ಶಿವಮೊಗ್ಗ: ಕಾರು ಡಿಕ್ಕಿ ಹೊಡೆದ ಪರಿಣಾಮ ಪೊಲೀಸ್ ಜೀಪ್ ಪಲ್ಟಿಯಾಗಿರುವ ಘಟನೆ ಶಿವಮೊಗ್ಗ ನಗರದಲ್ಲಿ ನಡೆದಿದೆ.
ಕಾರು ಡಿಕ್ಕಿ: ಪೊಲೀಸ್ ಜೀಪ್ ಪಲ್ಟಿ... ಪಿಎಸ್ಐ, ಚಾಲಕನಿಗೆ ಗಾಯ - ಶಿವಮೊಗ್ಗ ಪೊಲೀಸ್ ಜೀಪ್ ಪಲ್ಟಿ
ಪಿಎಸ್ಐ ಜೀಪ್ನಲ್ಲಿ ಗಸ್ತಿಗೆ ಬರುತ್ತಿರುವಾಗ ಕಾರು ಡಿಕ್ಕಿ ಹೊಡೆದಿದೆ. ಪರಿಣಾಮ ಪೊಲೀಸ್ ಜೀಪ್ ಪಲ್ಟಿಯಾಗಿರುವ ಘಟನೆ ಶಿವಮೊಗ್ಗದಲ್ಲಿ ನಡೆದಿದೆ.
ಪೊಲೀಸ್ ಜೀಪ್
ಶಿವಮೊಗ್ಗದ ಗೋಪಾಲಗೌಡ ಬಡಾವಣೆಯಲ್ಲಿ ತುಂಗಾನಗರದ ಪಿಎಸ್ಐ ತಿರುಮಲೇಶ್ ಜೀಪ್ನಲ್ಲಿ ಗಸ್ತಿಗೆ ಬರುತ್ತಿರುವಾಗ ಎದುರಿನಿಂದ ಬಂದ ಕಾರು ಡಿಕ್ಕಿ ಹೊಡೆದಿದೆ. ಪರಿಣಾಮ ಜೀಪ್ ಪಲ್ಟಿಯಾಗಿದ್ದು, ಮುಂಭಾಗದ ಗ್ಲಾಸ್ ಒಡೆದಿದೆ.
ಇನ್ನು ಪಿಎಸ್ಐ ತಿರುಮಲೇಶ್ ಹಾಗೂ ಚಾಲಕರಿಬ್ಬರಿಗೂ ಸಣ್ಣಪುಟ್ಟ ಗಾಯಗಳಾಗಿದ್ದು, ನಗರದ ಮೆಗ್ಗಾನ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಕೊಂಡಿದ್ದಾರೆ.