ಕರ್ನಾಟಕ

karnataka

ETV Bharat / state

ಹೆಚ್ಚಿನ ಬೆಲೆಗೆ ತರಕಾರಿ ಮಾರಿದರೆ ವಾಹನದ ಲೈಸನ್ಸ್ ರದ್ದು: ಶಾಸಕ ಕುಮಾರ್​ ಬಂಗಾರಪ್ಪ - ಶಾಸಕ ಕುಮಾರ ಬಂಗಾರಪ್ಪ ಲೆಟೆಸ್ಟ್​ ನ್ಯೂಸ್​

ಹಳ್ಳಿಗಳಲ್ಲಿ ವಾಹನದ ಮೂಲಕ ತರಕಾರಿ ಮಾರಾಟ ಮಾಡುತ್ತಿವವರು ನಿರ್ದಿಷ್ಟ ಬೆಲೆಗಿಂತ ಹೆಚ್ಚಿನ ಬೆಲೆಗೆ ತರಕಾರಿ ಮಾರಾಟ ಮಾಡದಂತೆ ಶಾಸಕ ಕುಮಾರ್ ಬಂಗಾರಪ್ಪ ಸೂಚನೆ ನೀಡಿದ್ದಾರೆ.

MLA Kumara Bangarappa
ನಿಗದಿತ ದರಕ್ಕಿಂತ ಹೆಚ್ಚಿನ ಬೆಲೆಗೆ ತರಕಾರಿ ಮಾರಿದರೆ ಲೈಸೆನ್ಸ್ ರದ್ದು: ಶಾಸಕ ಕುಮಾರ ಬಂಗಾರಪ್ಪ

By

Published : Apr 13, 2020, 11:27 PM IST

ಶಿವಮೊಗ್ಗ: ಲಾಕ್​ಡೌನ್​ ಹಿನ್ನೆಲೆ ಹಳ್ಳಿಗಳಿಗೆ ತರಕಾರಿಯನ್ನು ವಾಹನಗಳಲ್ಲಿ ತಂದು ಮಾರಾಟ ಮಾಡಲಾಗುತ್ತಿದೆ. ಆದರೆ ಕೆಲವೆಡೆ ಹೆಚ್ಚಿನ ಬೆಲೆಗೆ ತರಕಾರಿ ಮಾರಾಟ ಮಾಡಲಾಗುತ್ತಿದೆ ಎಂಬ ಆರೋಪ ಕೇಳಿ ಬಂದಿದೆ.

ಹಾಗಾಗಿ ಸೊರಬದ ಶಾಸಕ ಕುಮಾರ್ ಬಂಗಾರಪ್ಪ ಇಂದು ಹಳ್ಳಿಗಳಲ್ಲಿ ವಾಹನದ ಮೂಲಕ ತರಕಾರಿ ಮಾರಾಟ ಮಾಡುತ್ತಿದ್ದವರಿಗೆ ನಿರ್ದಿಷ್ಟ ಬೆಲೆಗಿಂತ ಹೆಚ್ಚಿನ ಬೆಲೆಗೆ ತರಕಾರಿ ಮಾರಾಟ ಮಾಡದಂತೆ ಸೂಚಿಸಿದರು.

ಅಲ್ಲದೇ ಹೆಚ್ಚಿನ ಬೆಲೆಗೆ ಮಾರಾಟ ಮಾಡಿದ್ದು ತಿಳಿದು ಬಂದರೆ ಅವರ ವಾಹನದ ಲೈಸನ್ಸ್ ರದ್ದು ಮಾಡಲಾಗುವುದು ಎಂದು ಎಚ್ಚರಿಕೆ ನೀಡಿದರು.

ABOUT THE AUTHOR

...view details