ಶಿವಮೊಗ್ಗ:ಚಲಿಸುತ್ತಿದ್ದ ಕಾರೊಂದು ಹೊತ್ತಿ ಉರಿದ ಘಟನೆ ಸಾಗರ ಸಮೀಪ ಬಳಸಗೋಡಿನಲ್ಲಿ ನಡೆದಿದೆ.
ಶಾರ್ಟ್ ಸರ್ಕ್ಯೂಟ್ನಿಂದ ಟಾಟಾ ಇಂಡಿಗೋ ಧಗಧಗ - ಶಿವಮೊಗ್ಗ ಸುದ್ದಿ
ಶಿವಮೊಗ್ಗದಿಂದ ಸಾಗರದ ಕಡೆಗೆ ಹೊರಟಿತ್ತು ಎನ್ನಲಾದ ಟಾಟಾ ಇಂಡಿಗೋ ಕಾರ್ ಸಂಪೂರ್ಣ ಸುಟ್ಟು ಹೋದ ಘಟನೆ ಬೆಳಗ್ಗೆ ಜರುಗಿದೆ. ಕಾರ್ ಮಾಲೀಕರು ಯಾರು, ಬೆಂಕಿ ಹೊತ್ತಿಕೊಳ್ಳಲು ಕಾರಣ ಏನು ಎಂಬ ಮಾಹಿತಿಗೆ ಪೊಲೀಸರು ತನಿಖೆ ಆರಂಭಿಸಿದ್ದಾರೆ.
![ಶಾರ್ಟ್ ಸರ್ಕ್ಯೂಟ್ನಿಂದ ಟಾಟಾ ಇಂಡಿಗೋ ಧಗಧಗ](https://etvbharatimages.akamaized.net/etvbharat/prod-images/768-512-4005969-thumbnail-3x2-svmg.jpg)
ಸುಟ್ಟು ಭಸ್ಮವಾದ ಇಂಡಿಗೋ ಕಾರ್
ಗುರುವಾರ ಬೆಳಗ್ಗೆ ಈ ಘಟನೆ ಸಂಭವಿಸಿದೆ ಎನ್ನಲಾಗಿದೆ. ಶಿವಮೊಗ್ಗದಿಂದ ಸಾಗರ ಕಡೆಗೆ ಹೊರಟಿದ್ದ, ಟಾಟಾ ಇಂಡಿಗೋ ಕಾರು ಸಂಪೂರ್ಣ ಸುಟ್ಟು ಕರಕಲಾಗಿದೆ. ಶಾರ್ಟ್ ಸರ್ಕ್ಯೂಟ್ನಿಂದ ಬೆಂಕಿ ಹೊತ್ತಿಕೊಂಡಿರಬಹುದು ಎನ್ನಲಾಗುತ್ತಿದೆ. ಇದುವರೆಗೂ ಕಾರ್ ಮಾಲೀಕರು ಯಾರು ಎಂಬ ಮಾಹಿತಿ ತಿಳಿದುಬಂದಿಲ್ಲ. ಸಾಗರ ಗ್ರಾಮಾಂತರ ಪೊಲೀಸರು ತನಿಖೆ ಪ್ರಾರಂಭಿಸಿದ್ದಾರೆ.