ಕರ್ನಾಟಕ

karnataka

ETV Bharat / state

ಕಾರು ಅಪಘಾತ: ಗಾಯಾಳುಗಳನ್ನು ಸ್ವತಃ ಆಸ್ಪತ್ರೆಗೆ ರವಾನಿಸಿದ ಶಾಸಕ ಆರಗ ಜ್ಞಾನೇಂದ್ರ - ಗಾಯಾಳುಗಳನ್ನು ಆಸ್ಪತ್ರೆಗೆ ರವಾನಿಸಿದ ಆರಗ ಜ್ಞಾನೇಂದ್ರ

ದೇವಂಗಿ ಗ್ರಾಮದ ಬಳಿ ಶಾಸಕ ಆರಗ ಜ್ಞಾನೇಂದ್ರ ತೆರಳುತ್ತಿರುವ ವೇಳೆ ಕಾರು ಅಪಘಾತ ಸಂಭವಿಸಿತ್ತು. ಇದನ್ನು ಕಂಡ ಶಾಸಕರು ಅವರ ಬೆಂಬಲಿಗರ ಸಹಾಯದಿಂದ ತಮ್ಮ ಕಾರಿನಲ್ಲೇ ತೀರ್ಥಹಳ್ಳಿ ತಾಲೂಕು ಆಸ್ಪತ್ರೆಗೆ ಗಾಯಾಳುಗಳನ್ನು ದಾಖಲಿಸಿದ್ದಾರೆ.

ಗಾಯಾಳುಗಳನ್ನು ಆಸ್ಪತ್ರೆಗೆ ಕರೆದೊಯ್ಯುತ್ತಿರುವ ಶಾಸಕರು

By

Published : Oct 21, 2019, 11:36 AM IST

ಶಿವಮೊಗ್ಗ:ಅಪಘಾತದಲ್ಲಿ ಗಾಯಗೊಂಡವರನ್ನು ತೀರ್ಥಹಳ್ಳಿ ಶಾಸಕ ಆರಗ ಜ್ಞಾನೇಂದ್ರ ತಮ್ಮ ಬೆಂಬಲಿಗರ ಸಹಾಯದಿಂದ ಆಸ್ಪತ್ರೆಗೆ ರವಾನೆ ಮಾಡಿದರು. ಈ ವಿಡಿಯೋ ಈಗ ವೈರಲ್ ಆಗಿದೆ.

ತೀರ್ಥಹಳ್ಳಿ ತಾಲೂಕು ದೇವಂಗಿ ಗ್ರಾಮದ ಬಳಿ ಶಾಸಕರು ತೆರಳುತ್ತಿರುವ ವೇಳೆ ಎರಡು ಕಾರುಗಳ ನಡುವೆ ಡಿಕ್ಕಿ ಸಂಭವಿಸಿತ್ತು. ಈ ಅಪಘಾತದಲ್ಲಿ ಎಂಟು ಮಂದಿ ಗಾಯಗೊಂಡಿದ್ದರು, ತಕ್ಷಣ ಶಾಸಕರು ಕಾರು ನಿಲ್ಲಿಸಿ, ಗಾಯಳುಗಳನ್ನು ತೀರ್ಥಹಳ್ಳಿ ತಾಲೂಕು ಆಸ್ಪತ್ರೆಗೆ ರವಾನೆ ಮಾಡಿದರು.

ಗಾಯಾಳುಗಳನ್ನು ಆಸ್ಪತ್ರೆಗೆ ಕರೆದೊಯ್ಯುತ್ತಿರುವ ಶಾಸಕರು

ತೀವ್ರ ಅಸ್ವಸ್ಥರಾದ ಇಬ್ಬರನ್ನು ತೀರ್ಥಹಳ್ಳಿಯಿಂದ ಮಣಿಪಾಲದ ಆಸ್ಪತ್ರೆಗೆ ರವಾನೆ ಮಾಡಲಾಗಿದೆ.‌ ಶಾಸಕರು ತಮ್ಮ ಬೆಂಬಲಿಗರ ಸಹಾಯದಿಂದ ಗಾಯಳುಗಳನ್ನು ಆಸ್ಪತ್ರೆಗೆ ಕಳುಹಿಸಿದ್ದಕ್ಕೆ ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ABOUT THE AUTHOR

...view details