ಶಿವಮೊಗ್ಗ:ಟಿವಿಎಸ್ ಎಕ್ಸೆಲ್ಗೆ ಡಸ್ಟರ್ ಕಾರು ಡಿಕ್ಕಿ ಹೊಡೆದ ಪರಿಣಾಮ ಫಾರೆಸ್ಟ್ ವಾಚರ್ ಸ್ಥಳದಲ್ಲೆ ಸಾವನ್ನಪ್ಪಿರುವ ಘಟನೆ ಶಿವಮೊಗ್ಗ ತಾಲೂಕು ಆಯನೂರು ಸಮೀಪ ಚನ್ನಹಳ್ಳಿ ಕ್ರಾಸ್ ಬಳಿ ನಡೆದಿದೆ.
ಶಿವಮೊಗ್ಗ: ಕಾರು ಡಿಕ್ಕಿ ಹೊಡೆದು ಅರಣ್ಯ ವೀಕ್ಷಕ ಸಾವು - tvs accident
ಟಿವಿಎಸ್ ಎಕ್ಸಲ್ಗೆ ಡಸ್ಟರ್ ಕಾರು ಡಿಕ್ಕಿ ಹೊಡೆದ ಪರಿಣಾಮ ಫಾರೆಸ್ಟ್ ವಾಚರ್ ಸ್ಥಳದಲ್ಲೆ ಸಾವನ್ನಪ್ಪಿರುವ ಘಟನೆ ಆಯನೂರು ಸಮೀಪ ಚನ್ನಹಳ್ಳಿ ಕ್ರಾಸ್ ಬಳಿ ನಡೆದಿದೆ.
![ಶಿವಮೊಗ್ಗ: ಕಾರು ಡಿಕ್ಕಿ ಹೊಡೆದು ಅರಣ್ಯ ವೀಕ್ಷಕ ಸಾವು](https://etvbharatimages.akamaized.net/etvbharat/prod-images/768-512-4323703-thumbnail-3x2-chai.jpg)
ಕಾರು ಡಿಕ್ಕಿ
ಅಪಘಾತದಲ್ಲಿ ಲೋಕೇಶಪ್ಪ ಎಂಬ ಫಾರೆಸ್ಟ್ ವಾಚರ್ ಸ್ಥಳದಲ್ಲೆ ಮೃತ ಪಟ್ಟಿದ್ದಾರೆ. ಇನ್ನೂರ್ವನಿಗೆ ಗಂಭೀರ ಗಾಯಗಳಾಗಿವೆ. ಆಯನೂರಿನಿಂದ ಶಿವಮೊಗ್ಗ ಕಡೆ ಬರುವಾಗ ಕಾರಿನವ ಓವರ್ ಟೇಕ್ ಮಾಡಲು ಹೋಗಿ ಮೊಪೆಡ್ಗೆ ಡಿಕ್ಕಿ ಹೊಡೆದಿದ್ದಾನೆ. ಸ್ಥಳಕ್ಕೆ ಕುಂಸಿ ಪೊಲೀಸ್ ಠಾಣೆ ಪೊಲೀಸರು ಆಗಮಿಸಿ ಪರಿಶೀಲನೆ ನಡೆಸಿದ್ದಾರೆ.