ಕರ್ನಾಟಕ

karnataka

ETV Bharat / state

ಶಿವಮೊಗ್ಗದಲ್ಲಿ ಗಣೇಶ ಹಬ್ಬಕ್ಕೆ ಸೂಕ್ತ ಭದ್ರತೆ: ಸಾರ್ವಜನಿಕರಿಗೆ ಶಿವಮೊಗ್ಗ ಡಿಸಿ, ಎಸ್ಪಿ ಮನವಿಯೇನು? - ಹಿಂದೂ ಮಹಾಸಭಾ ಮೆರವಣಿಗೆ

ಮುನ್ನೆಚ್ಚರಿಕೆ ಕ್ರಮವಾಗಿ ಏನೆಲ್ಲಾ ಕ್ರಮಗಳನ್ನು ಕೈಗೊಳ್ಳಬೇಕೋ ಅದನ್ನೆಲ್ಲಾ ಮಾಡಲಾಗಿದೆ. ಫ್ಲೆಕ್ಸ್​​ಗಳನ್ನು ಪ್ರತಿಷ್ಠೆಗಾಗಿ ಹಾಕಬೇಡಿ. ಯುವಕರು ನಮ್ಮ ಮನವಿಗೆ ಸಹಕರಿಸಬೇಕು. ಹಬ್ಬಗಳ ನಡುವೆ ಸ್ಪರ್ಧೆ ಮಾಡಲು ನಾವು ಬಿಡುವುದಿಲ್ಲ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮಿ ಪ್ರಸಾದ್ ಹೇಳಿದರು.

ಎಸ್ಪಿ ಲಕ್ಷ್ಮಿ ಪ್ರಸಾದ್
ಎಸ್ಪಿ ಲಕ್ಷ್ಮಿ ಪ್ರಸಾದ್

By

Published : Aug 26, 2022, 10:01 PM IST

ಶಿವಮೊಗ್ಗ:ಈ ಬಾರಿಯ ಗಣೇಶ ಹಬ್ಬವನ್ನು ಸಂಭ್ರಮದಿಂದ ಆಚರಿಸಿ. ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ನಾವು ಬಂದೋಬಸ್ ಮಾಡಿದ್ದೇವೆ. ಈಗಾಗಲೇ ಶಿವಮೊಗ್ಗ, ಭದ್ರಾವತಿ, ಸಾಗರದಲ್ಲಿನ ಎಲ್ಲಾ ಸಂಘಟನೆಗಳೊಂದಿಗೆ ಜಿಲ್ಲಾಧಿಕಾರಿಗಳು ಹಾಗೂ ನಾವು ಶಾಂತಿ ಸಭೆ ನಡೆಸಿದ್ದೇವೆ. ಏನೆಲ್ಲಾ ಕ್ರಮಗಳನ್ನು ಕೈಗೊಳ್ಳಬೇಕೋ ಅದನ್ನೆಲ್ಲಾ ಮಾಡಲಾಗಿದೆ ಎಂದು ಶಿವಮೊಗ್ಗ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮಿ ಪ್ರಸಾದ್ ಹೇಳಿದ್ದಾರೆ.

ಶಿವಮೊಗ್ಗ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮಿ ಪ್ರಸಾದ್

ನಗರದ ಮೀಡಿಯಾ ಹೌಸ್​ನಲ್ಲಿ ಆಯೋಜಿಸಿದ್ದ ಮಾಧ್ಯಮ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಬೇರೆ ಕಡೆಯಿಂದ ಹಿಂದೂ ಮಹಾಸಭಾ ಮೆರವಣಿಗೆ ದಿನ ಸಿಬ್ಬಂದಿಯನ್ನು ಕರೆಸಲಾಗುತ್ತದೆ. ಜಿಲ್ಲಾಡಳಿತ ಹಾಗೂ ಪೊಲೀಸ್ ಇಲಾಖೆಗಳೊಂದಿಗೆ ಸಾರ್ವಜನಿಕರು ಸಹಕರಿಸಬೇಕು. ಫ್ಲೆಕ್ಸ್​​ಗಳನ್ನು ಪ್ರತಿಷ್ಠೆಗಾಗಿ ಹಾಕಬೇಡಿ. ಹಾಗಾಗಿ ಯುವಕರು ಸಹ ನಮ್ಮ ಮನವಿಗೆ ಸಹಕರಿಸಬೇಕು. ಹಬ್ಬಗಳ ನಡುವೆ ಸ್ಪರ್ಧೆ ಮಾಡಲು ನಾವು ಬಿಡುವುದಿಲ್ಲ ಎಂದರು.

ಅಲ್ಲದೇ ಗಲಭೆ ಉಂಟು ಮಾಡುವವರಿಗೆ ಹಾಗೂ ಬೇರೆ ಧರ್ಮಗಳನ್ನು ನಿಂದಿಸುವವರ ಮೇಲೆ ನಾವು ಕಠಿಣ ಕ್ರಮಗಳನ್ನು ಕೈಗೊಳ್ಳುತ್ತೇವೆ. ಈ ಬಾರಿಯ ಮೆರವಣಿಗೆಯ ಮೇಲೆ ಹದ್ದಿನ ಕಣ್ಣಿಡಲಾಗಿದೆ. ಇಡೀ ಮೆರವಣಿಗೆಯ ವಿಡಿಯೋ ಚಿತ್ರೀಕರಣ ಮಾಡಲಾಗುವುದೆಂದರು.

ಇದನ್ನೂ ಓದಿ:ಮಂಗಳೂರಿನಲ್ಲಿ ತಯಾರಾದ ಗಣೇಶ ಮೂರ್ತಿಗೆ ಅಮೆರಿಕದಲ್ಲಿ ಪೂಜೆ

ನಂತರ ಮಾತನಾಡಿದ ಜಿಲ್ಲಾಧಿಕಾರಿ ಡಾ. ಸೆಲ್ವಮಣಿ, ಪೊಲೀಸ್ ಇಲಾಖೆ ಅನೇಕ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಂಡಿದೆ. ಸಾರ್ವಜನಿಕರು ಜಿಲ್ಲಾಡಳಿತ ಹಾಗೂ ಪೊಲೀಸ್ ಇಲಾಖೆಯೊಂದಿಗೆ ಸಹಕರಿಸಬೇಕು. ಭಾರತ ಸಂಸ್ಕೃತಿಯಲ್ಲಿ ಹಬ್ಬಗಳಿಗೆ ತನ್ನದೇ ಆದ ಮಹತ್ವವಿದೆ. ಹಾಗಾಗಿ ನಮ್ಮ ಹಬ್ಬಗಳು ಸಂಭ್ರಮದಿಂದ ಆಚರಿಸಬೇಕೇ ಹೊರತು ಇನ್ನೊಬ್ಬರಿಗೆ ನಮ್ಮ ಸಂಭ್ರಮ ನೋವುಂಟು ಮಾಡುವುದು ಬೇಡ ಎಂದು ಮನವಿ ಮಾಡಿಕೊಂಡರು.

ABOUT THE AUTHOR

...view details