ಕರ್ನಾಟಕ

karnataka

ETV Bharat / state

ಫೋನ್ ಕದ್ದಾಲಿಕೆ ಸಿಬಿಐಗೆ ವಹಿಸಿರುವುದು ಸ್ವಾಗತಾರ್ಹ: ಕೆ.ಎಸ್. ಈಶ್ವರಪ್ಪ - Phone tapping

ಫೋನ್ ಕದ್ದಾಲಿಕೆ ತನಿಖೆಯನ್ನು ಸಿಬಿಐಗೆ ವಹಿಸಿರುವುದನ್ನು ಶಾಸಕ ಕೆ. ಎಸ್. ಈಶ್ವರಪ್ಪ ಸ್ವಾಗತಿಸಿದ್ದಾರೆ.

ಶಾಸಕ ಕೆ.ಎಸ್.ಈಶ್ವರಪ್ಪ ಮಾತನಾಡಿದರು

By

Published : Aug 18, 2019, 6:11 PM IST

ಶಿವಮೊಗ್ಗ: ಫೋನ್ ಕದ್ದಾಲಿಕೆ ವಿಚಾರವನ್ನು ಸಿಬಿಐಗೆ ವಹಿಸಿರುವುದರಿಂದ ಕದ್ದಾಲಿಕೆಯನ್ನು ಯಾರು ಮಾಡಿದ್ದಾರೆ. ಜೆಡಿಎಸ್​ನವರು ಮಾಡಿದ್ರಾ ಅಥವಾ ಕಾಂಗ್ರೆಸ್​ನವರು ಮಾಡಿದ್ರಾ ಅನ್ನೋದು ಸ್ಪಷ್ಟವಾಗಿ ತಿಳಿದು ಬರುತ್ತದೆ ಎಂದು ಮೂಲಕ ಶಾಸಕ ಕೆ.ಎಸ್. ಈಶ್ವರಪ್ಪ ಹೇಳಿದ್ದಾರೆ.

ನಗರದಲ್ಲಿ ಮಾತನಾಡಿದ ಅವರು, ಈಗಾಗಲೇ ಕದ್ದಾಲಿಕೆ ಪ್ರಕರಣವನ್ನು ಸಿಬಿಐಗೆ ವಹಿಸಿರುವುದರಿಂದ ಅದರಲ್ಲಿ ಯಾರೆಲ್ಲಾ ಭಾಗಿಯಾಗಿದ್ದಾರೆ ಎಂಬುದನ್ನು ನಾನು ಈಗ ಹೇಳುವುದು ಸರಿಯಲ್ಲ ಎಂದರು.

ಫೋನ್​ ಕದ್ದಾಲಿಕೆ ಪ್ರಕರಣ ಸಿಬಿಐ ತನಿಖೆಗೆ ವಹಿಸಿರುವುದನ್ನು ಸ್ವಾಗತಿಸಿದ ಈಶ್ವರಪ್ಪ

ಇನ್ನೂ ಸಚಿವ ಸಂಪುಟ ವಿಸ್ತರಣೆಯಲ್ಲಿ ನಿಮಗೆ ಯಾವ ಸಚಿವ ಸ್ಥಾನ ಸಿಗುತ್ತೆ ಎಂಬ ಪ್ರಶ್ನೆಗೆ ನಾನು ಬಿಜೆಪಿಯ ನಿಷ್ಠಾವಂತ ಕಾರ್ಯಕರ್ತ. ಪಕ್ಷ ಸಚಿವ ಸ್ಥಾನ ನಿರ್ವಹಿಸು ಅಂತ ಹೇಳಿದ್ರೆ ಮಾಡ್ತಿನಿ. ಇಲ್ಲವೇ ಪಕ್ಷ ಸಂಘಟನೆ ಮಾಡು ಅಂತಾ ಹೇಳಿದ್ರು ನಿರ್ವಹಿಸುತ್ತೇನೆ ಅಂದ್ರು.

ಹಾಗೆಯೇ ನಾಡಿದ್ದು ಸಚಿವ ಮಂಡಲ ವಿಸ್ತರಣೆ ಆಗಲಿರುವ ಹಿನ್ನೆಲೆಯಲ್ಲಿ ಈಶ್ವರಪ್ಪ ಅವರು ತಮ್ಮ ಪತ್ನಿ ಜಯಲಕ್ಷ್ಮಿ ಜೊತೆ ಬೆಂಗಳೂರಿಗೆ ಪ್ರಯಾಣ ಬೆಳೆಸಿದರು. ಜಿಲ್ಲೆಯಲ್ಲಿ ಪ್ರವಾಹ ಪರಿಸ್ಥಿತಿ ಇರುವ ಕಾರಣ ಕಾರ್ಯಕರ್ತರು, ಅಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಬೆಂಗಳೂರಿಗೆ ಬರದಂತೆ ಸೂಚನೆ ನೀಡಿದ್ದಾರೆ ಎನ್ನಲಾಗ್ತಿದೆ.

ABOUT THE AUTHOR

...view details