ಕರ್ನಾಟಕ

karnataka

ETV Bharat / state

ವಿಶ್ವ ಕ್ಯಾನ್ಸರ್​ ದಿನಾಚರಣೆ: ವೈದ್ಯರಿಂದ ಬೃಹತ್ ಜಾಗೃತಿ​ ಜಾಥಾ - ಶಿವಮೊಗ್ಗ ವಿಶ್ವ ಕ್ಯಾನ್ಸರ್ ದಿನ ಸುದ್ದಿ

ವಿಶ್ವ ಕ್ಯಾನ್ಸರ್ ದಿನದ ಅಂಗವಾಗಿ ಕ್ಯಾನ್ಸರ್ ಬಗ್ಗೆ ಸಾರ್ವಜನಿಕರಲ್ಲಿ ಜಾಗೃತಿ ಹಾಗೂ ಕ್ಯಾನ್ಸರ್​ಕಾರಕ ವಸ್ತುಗಳನ್ನು ನಿಷೇಧಿಸುವ ಬಗ್ಗೆ ಸಿಮ್ಸ್​​ನ ಕಿವಿ, ಮೂಗು ಮತ್ತು ಗಂಟಲು ತಜ್ಞರ ಸಂಘದ ವತಿಯಿಂದ ನಗರದಲ್ಲಿ ಬೃಹತ್ ಜಾಗೃತಿ ಜಾಥಾ ನಡೆಸಲಾಯಿತು.

cancer-day-huge-procession-in-shivamogga-doctor
ವಿಶ್ವ ಕ್ಯಾನ್ಸರ್​ ದಿನಾಚರಣೆ, ವೈದ್ಯರಿಂದ ಬೃಹತ್​ ಜಾಥಾ

By

Published : Feb 4, 2020, 1:29 PM IST

ಶಿವಮೊಗ್ಗ: ವಿಶ್ವ ಕ್ಯಾನ್ಸರ್ ದಿನದ ಅಂಗವಾಗಿ ಕ್ಯಾನ್ಸರ್ ಬಗ್ಗೆ ಸಾರ್ವಜನಿಕರಲ್ಲಿ ಜಾಗೃತಿ ಹಾಗೂ ಕ್ಯಾನ್ಸರ್​ಕಾರಕ ವಸ್ತುಗಳನ್ನು ನಿಷೇಧಿಸುವ ಬಗ್ಗೆ ಸಿಮ್ಸ್​​ನ ಕಿವಿ, ಮೂಗು ಮತ್ತು ಗಂಟಲು ತಜ್ಞರ ಸಂಘದ ವತಿಯಿಂದ ನಗರದಲ್ಲಿ ಬೃಹತ್ ಜಾಗೃತಿ ಜಾಥಾ ನಡೆಸಲಾಯಿತು.

ನಗರದ ಐಎಂಎ ಹಾಲ್​​ನಿಂದ ಪ್ರಾರಂಭವಾದ ಜಾಥಾ ನಗರದ ಟಿಎಸ್​ಬಿ ವೃತ್ತ, ಬಾಲರಾಜ್ ಅರಸ್ ರಸ್ತೆ, ಮಹಾವೀರ ವೃತ್ತದ ಮೂಲಕ ಜಿಲ್ಲಾಧಿಕಾರಿ ಕಚೇರಿ ತಲುಪಿ, ದಿನೇ ದಿನೆ ಕ್ಯಾನ್ಸರ್​ನಿಂದ ಬಳಲುವವರ ಸಂಖ್ಯೆ ಹೆಚ್ಚಾಗುತ್ತಿದೆ. ವಿಶ್ವ ಆರೋಗ್ಯ ಸಂಸ್ಥೆಯವರ ಅಂಕಿ-ಅಂಶಗಳ ಪ್ರಕಾರ ವಿಶ್ವದ್ಯಾಂತ ವಾರ್ಷಿಕ ಸುಮಾರು 1 ಕೋಟಿಯಷ್ಟು ಜನ ಸಾವನ್ನಪ್ಪುತ್ತಿದ್ದಾರೆ.

ಭಾರತದಂತಹ ದೇಶದಲ್ಲಿ ಪ್ರತಿ ವರ್ಷ 10 ಲಕ್ಷಕ್ಕಿಂತ ಹೆಚ್ಚು ಜನ ಕ್ಯಾನ್ಸರ್​​​ಗೆ ತುತ್ತಾಗುತ್ತಿದ್ದಾರೆ. ಇದರಲ್ಲಿ ಸುಮಾರು 5 ಲಕ್ಷದಷ್ಟು ಜನ ಸಾವನ್ನಪ್ಪುತ್ತಿದ್ದಾರೆ. ವೈಜ್ಞಾನಿಕ ಅಂಕಿ-ಅಂಶಗಳು ಮತ್ತು ಸಂಶೋಧನೆಗಳ ಪ್ರಕಾರ ಮೂರನೇ ಒಂದರಷ್ಟು ಜನರನ್ನು ಸಂಪೂರ್ಣವಾಗಿ ಗುಣಪಡಿಸಬಹುದಾಗಿದೆ ಎಂದು ರಾಜ್ಯ ಕಿವಿ, ಮೂಗು ಮತ್ತು ಗಂಟಲು ವೈದ್ಯರ ಸಂಘದ ಅಧ್ಯಕ್ಷ ಡಾ. ಕೆ.ಎಸ್.ಗಂಗಾಧರ್ ತಿಳಿಸಿದರು.

ವಿಶ್ವ ಕ್ಯಾನ್ಸರ್​ ದಿನಾಚರಣೆ: ವೈದ್ಯರಿಂದ ಬೃಹತ್​ ಜಾಥಾ

ಇದರ ಜೊತೆ ಜಾಥಾದಲ್ಲಿ ವಿವಿಧ ಬೇಡಿಕೆಗಳನ್ನು ಮುಂದಿಡಲಾಯಿತು. ಕ್ಯಾನ್ಸರ್ ರೋಗವನ್ನು ಪ್ರಾರಂಭಿಕವಾಗಿ ಕಂಡು ಹಿಡಿಯುವ ಸಲುವಾಗಿ ವ್ಯಾಪಕವಾಗಿ ಕ್ಯಾನ್ಸರ್ ತಪಾಸಣಾ ಶಿಬಿರಗಳನ್ನು ಜಿಲ್ಲೆಯಲ್ಲಿ ನಡೆಸಬೇಕು. ಶಿವಮೊಗ್ಗದ ಸಿಮ್ಸ್ ಮೆಡಿಕಲ್‌ ಕಾಲೇಜಿನಲ್ಲಿ ಕ್ಯಾನ್ಸರ್ ವಿಕಿರಣ ಚಿಕಿತ್ಸೆ ಒಳಗೊಂಡ ಕ್ಯಾನ್ಸರ್ ಕೇಂದ್ರವನ್ನು ಪ್ರಾರಂಭಿಸುವಂತೆ ಸರ್ಕಾರಕ್ಕೆ ಒತ್ತಾಯಿಸಲಾಯಿತು.

ABOUT THE AUTHOR

...view details