ಶಿವಮೊಗ್ಗ: ಮಣ್ಣಿನ ಮಗ, ರೈತ ನಾಯಕ ಎನ್ನೋ ಟ್ಯಾಗ್ಗಳನ್ನ ಇಟ್ಟುಕೊಂಡಿರುವ ದೇವೇಗೌಡರು ರೈತರು ಆತ್ಮಹತ್ಯೆ ಮಾಡಿಕೊಂಡಾಗ ಅಥವಾ ಯೋಧರು ವೀರ ಮರಣವನ್ನಪ್ಪಿದಾಗ ಯಾಕೆ ಕಣ್ಣೀರು ಹಾಕಲಿಲ್ಲ ಎಂದು ಶಾಸಕ ಸಿ.ಟಿ.ರವಿ ಪ್ರಶ್ನೆ ಮಾಡಿದ್ದಾರೆ.
ದೇವೇಗೌಡರ ಕಣ್ಣೀರಿಗೆ ಸಿ.ಟಿ.ರವಿ ಟಾಂಗ್
ದೇವೇಗೌಡರು ಕಣ್ಣೀರಿಟ್ಟ ಹಿನ್ನೆಲೆ ಅದನ್ನು ಶಾಸಕ ಸಿ.ಟಿ.ರವಿ ವ್ಯಂಗ್ಯವಾಗಿ ಪ್ರಶ್ನೆ ಮಾಡಿದ್ದಾರೆ.
ತೀರ್ಥಹಳ್ಳಿಯಲ್ಲಿ ಮಾತನಾಡಿದ ಅವರು, ಇದು ಪ್ರಜಾಪ್ರಭುತ್ವದ ಅಪಹಾಸ್ಯವಾಗಿದೆ. ಜನರು ಸಂಕಷ್ಟದಲ್ಲಿದ್ದಾಗ ಕಣ್ಣೀರು ಬಾರದೆ, ಈಗ ತಮ್ಮ ಮಕ್ಕಳು, ಮೊಮ್ಮಕ್ಕಳು ಚುನಾವಣೆಗೆ ನಿಂತಾಗ ಕಣ್ಣೀರು ಹಾಕುತ್ತಿದ್ದಾರೆ.
ಇದೂಂದು ಅಪಹಾಸ್ಯ. ಗೌಡರ ಫ್ಯಾಮಿಲಿಯ ಹೈಡ್ರಾಮಾ ಎಂದು ಲೇವಡಿ ಮಾಡಿದರು. ದೇವೇಗೌಡರ ಕುಟುಂಬದ ಕಣ್ಣೀರಿಗೆ ಜನ ಸರಿಯಾದ ಉತ್ತರ ನೀಡುತ್ತಾರೆ. ಈ ರೀತಿಯ ಕಣ್ಣೀರು, ನಟನೆಗಳೆಲ್ಲಾ ಮೊಮ್ಮಕ್ಕಳ ಭವಿಷ್ಯಕ್ಕೋ, ಜನರ ಬಗ್ಗೆ ಚಿಂತನೆಗೋ ಎಂದು ದೇವೇಗೌಡರು ಸ್ಪಷ್ಟಪಡಿಸಬೇಕು ಎಂದರು.
ದೇಶ ಗೆಲ್ಲಬೇಕಾದ್ರೆ ಮೋದಿಯವರೇ ಗೆಲ್ಲಬೇಕು. ಅವರು ಮತ್ತೊಮ್ಮೆ ಪ್ರಧಾನಮಂತ್ರಿಯಾಗಬೇಕು ಎಂದರು. ಇನ್ನು ರಾಜ್ಯದಲ್ಲಿ 1998ರಿಂದ ಬಿಜೆಪಿ ಹೆಚ್ಚಿನ ಸಂಸದ ಸ್ಥಾನ ಗೆಲ್ಲುತ್ತಾ ಬಂದಿದೆ. ಈ ಬಾರಿ ಈ ಅತಿರಥ ಮಹಾರಥರು ಸೋತು ಮನೆಗೆ ಹೋಗ್ತಾರೆ. ಜೊತೆಗೆ 28ಕ್ಕೆ 28 ಸ್ಥಾನ ಬಿಜೆಪಿಯೇ ಗೆಲ್ಲುವ ವಿಶ್ವಾಸವಿದೆ ಎಂದರು.