪಿಕೊಳ್ಳೋಕೆ ಸಾಧ್ಯವಾಗುವುದಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ : ರಾಜ್ಯಪಾಲರಿಂದ ಬುಲಾವ್ ಬಂದಿಲ್ಲ, ಶಿವಮೊಗ್ಗ ಘಟನೆ ಬಗ್ಗೆ ಚರ್ಚಿಸಿಯೂ ಇಲ್ಲ: ಕೆ.ಎಸ್‌. ಈಶ್ವರಪ್ಪ ಸ್ಪಷ್ಟನೆ

ಇವೆಲ್ಲವನ್ನೂ ನೋಡಿದ್ರೆ ಸ್ಪಷ್ಟವಾಗಿ ಎಸ್‌ಡಿಪಿಐ, ಪಿಎಫ್‌ಐ ಇವರೆಲ್ಲರೂ ಇದರ ಸೂತ್ರಧಾರರು ಅನಿಸುತ್ತೆ. ಹೀಗಾಗಿ, 5 ಜನರನ್ನು ಬಂಧಿಸಿದ್ದೇವೆ, ಮೂವರನ್ನು ಬಂಧಿಸಿದ್ದೇವೆ, ಅವರ ಬಗ್ಗೆ ವಿಚಾರಣೆ ನಡೆಯುತ್ತೆ ಎನ್ನುವ ಕಣ್ಣೀರು ಒರೆಸುವ ಕೆಲಸ ಸಾಕು. ಇದರ ಹಿಂದೆ ಇರುವಂತಹ ಒಟ್ಟಾರೆ ಸೂತ್ರವನ್ನು ಬಯಲಿಗೆಳೆದು, ಸ್ಲೀಪರ್ ಸೆಲ್‌ಗಳನ್ನು ಹೊರತೆಗೆದು ಸರಿಯಾಗಿ ಶಿಕ್ಷೆ ಕೊಡಲಿಲ್ಲ ಎಂದರೆ ಮುಂದೆಯೂ ಇಂತಹ ಘಟನೆಗಳು ನಡೆಯುತ್ತವೆ. ಇದನ್ನು ತಡೆಯಬೇಕು ಎಂದು ಒತ್ತಾಯಿಸಿದರು.

Last Updated : Feb 22, 2022, 5:22 PM IST

For All Latest Updates

TAGGED:

ABOUT THE AUTHOR

...view details