ಕರ್ನಾಟಕ

karnataka

ETV Bharat / state

ಸಿ.ಸಿ ಕ್ಯಾಮರಾ ಒಡೆದು, ಡಿವಿಆರ್ ಸಮೇತ ನಗ ನಾಣ್ಯ ದೋಚಿ ಕಳ್ಳರು ಪರಾರಿ - ಡಿವಿಆರ್ ಕಳ್ಳತನ ಸಾಗರ ಸುದ್ದಿ

ಕಳ್ಳರು ಕಳ್ಳತನ ಮಾಡಲು ಹೋದ ಮನೆಯ ಸಿ.ಸಿ ಕ್ಯಾಮರಾದ ದೃಶ್ಯಗಳನ್ನು ಸ್ಟೋರ್ ಮಾಡುವ ಡಿವಿಆರ್​​ನ್ನು ಸಹ ದೋಚಿ ಪರಾರಿಯಾಗಿರುವ ಘಟನೆ ಸಾಗರದಲ್ಲಿ ನಡೆದಿದೆ.

sagara
ಕಳ್ಳತನ

By

Published : Jan 5, 2020, 12:01 AM IST

ಶಿವಮೊಗ್ಗ:ಕಳ್ಳರು ಕಳ್ಳತನ ಮಾಡುವಾಗ ನಾಣ್ಯ, ಬಟ್ಟೆ‌ ಸೇರಿದಂತೆ ಬೆಲೆ ಬಾಳುವ ವಸ್ತುಗಳನ್ನು ದೋಚಿ ಪರಾರಿಯಾಗುವುದು ಕಾಮನ್, ಆದ್ರೆ ಚಾಲಾಕಿ ಕಳ್ಳರು ಕಳ್ಳತನ ಮಾಡಲು ಹೋದ ಮನೆಯ ಸಿ.ಸಿ ಕ್ಯಾಮರಾದ ದೃಶ್ಯಗಳನ್ನು ಸ್ಟೋರ್ ಮಾಡುವ ಡಿವಿಆರ್​​ನ್ನು ಸಹ ದೋಚಿ ಪರಾರಿಯಾಗಿರುವ ಘಟನೆ ಸಾಗರದಲ್ಲಿ ನಡೆದಿದೆ.

ಸಾಗರ ಪಟ್ಟಣದ ಶಿವಮೊಗ್ಗ ರಸ್ತೆಯಲ್ಲಿ ಇಂದು ಬೆಳಗ್ಗಿನ ಜಾವ ಕಳ್ಳತನ ನಡೆಸಲಾಗಿದೆ. ಕಳ್ಳತನಕ್ಕೆ ಬಂದ ಕಳ್ಳರು ಮೊದಲು ಮನೆಯ ಮುಂದಿನ ಹಾಗೂ ಒಳಗಿನ ಎಲ್ಲಾ ಸಿ.ಸಿ.ಕ್ಯಾಮರಾಗಳ ವೈಯರ್​ಗಳನ್ನು ಕಟ್ ಮಾಡಿದ್ದಾರೆ. ನಂತರ ಮನೆ ಒಳಗೆ ನುಗ್ಗಿ, ಮನೆಯಲ್ಲಿ ಹಣ ಹಾಗೂ ಬೆಲೆ ಬಾಳುವ ವಸ್ತುಗಳನ್ನು ಕದ್ದು ಪರಾರಿಯಾಗುವಾಗ ಸಿ.ಸಿ.ಕ್ಯಾಮರಾದ ಡಿವಿಆರ್​​ನ್ನು ಕೂಡ ಕದ್ದು ಪರಾರಿಯಾಗಿದ್ದಾರೆ.

ಇದು ಸಾಗರ ಪಟ್ಟಣದ ಹಮೀದ್ ಎಂಬುವವರಿಗೆ ಸೇರಿದ ಮನೆಯಾಗಿದ್ದು, ಈ ಹಿಂದೆ ಇದೆ ಮನೆಯಲ್ಲಿ ಎರಡು ಬಾರಿ ಕಳ್ಳತನ ನಡೆದಿತ್ತು. ಮೂರನೇ ಬಾರಿ ಇದೇ ಮನೆ ಟಾರ್ಗೆಟ್ ಮಾಡಿರುವುದು ವಿಶೇಷ. ಸ್ಥಳಕ್ಕೆ ಶ್ವಾನ ಹಾಗೂ ಬೆರಳಚ್ಚು ತಂಡ ಭೇಟಿ ನೀಡಿ ಪರಿಶೀಲಿಸಿದೆ. ಇನ್ನು ಕಳ್ಳತನದ ಕುರಿತು ಸಾಗರ ಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ABOUT THE AUTHOR

...view details