ಶಿವಮೊಗ್ಗ: ದೇಶದ ಪೌರತ್ವ ಕಾಯಿದೆಯ ವಿರುದ್ದ ಕಾಂಗ್ರೆಸ್ ಯುವ ಜನತೆಯನ್ನು ಪ್ರಚೋದನೆಗೆ ಒಳಪಡಿಸಿ ದೇಶದಲ್ಲಿ ಅಶಾಂತಿ ಸೃಷ್ಟಿಸಿ, ಅದರ ಲಾಭವನ್ನು ಪಡೆದುಕೊಳ್ಳುವ ಯತ್ನ ಮಾಡುತ್ತಿದೆ ಎಂದು ಸಂಸದ ಬಿ.ವೈ.ರಾಘವೇಂದ್ರ ಕಾಂಗ್ರೆಸ್ ವಿರುದ್ದ ವಾಗ್ದಾಳಿ ನಡೆಸಿದ್ದಾರೆ.
ರಾಜಕೀಯ ಲಾಭಕ್ಕೆ ಕಾಂಗ್ರೆಸ್ ಪೌರತ್ವ ವಿಧೇಯಕದಲ್ಲಿ ಗಲಭೆ ಸೃಷ್ಟಿಸಿಸುತ್ತಿದೆ: ಬಿ.ವೈ.ರಾಘವೆಂದ್ರ ಶಿವಮೊಗ್ಗ ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಮಾತನಾಡಿದ ಅವರು, ಪೌರತ್ವ ವಿಧೇಯಕವನ್ನು ಸಂಸತ್ನಲ್ಲಿ ಮಂಡಿಸಿ, ಅದನ್ನು ಕಾನೂನನ್ನಾಗಿ ಮಾಡಿ ಜಾರಿಗೆ ತಂದ ಮೇಲೆ ಅದನ್ನು ಎಲ್ಲಾರು ಒಪ್ಪಿಕೊಳ್ಳಬೇಕು. ಅದನ್ನು ಬಿಟ್ಟು ಕಾಂಗ್ರೆಸ್ ಸಿಎಎ ಕಾನೂನಿನ ವಿರುದ್ದ ಕಾಂಗ್ರೆಸ್ ಯುವಜನತೆಯನ್ನು ಎತ್ತಿ ಕಟ್ಟಿ, ದೇಶದಲ್ಲಿ ಅಶಾಂತಿ ಸೃಷ್ಟಿ ಮಾಡಲು ಯತ್ನಿಸುತ್ತಿದೆ.
ಸಂವಿಧಾನ ಬದ್ದವಾದ ವ್ಯವಸ್ಥೆಯಲ್ಲಿ ಯುವಕರನ್ನು ಚೂ ಬಿಡುವಂತಹ ಕೆಲ್ಸವನ್ನು ಕಾಂಗ್ರೆಸ್ ಹಾಗೂ ಎಡ ಪಕ್ಷಗಳು ಮಾಡುತ್ತಿವೆ. ಇದರಿಂದ ಈ ಸಂಧರ್ಭದಲ್ಲಿ ಯುವ ಜನತೆ ಪ್ರಚೋದನೆಗೆ ಒಳಗಾಗದೆ, ನಿಜವಾದ ಸಂಗತಿಯನ್ನು ಅರ್ಥ ಮಾಡಿ ಕೊಳ್ಳಬೇಕು ಎಂದು ವಿನಂತಿ ಮಾಡಿಕೊಂಡರು. ಸಿಎಎ ಬಗ್ಗೆ ಇರುವ ಗೊಂದಲವನ್ನು ನಿವಾರಿಸುವ ನಿಟ್ಟಿನಲ್ಲಿ ಕೆಲಸಗಳನ್ನು ನಾನು ಹಾಗೂ ನಮ್ಮ ಕಾರ್ಯಕರ್ತರು ಮಾಡುತ್ತೆವೆ ಎಂದರು.
ಸಿಎಎ ಬಗ್ಗೆ ದೇಶದ ಕೆಲ ರಾಜ್ಯಗಳಲ್ಲಿ ಗಲಾಟೆ- ದೊಂಬಿ ನಡೆಯುತ್ತಿದೆ. ಒಂದು ಶಾಂತವಾಗಿರುವಂತಹ ರಾಜ್ಯ ಹಾಗೂ ದೇಶವನ್ನು ವಿನಾಶದ ಹಂಚಿಗೆ ಕರೆದು ಕೊಂಡು ಹೋಗುವ ಪಟ್ಟಭದ್ರಾ ಹಿತಾಸಕ್ತಿಯವರು ಮಾಡುತ್ತಿದ್ದಾರೆ. ಪೊಲೀಸ್ ಇಲಾಖೆಯನ್ನು ಗುರಿಯನ್ನಾಗಿಸಿ ಕೊಂಡು ದಾಳಿ ಮಾಡುತ್ತಿದ್ದಾರೆ. ಕೆಲ ರಾಜಕೀಯಗಳು ತಮಗೆ ಬೇಡವಾದವರ ಮೇಲೆ ಹಲ್ಲೆ ನಡೆಸಲಾಗುತ್ತಿದೆ. ಅಲ್ಲದೆ, ಪಾಕಿಸ್ತಾನ, ಆಫ್ಘಾನಿಸ್ಥಾನಗಳಿಂದ ಬಂದ ಅಲ್ಲಿನ ಅಲ್ಪ ಸಂಖ್ಯಾತರಿಗೆ ದೇಶದ ಪೌರತ್ವ ನೀಡುವುದು ಕಾನೂನಿನ ಉದ್ದೇಶ ವಾಗಿದೆ ಎಂದರು. ಯುವ ಜನತೆ ಕಿಡಿಗೇಡಿಗಳ ಮಾತಿಗೆ ಬೆಲೆ ನೀಡಬಾರದು ಎಂದು ಅವರು ವಿನಂತಿ ಮಾಡಿ ಕೊಂಡರು.