ಕರ್ನಾಟಕ

karnataka

ETV Bharat / state

ವಿಐಎಸ್ಎಲ್ ಎಂಬ ಬೆಂಕಿ ಉಂಡೆ ನನ್ನ ಕೈಗೆ ಬಂದಿದೆ : ಬಿ.ವೈ.ರಾಘವೇಂದ್ರ

ವಿಐಎಸ್ಎಲ್ ಕಾರ್ಖಾನೆ ನಷ್ಟದಲ್ಲಿದೆ. ಬಂಡವಾಳ ಹೂಡಿಕೆ ಹಿಂತೆಗೆದ ಪಟ್ಟಿಯಲ್ಲಿದೆ. ಕಾರ್ಖಾನೆ ಮಾರಾಟದ ಕುರಿತು ನೀತಿ ಆಯೋಗದಲ್ಲಿ ತೀರ್ಮಾನವಾಗಿದೆ. ನಾಲ್ವಡಿ ಕೃಷ್ಣರಾಜ ಒಡೆಯರ್ ಕನಸು ಹಾಗೂ ವಿಶ್ವೇಶ್ವರಯ್ಯ ಅವರ ಕಲ್ಪನೆಯಲ್ಲಿ ರಚನೆಯಾಗಿದ್ದ ಭದ್ರಾವತಿಯ ವಿಐಎಸ್ಎಲ್ ಕಾರ್ಖಾನೆಗೆ, ಕೊನೆ ಮೂಳೆ ಹೊಡೆಯುವ ಯತ್ನ ಪ್ರಾರಂಭವಾಗಿದೆ ಎಂದು ಸಂಸದ ಬಿ.ವೈ.ರಾಘವೇಂದ್ರ ಹೇಳಿದರು.

ಬಿ.ವೈ.ರಾಘವೇಂದ್ರ

By

Published : Jul 6, 2019, 6:08 PM IST

ಶಿವಮೊಗ್ಗ : ವಿಐಎಸ್ಎಲ್ ಎಂಬ ಬೆಂಕಿ ಉಂಡೆ ಈಗ ನನ್ನ ಕೈಗೆ ಬಂದಿದೆ. ಈಗಲೂ ಸಹ ವಿಐಎಸ್ಎಲ್ ಉಳಿವಿಗಾಗಿ ಹಾಗೂ ಅಲ್ಲಿನ ಕಾರ್ಮಿಕರಿಗೆ ಕೆಲಸ ಸಿಗುವ ನಿಟ್ಟಿನಲ್ಲಿ ಗಮನ ಹರಿಸಲಾಗುವುದು ಎಂದು ಸಂಸದ ಬಿ.ವೈ.ರಾಘವೇಂದ್ರ ಹೇಳಿದರು.

ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಮಾತನಾಡಿದ ಅವರು, ಕಾರ್ಖಾನೆಯು ನಷ್ಟದಲ್ಲಿದೆ. ಬಂಡವಾಳ ಹೂಡಿಕೆ ಹಿಂತೆಗೆದ ಪಟ್ಟಿಯಲ್ಲಿದೆ. ಕಾರ್ಖಾನೆಯ ಮಾರಾಟದ ಕುರಿತು ನೀತಿ ಆಯೋಗದಲ್ಲಿ ತೀರ್ಮಾನವಾಗಿದೆ. ನಾಲ್ವಡಿ ಕೃಷ್ಣರಾಜ ಒಡೆಯರ್ ಕನಸು ಹಾಗೂ ವಿಶ್ವೇಶ್ವರಯ್ಯ ಅವರ ಕಲ್ಪನೆಯಲ್ಲಿ ರಚನೆಯಾಗಿದ್ದ ಭದ್ರಾವತಿಯ ವಿಐಎಸ್ಎಲ್ ಕಾರ್ಖಾನೆಗೆ, ಕೊನೆ ಮೂಳೆ ಹೊಡೆಯುವ ಯತ್ನ ಪ್ರಾರಂಭವಾಗಿದೆ. ಈಗಾಗಲೇ ಸೆಲ್​ನಿಂದ ವಿಐಎಸ್ಎಲ್ ಮಾರಾಟದ ಟೆಂಡರ್ ಕರೆಯಲಾಗಿದೆ.

ವಿಐಎಸ್ಎಲ್ ಎಂಬ ಬೆಂಕಿ ಉಂಡೆ ನನ್ನ ಕೈಗೆ ಬಂದಿದೆ : ಬಿ.ವೈ.ರಾಘವೇಂದ್ರ

ಈ ಹಿಂದೆ ಸಹ ಕಾರ್ಖಾನೆ ಮಾರಾಟದ ಕುರಿತು ಪ್ರಕ್ರಿಯೆ ಪಡೆದಿದ್ದು, ಆಗ ಟೆಂಡರ್​​ನಲ್ಲಿ ಮೂರು ಜನ ಭಾಗವಹಿಸಬೇಕಿತ್ತು. ಆದ್ರೆ, ಟೆಂಡರ್ ನಲ್ಲಿ ಒಬ್ಬನೇ ಭಾಗವಹಿಸಿದ್ದ ಕಾರಣ ಅಂದು ಟೆಂಡರ್ ರದ್ದಾಗಿತ್ತು. ಈಗ ಈ ಪ್ರಕ್ರಿಯೆಗೆ ಮತ್ತೆ ಜೀವ ಬಂದಿದೆ. ಈಗಲೂ ಬಿಜೆಪಿ ವಿಐಎಸ್ಎಲ್ ಉಳಿಸುವ ನಿಟ್ಟಿನಲ್ಲಿ ತನ್ನ ಹೋರಾಟ ಮುಂದುವರೆಸುತ್ತದೆ ಎಂದರು.

ಕಾರ್ಖಾನೆಯಲ್ಲಿ ನೂರಕ್ಕೂ ಹೆಚ್ಚು ಖಾಯಂ ನೌಕರರು , 1.600 ಕ್ಕೂ ಹೆಚ್ಚು ಗುತ್ತಿಗೆ ನೌಕರರರು ಇದ್ದಾರೆ. ಇವರಿಗೆ ಖಾಯಂ ಆಗಿ ಕೆಲಸ ಕೊಡಿಸುವ ನಿಟ್ಟಿನಲ್ಲಿ ತಮ್ಮ ಪ್ರಯತ್ನ ನಡೆಸಲಾಗುವುದು ಎಂದರು.

ABOUT THE AUTHOR

...view details