ಕರ್ನಾಟಕ

karnataka

ETV Bharat / state

ಶಿವಮೊಗ್ಗ: ಬೆಂಕಿಯಿಂದ ಹೊತ್ತಿ ಉರಿದ ಕಾರು, ಮಾಲೀಕನ ಪತ್ತೆಗೆ ಪೊಲೀಸರ ಹುಡುಕಾಟ - car caught fire in shivamogga

ರಸ್ತೆ ಬದಿಯಲ್ಲಿ ನಿಲ್ಲಿಸಿದ್ದ ಡಸ್ಟರ್​ ಕಾರಿನಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಬೆಂಕಿ ಸಂಪೂರ್ಣ ಕಾರನ್ನು ಆವರಿಸಿದ್ದು, ಹೊತ್ತಿ ಉರಿದಿದೆ. ಕಾರಿನ ಮಾಲೀಕ ಯಾರು ಎಂದು ತಿಳಿದು ಬಂದಿಲ್ಲ.

renault-duster-caught-fire-on-shivamogga
ಹೂತ್ತಿ ಉರಿದ ಡಸ್ಟರ್ ಕಾರು

By

Published : Dec 16, 2022, 11:54 AM IST

Updated : Dec 16, 2022, 1:03 PM IST

ಹೂತ್ತಿ ಉರಿದ ಡಸ್ಟರ್ ಕಾರು

ಶಿವಮೊಗ್ಗ: ರಾತ್ರೋರಾತ್ರಿ ಡಸ್ಟರ್ ಕಾರು ಹೊತ್ತಿ ಉರಿದ ಘಟನೆ ಶಿವಮೊಗ್ಗ ತಾಲೂಕು ಬೀರನಕೆರೆ ಗ್ರಾಮದ ಬಳಿ ನಡೆದಿದೆ. ರಸ್ತೆ ಪಕ್ಕ ನಿಂತಿದ್ದ ಡಸ್ಟರ್ ಕಾರು ಬೆಂಕಿಗೆ ಆಹುತಿ ಆಗಿದೆ. ಶಾರ್ಟ್ ಸರ್ಕ್ಯೂಟ್ ಕಾರಣ ಬೆಂಕಿ ಹೊತ್ತಿಕೊಂಡಿದೆ ಎನ್ನಲಾಗಿದೆ. ಕಾರು ಯಾರದ್ದು ಎಂಬ ಮಾಹಿತಿ ಇನ್ನೂ ಲಭ್ಯವಾಗಿಲ್ಲ.

ಕಾರಿಗೆ ಬೆಂಕಿ ಬಿದ್ದಿದೆ ಎಂಬ ಮಾಹಿತಿ ಮೇರೆಗೆ ಶಿವಮೊಗ್ಗ ಗ್ರಾಮಾಂತರ ಪೊಲೀಸರು ಅಗ್ನಿ ಶಾಮಕ ದಳವನ್ನು ಕರೆಯಿಸಿ ಬೆಂಕಿ ನಂದಿಸಿದ್ದಾರೆ. ಕಾರಿನಲ್ಲಿ ಯಾರು ಇರಲಿಲ್ಲ ಎಂಬ ಮಾಹಿತಿ ಲಭ್ಯವಾಗಿದೆ. ವಾಹನದ ಮಾಲೀಕರನ್ನು ಪತ್ತೆ ಹಚ್ಚುವ ಕಾರ್ಯವನ್ನು ಪೊಲೀಸ್ ಇಲಾಖೆ ನಡೆಸಿದೆ. ಕೆಲ ಸ್ಥಳೀಯರ ಪ್ರಕಾರ ಕಾರಿಗೆ ಬೆಂಕಿ ಕಾಣಿಸಿಕೊಂಡ ಬೆನ್ನಲ್ಲೇ ಕಾರಿನಲ್ಲಿದ್ದ ಇಬ್ಬರು ಹೊರಗಿಳಿದು ಹೋಗಿದ್ದಾರೆ ಎನ್ನಲಾಗಿದೆ.

ಇದನ್ನೂ ಓದಿ:ಅಗ್ನಿ ಅವಘಡ: ಸಂಪೂರ್ಣ ಹೊತ್ತಿ ಉರಿದ ಕಾರು, ಡ್ರೈವರ್​​ ಪಾರು!

Last Updated : Dec 16, 2022, 1:03 PM IST

ABOUT THE AUTHOR

...view details