ಶಿವಮೊಗ್ಗ: ಪ್ರೇಮ್‌ಸಿಂಗ್ ಚಾಕು ಇರಿತ ಪ್ರಕರಣದ ಆರೋಪಿಗಳ ವಿರುದ್ಧ ಯುಎಪಿಎ 1967 ಕಾಯ್ದೆ ಅಡಿ ಪ್ರಕರಣ ದಾಖಲಿಸಲಾಗಿದೆ. ತನ್ವೀರ್ ಅಹಮ್ಮದ್(22), ನದೀಮ್ ಫೈಜಲ್(25), ಅಬ್ದುಲ್ ರೆಹಮಾನ್ (25) ಹಾಗೂ ಮೊಹಮ್ಮದ್ ಜಬೀ ಅಲಿಯಾಸ್ ಚರ್ಬಿ (30) ಎಂಬುವವರ ಮೇಲೆ ಕಾನೂನುಬಾಹಿರ ಚಟುವಟಿಕೆಗಳ (ತಡೆಗಟ್ಟುವಿಕೆ) ಕಾಯಿದೆ ಅನ್ವಯ ಪ್ರಕರಣ ದಾಖಲಿಸಿ, ತನಿಖೆ ಕೈಗೊಳ್ಳಲಾಗಿದೆ.
ಪ್ರೇಮ್‌ಸಿಂಗ್ ಚಾಕು ಇರಿತ ಪ್ರಕರಣ.. ಆರೋಪಿಗಳ ವಿರುದ್ಧ ಯುಎಪಿಎ ಅಡಿ ದೂರು ದಾಖಲು - ಈಟಿವಿ ಭಾರತ್ ಕನ್ನಡ
ಪ್ರೇಮ್‌ಸಿಂಗ್ ಚಾಕು ಇರಿತ ಪ್ರಕರಣದ ಆರೋಪಿಗಳ ವಿರುದ್ದ ಯುಎಪಿಎ ಕಾಯ್ದೆ ಅಡಿ ಪ್ರಕರಣ ದಾಖಲಾಗಿದೆ.
ಸ್ವಾತಂತ್ರ್ಯ ಅಮೃತ ಮಹೋತ್ಸವ ದಿನಾಚರಣೆಯಂದು ಸಾವರ್ಕರ್ ಫ್ಲೆಕ್ಸ್ ತೆರವು ಗಲಾಟೆ ಸಂದರ್ಭದಲ್ಲಿ ಗಾಂಧಿ ಬಜಾರ್‌ನಲ್ಲಿ ಪ್ರೇಮ್ ಸಿಂಗ್ ಎಂಬುವವರಿಗೆ ಚಾಕುವಿನಿಂದ ಇರಿದ ಪ್ರಕರಣದಲ್ಲಿ ನಾಲ್ವರು ಆರೋಪಿಗಳನ್ನು ಬಂಧಿಸಲಾಗಿದೆ. ಆರೋಪಿಗಳು ಮೂಲಭೂತವಾದದ ಪ್ರಭಾವಕ್ಕೆ ಒಳಗಾಗಿ ಕೃತ್ಯ ಎಸಗಿರುವುದು ಹಾಗೂ ತನಿಖೆಯಲ್ಲಿ ಯುಎಪಿಎ ಅಂಶಗಳು ಕಂಡು ಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ. ದೊಡ್ಡಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
(ಇದನ್ನೂ ಓದಿ: ಪ್ರೇಮ್ ಸಿಂಗ್ ಚಾಕು ಇರಿತ ಪ್ರಕರಣ: ಪ್ರಮುಖ ಆರೋಪಿ ಸೇರಿ ನಾಲ್ವರ ಬಂಧನ, ಎಸ್ಡಿಪಿಐ ಕಚೇರಿ ಮೇಲೆ ದಾಳಿ)